ಜೈನ್ ಇಡ್ಲಿ ಕೆಫೆ, ದಾಂಡೇಲಿ
ನಮಸ್ಕಾರ
ದಯವಿಟ್ಟು ಓದಿ, ಪ್ರೊತ್ಸಾಹಿಸಿ, ಆಶೀರ್ವದಿಸಿ
ದಯವಿಟ್ಟು ಓದಿ, ಪ್ರೊತ್ಸಾಹಿಸಿ, ಆಶೀರ್ವದಿಸಿ
ನಮ್ಮದು ಒಂದು ಸಣ್ಣ ಗೂಡಂಗಡಿ. ಹಾಗಾಂತ ಹೇಳಿ ಗೂಡಂಗಡಿ ಅಂತಾ ಹೇಳಿಕೊಳ್ಳಲು ನನಗೆ ಸ್ವಲ್ಪನೂ ಅಂಜಿಕೆಯಿಲ್ಲ. ನಮ್ಮದು ಒಂದು ಚೋಟುದ್ದ ಇರುವ ಉಪಹಾರ ಕೇಂದ್ರ. ಅದುವೆ ಜೈನ್ ಇಡ್ಲಿ ಕೆಫೆ. ಬೆಳಿಗ್ಗೆ 7 ಗಂಟೆಯಿಂದ ಸರಿ ಸುಮಾರು 10.30 ಗಂಟೆಯವರೆಗೆ ಸೇವೆಯನ್ನು ನೀಡುತ್ತಿದೆ.
ನನ್ನ ಈ ಸಣ್ಣ ಪ್ರಯತ್ನಕ್ಕೆ ದಾಂಡೇಲಿ ಜನತೆ ನೀಡಿದ ಪ್ರೋತ್ಸಾಹ ಮತ್ತು ಪ್ರೀತಿಗೆ ತಲೆಬಾಗಿದ್ದೇನೆ. ನನಗೆ ಅಡುಗೆ ಮಾಡುವುದು ಪ್ರವೃತ್ತಿ. ಈ ಪ್ರವೃತ್ತಿಯನ್ನು ವೃತ್ತಿಯನ್ನಾಗಿಸಬೇಕೆಂಬ ಉದ್ದೇಶದಿಂದ ಈ ರೀತಿಯ ಆಲೋಚನೆಯನ್ನು ಹೊಂದಿದ ಫಲಶೃತಿಯಾಗಿ ನಿಮ್ಮೆಲ್ಲರ ಮುಂದೆ ಅಂಬೆಗಾಲಿಡುತ್ತಿರುವ ಸಣ್ಣ ಕೂಸಿನಂತೆ ಜನ್ಮ ತಳೆದ ಜೈನ್ ಇಡ್ಲಿ ಕೆಫೆಗೆ ನೀವೆ ಮಾರ್ಗದರ್ಶಕರು, ನೀವೆ ಪ್ರೋತ್ಸಾಹದಾಯಕರು ಎಂಬುವುದನ್ನು ಬಲವಾಗಿ ನಂಬಿದವ ನಾನು.
ಸಣ್ಣ ಗೂಡಂಗಡಿಯಾದರೂ ದಾಂಡೇಲಿಯ ಬಹುತೇಕ ಜನರು ತನ್ನ ವೃತ್ತಿ, ಪ್ರತಿಷ್ಟೆಯನ್ನೆಲ್ಲ ಬದಿಗಿತ್ತು ನಮ್ಮ ಬಳಿ ಬಂದು ಉಪಹಾರ ಸೇವಿಸುತ್ತಿರುವುದು ನಮಗೆ ಚೈತನ್ಯಶಕ್ತಿ ಮತ್ತು ಉಲ್ಲಾಸಕಾರ ವಾತವರಣವನ್ನು ನಿರ್ಮಿಸಿಕೊಟ್ಟಿದೆ. ಇಂಥಹ ಘನತವೆತ್ತ ದಾಂಡೇಲಿಯಲ್ಲಿ ನಿಮ್ಮೆಲ್ಲರಲ್ಲಿ ನಾನು ಒಬ್ಬನಾಗಿರುವುದು ನನ್ನ ಜೀವನದ ಮಹತ್ವದ ಸುದೈವ.
ಹೌದು ಆತ್ಮೀಯರೇ, ಗುಣಮಟ್ಟ, ರುಚಿಕರ ಹಾಗೂ ಕಡಿಮೆದರದಲ್ಲಿ ಉಪಹಾರವನ್ನು ನೀಡಬೇಕೆಂದು ಸಂಕಲ್ಪಿಸಿ ಆರಂಭಿಸಿದ ಈ ಕೇಂದ್ರ ನಿಮ್ಮೆಲ್ಲರ ಆಶೀರ್ವಾದದಿಂದಲೆ ಮುನ್ನಡೆಯುತ್ತಿದೆ. ನಮ್ಮದೇನಿಲ್ಲ. ನೀವು ಇದ್ದರೆ ನಾವು ಎಂಬ ವಿಚಾರ ನಮ್ಮದು.
