ರಾಜ್ಯಮಟ್ಟದಲ್ಲಿ ಸಾಧನೆಗೈದ ಚಂದ್ರಕಾಂತ ಹುಂದಲೇಕರ
ನಿಮ್ಮ ಸಾಧನೆಗೆ ಮನಪೂರ್ವಕ ವಂದನೆ-ಅಭಿವಂದನೆ
ನಿಮ್ಮ ಸಾಧನೆಗೆ ಮನಪೂರ್ವಕ ವಂದನೆ-ಅಭಿವಂದನೆ
ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ವೀರಾಗ್ರಣಿಯಾಗಿ ಹೊರಹೊಮ್ಮಿದ ಚಂದ್ರಕಾಂತ ಹುಂದಲೇಕರ
ದಾಂಡೇಲಿ: ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಹಳಿಯಾಳ ವಿಭಾಗದ ಬರ್ಚಿ ಅರಣ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಕಾಂತ ಹುಂದಲೇಕರ ಅವರು ಭಾಗವಹಿಸಿ 3 ಚಿನ್ನ, 2 ಕಂಚು ಹಾಗೂ ಹಿರಿಯರ ಅಥ್ಲೇಟಿಕ್ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿ ಅರಣ್ಯ ಇಲಾಖೆಯ ಹಳಿಯಾಳ ವಿಭಾಗಕ್ಕೆ ಕೀರ್ತಿ ತಂದಿರುತ್ತಾರೆ.
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಾಖಲೆಯ ಸಾಧನೆಗೈದ ಚಂದ್ರಕಾಂತ ಹುಂದಲೇಕರ ಅವರನ್ನು ಬರ್ಚಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಆಶ್ರಯದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬರ್ಚಿ ಅರಣ್ಯ ವಲಯದ ಅರಣ್ಯಾಧಿಕಾರಿ ಸಿ.ಜಿ ನಾಯ್ಕ ಅವರು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದು ನಮ್ಮ ಹಳಿಯಾಳ ವಿಭಾಗಕ್ಕೆ ಗೌರವವನ್ನು ತಂದು ಕೊಟ್ಟ ಚಂದ್ರಕಾಂತ ಹುಂದಲೇಕರ ಅವರ ಕ್ರೀಡಾ ಸಾಧನೆ ಇಲಾಖೆಗೆ ಹಮ್ಮೆ ತಂದಿದೆ. ಶಿಸ್ತು ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಕಾಂತ ಹುಂದಲೇಕರ ಅವರು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ರಾಜ್ಯಮಟ್ಟದಲ್ಲಿ ಸಾಧನೆಗೈದ ಚಂದ್ರಕಾಂತ ಹುಂದಲೇಕರ ಅವರು ರಾಷ್ಟ್ರಮಟ್ಟದಲ್ಲೂ ಸಾಧನೆಗೈದು ಕರುನಾಡಿಗೆ ಕೀರ್ತಿ ತರುವಂತಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಕಾಂತ ಹುಂದಲೇಕರ ಅವರು ರಾಜ್ಯಮಟ್ಟದಲ್ಲಿ ಸಾಧನೆ ಮಾಡಲು ಮಾರ್ಗದರ್ಶನ ನೀಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಪ್ರೋತ್ಸಾಹಿಸಿದ ಸಹದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಿರಂತರವಾದ ಪ್ರಯತ್ನದಿಂದ ಸಾಧನೆ ಸಾಧ್ಯ. ಇದು ಒಂದು ದಿನದ ಸಾಧನೆಯಲ್ಲ. ಹಲವು ವರ್ಷಗಳ ಪ್ರಯತ್ನದ ಫಲ ಎಂದು ಪ್ರೀತಿಯಿಂದ ಸನ್ಮಾನಿಸಿ, ಜವಾಬ್ದಾರಿಯನ್ನು ಹೆಚ್ಚಿಸುವಂತೆ ಮಾಡಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಅರಣ್ಯ ರಕ್ಷಕ ಪರಸಪ್ಪ ಖೋತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸವಿತಾ ಬೂದಿಹಾಳ ವಂದಿಸಿದರು.
ಅತ್ಯಂತ ಉತ್ಸಾಹಿ ವ್ಯಕ್ತಿತ್ವದ ಚಂದ್ರಕಾಂತ ಹುಂದಲೇಕರ ಅವರ ರಾಜ್ಯಮಟ್ಟದ ಸಾಧನೆ ನಮಗೆಲ್ಲಾ ಅತೀವ ಸಂತಸ ತಂದಿದೆ. ನಿರಂತರವಾದ ದೈಹಿಕ ಕಸರತ್ತು, ವ್ಯಾಯಾಮ ಹಾಗೂ ಸತತ ಪರಿಶ್ರಮದ ಗೆಲುವು ನಿಮ್ಮದಾಗಿದೆ. ನಿಮಗೆ ಶುಭವಾಗಲಿ. ಕ್ರೀಡಾ ಕ್ಷೇತ್ರದಲ್ಲಿ ಮಗದಷ್ಟು ಸಾಧನೆಗೈಯುವ ಸಾಧಕರು ನೀವಾಗಲೆಂದು ಪ್ರಾರ್ಥಿಸುವ,
ನಿಮ್ಮವ
ಸಂದೇಶ್.ಎಸ್.ಜೈನ್



