ಒಂದು ಮಾತು ನಿಜ, ನಮ್ಮದು ಮನೆ ಪಾಕ ತತ್ವದಡಿಯಲ್ಲಿ ಪ್ರಾರಂಭಿಸಿದ ಉಪಹಾರ ಕೇಂದ್ರ. ಈ ಮಾತನ್ನು ಚಾಚು ತಪ್ಪದೆ ಪಾಲಿಸುತ್ತೇನೆ. ನನ್ನ ಈ ಸಣ್ಣ ಪ್ರಯತ್ನಕೆ ಬಹುತೇಕ ನನ್ನ ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ನೀಡಿ ನನಗೆ ಶಕ್ತಿ ತುಂಬಿದ್ದಾರೆ. ನಿಮ್ಮೆಲ್ಲರ ಸಾಮಾಜಿಕ ಜಾಲತಾಣದ ಪ್ರೋತ್ಸಾಹದ ನುಡಿಗಳಿಗೆ ಕೃತಜ್ಞತೆ ಹೇಳಲು ಆಗಲಿಲ್ಲವಲ್ಲ ಎಂಬ ನೋವು ನನಗಿದೆ. ಯಾಕೆಂದ್ರೆ ನಾನು ಮಲಗುವುದೇ ರಾತ್ರಿ 1.30 ಗಂಟೆಗೆ ಮತ್ತು ಬೆಳಿಗ್ಗೆ ಏಳುವುದು ರಾತ್ರಿ 3.30 ಗಂಟೆಗೆ. ಹಾಗಾಂತ ಹೇಳಿ ಇದನ್ನು ಹೇಳಿ ನಿಮ್ಮೆದುರು ಹಿರೋ ಆಗಿ ಮೆರೆಯಬೇಕೆಂಬ ಉದ್ದೇಶವಲ್ಲ.
ಹಲವರು ಅಂದುಕೊಂಡಿರುವುದು ಅನೇಕವಾದರೂ ಸತ್ಯ ನುಡಿಯುವೆ ನಾನು:

ನಮ್ಮಲ್ಲಿ ಒಂದು ಪ್ಲೇಟ್ ಇಡ್ಲಿಗೆ 15 ರೂ ಇರುತ್ತದೆ. ಕಡಿಮೆ ದರ ಹೌದು. ಆದರೆ ಇಡ್ಲಿನೂ ಗಾತ್ರದಲ್ಲಿ ಸಣ್ಣದಿದೆ ಎನ್ನುವ ಪರಿಜ್ಞಾನ ನನಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.
ಜೈನ್ ಇಡ್ಲಿ ಕೆಫೆಯಲ್ಲಿ ಗಟ್ಟಿ ಚಟ್ನಿ ಇಲ್ಲ ಯಾಕೆಂದ್ರೆ ನಾವು ಪೂರ್ತಿ ತೆಂಗಿನ ಕಾಯಿಯ ಚಟ್ಮಿ ಮಾಡುವುದರಿಂದ ಅನಿವಾರ್ಯ ಕಾರಣಗಳಿಂದ ಗಟ್ಟಿ ಚಟ್ನಿ ಕೊಡಲು ಅಸಾಧ್ಯವಾಗುತ್ತಿದೆ.
ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಿದ್ದೇವೆ. ನಮ್ಮಲ್ಲಿ ಇಡ್ಲಿ ಮತ್ತು ರೈಸ್ ಬಾತ್ ಹಾಟ್ ಬಾಕ್ಸಿನಲ್ಲಿರುತ್ತದೆ. ಕೆಲವೊಂದು ಸಲ ಇಡ್ಲಿ ಸ್ವಲ್ಪ ತಣ್ಣಗಾಗಿರುತ್ತದೆ. ಆದರೆ ಅದೇ ತಣ್ಣಗಾಗಿರುವ ಇಡ್ಲಿಯನ್ನು ಮಗದೊಮ್ಮೆ ಬಿಸಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡಿ, ಗ್ರಾಹಕರ ಆರೋಗ್ಯದ ಮೇಲೆ ತೊಂದರೆಯಾಗುವಂತಹ ಕೆಲಸಕ್ಕೆಂದೂ ಕೈ ಹಾಕುವುದಿಲ್ಲ.
ಗುಣಮಟ್ಟಕ್ಕೆ ಮೊದಲ ಆಧ್ಯತೆ: ಜೈನ್ ಇಡ್ಲಿ ಕೆಫೆಯಲ್ಲಿ ಗುಣಮಟ್ಟದ ಆಹಾರ ವಸ್ತುಗಳಿಗೆ ಪ್ರಮುಖ ಪ್ರಾಧ್ಯಾನ್ಯತೆ ನೀಡಲಾಗುತ್ತಿದೆ.
ಸದ್ಯಕ್ಕೆ ಬಸ್ ನಿಲ್ದಾಣದ ಮುಂಭಾಗ ಮತ್ತು ಪಾಟೀಲ್ ಆಸ್ಪತ್ರೆಯ ಸನಿಹದಲ್ಲಿ ಜೈನ್ ಇಡ್ಲಿ ಕೆಫೆ ಸೇವೆಯನ್ನು ನೀಡುತ್ತಿದೆ. ಈ ಉಪಹಾರ ಕೇಂದ್ರದ ವಿಚಾರಕ್ಕೆ ಹೇಳುವುದಾದರೇ ನಾವೇನೂ ಈ ವಿಷಯದಲ್ಲಿ ಪ್ರಬುದ್ದರಲ್ಲ. ಆದರೆ ನಮ್ಮ ಕೇಂದ್ರಕ್ಕೆ ಬಂದು ಬಹಳಷ್ಟು ಜನ ಪಾರ್ಸೆಲ್ ಒಯ್ಯುತ್ತಾರೆ. ಆದರೆ ನಾವು ಪಾರ್ಸೆಲ್ ಕಟ್ಟುವುದರಲ್ಲಿ ಇನ್ನು ಅಂಗನವಾಡಿ ಮಕ್ಕಳಾಗಿದ್ದೇವೆ ಎನ್ನುವುದು ನಮಗೆ ತಿಳಿದಿದೆ.

ಜೈನ್ ಇಡ್ಲಿ ಕೆಫೆ ಎಂದೇಳಿ ರೈಸ್ ಬಾತುನೂ ಮಾಡುತ್ತಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಬಹುತೇಕ ಗ್ರಾಹಕರ ಒತ್ತಾಯಕ್ಕೆ ರೈಸ್ ಬಾತ್ ಮಾಡಲಾಗುತ್ತದೆ.
ಪಾರ್ಸೆಲ್ ಕೊಂಡೊಯ್ಯುವವರು ದಯವಿಟ್ಟು ಮನೆಯಿಂದ ಬರುವಾಗ ಸಣ್ಣ ಡಬ್ಬ ಅಥವಾ ಚೀಲವನ್ನು ತಂದರೆ ಒಳಿತು. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಈ ನಿಟ್ಟಿನಲ್ಲಿ ಸರ್ವರ ಸಹಕಾರವಿರಲಿ.
ಇದೊಂದು ಸಣ್ಣ ಗೂಡಂಗಡಿ ಉಪಹಾರ ಕೇಂದ್ರ ಎಂದು ಹೇಳಲು ಒಂದಿಂಚು ಸಂಕೋಚ ಪಡೆಯಲಾರೆ. ಯಾಕೆಂದ್ರೆ ಪಾರ್ಟ್ ಟೈಮಾಗಿ 4 ಬಡ ಮಹಿಳೆಯರಿಗೆ ಮತ್ತು ನಾಲ್ವರು ಯುವಕರಿಗೆ ತಕ್ಕ ಮಟ್ಟಿನ ಉದ್ಯೋಗ ಸೃಷ್ಟಿಸಿದ ಸಂತೃಪ್ತಿ ನನಗಿದೆ.
ದಿನಾಂಕ:11.04.2019 ರಿಂದ ದಿನಾಂಕ: 15.04.2019 ರವರೆಗೆ ಜೈನ್ ಇಡ್ಲಿ ಕೆಫೆಗೆ ಅನಿವಾರ್ಯ ಕಾರಣಗಳಿಂದ ರಜೆ ಇರುತ್ತದೆ. ಗ್ರಾಹಕರು ಸಹಕರಿಸಬೇಕಾಗಿ ವಿನಮ್ರ ವಿನಂತಿ.
ದಾಂಡೇಲಿಯ ಜನತೆ ನೀಡುತ್ತಿರುವ ಪ್ರೀತಿ, ಪ್ರೋತ್ಸಾಹಕ್ಕೆ ಸದಾ ಋಣಿಯಾಗಿದ್ದೇನೆ.
ಸಹಕರಿಸಿದ, ಆಶೀರ್ವದಿಸಿದ ಸರ್ವರಿಗೂ ಮನಸ್ಸು ಬಿಚ್ಚಿ ಕೃತಜ್ಞತೆಗಳು.
ಕೊನೆಯ ಮಾತು: ನನ್ನನ್ನು ಮುದ್ದಿಸುವ ದಾಂಡೇಲಿ ಜನತೆಗೆ ಹಾಗೂ ನನ್ನನ್ನು ಸಹಿಸಿಕೊಂಡ ಮಡದಿ ಪದ್ಮಶ್ರೀ ಮತ್ತು ಮಗ ಸುಯೋಗನಿಗೆ ಶರಣನೆನ್ನುವೆ.
ನಿಮ್ಮವ
ಸಂದೇಶ್.ಎಸ್.ಜೈನ್.

No comments:
Post a Comment