ಎಲ್ಲರ
ಅಚ್ಚುಮೆಚ್ಚಿನ ಅಮೀನಿಗೆ ಬೇಕು ಕೆಲಸ
ಬೆಳೆಯುತ್ತಿರುವ
ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಇಂಥವರಿಗೆ ಅವಕಾಶ ನೀಡುವುದು ಒಳಿತಲ್ಲವೇ:
ಎಲ್ಲರ ಅಚ್ಚುಮೆಚ್ಚಿನ ಅಮೀನಿಗೆ ಬೇಕು ಕೆಲಸ
ಎಲ್ಲರ ಅಚ್ಚುಮೆಚ್ಚಿನ ಅಮೀನಿಗೆ ಬೇಕು ಕೆಲಸ
ದಾಂಡೇಲಿ:
ಆತ ಕುಳ್ಳ. ಎಂಥವರನ್ನು ಆಕರ್ಷಿಸುವ ವ್ಯಕ್ತಿತ್ವವನ್ನು ಹೊಂದಿದವ. ಆತ ಕುಳ್ಳನಾದರೇನು? ಆತನ ವಾಕ್ಚಾತುರ್ಯಕ್ಕೆ ಎಲ್ಲರು
ತಲೆಬಾಗಲೇಬೇಕು. ಶರೀರದಲ್ಲಿ ದೃಢಕಾಯನಾಗದಿದ್ದರೂ ಸಂಘಟನೆಯಲ್ಲಿ ಚತುರನಿವನು. ಹಾಗದರೇ ಈತನಾರೆಂಬ
ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಆತ ಬೇರಾರೂ ಅಲ್ಲ. ದಾಂಡೇಲಿ ಹಾಗೂ ನಗರದ ಸುತ್ತಮುತ್ತಲು ಪರಿಚಯವನ್ನು ಹೊಂದಿರುವ ದಾಂಡೇಲಿ ಸಮೀಪದ ಕೋಗಿಲೆಬನ ಗ್ರಾಮದ ನಿವಾಸಿ ಅಮೀನ್ ನಾಜುಮುದ್ದೀನ್ ಶಮಶೇರ್. ಅಂದ ಹಾಗೆ ಈತನ ವಯಸ್ಸು 35. ಇನ್ನೂ ಅವಿವಾಹಿತ. ಓದಲು ಇಷ್ಟವಾದರೂ ಬಡತನದ ಕರಿ ನೆರಳು ಈತನ ಓದಿಗೆ ಅಡ್ಡಿಯಾದ ಪರಿಣಾಮವಾಗಿ ಈತ ಹತ್ತನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋಗಿದ್ದಾನೆ.
ಕೋಗಿಲೆಬನದಲ್ಲಿ ನಡೆಯುವ ಯಾವೊಂದು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿರಲೀ ಅಲ್ಲಿ ನಮ್ಮ ಕುಳ್ಳ ಯಜಮಾನ ಅಮೀನ್ ಹಾಜರಿರಲೇಬೇಕು. ನೇರ, ನಿಷ್ಟುರವಾಗಿ ಮಾತನಾಡುವ ಈತ ಸ್ಥಳೀಯ ಬಡಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದರಲ್ಲಿ ನಿಸ್ಸಿಮ. ಆದರೇನು, ಸಮಾಜ ಸೇವೆಯಿಂದ ಬದುಕಿನ ಜಟಕಾ ಬಂಡಿ ನಡೆಯಲು ಸಾಧ್ಯವೆ?
ಕೋಗಿಲೆಬನ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆೆಯಲ್ಲಿ ಎಲ್ಲರ ಒತ್ತಾಸೆಯ ಮೇರೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಸೋಲೋಪ್ಪಿಕೊಂಡರೂ ಪ್ರಬಲ ಸ್ಪರ್ಧೆಯನ್ನು ನೀಡಿದ ಹೆಗ್ಗಳಿಕೆ ಅಮೀನದ್ದು. ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈತ ಅಲ್ಲಿ ಬರುವ ಅಲ್ಪಸ್ವಲ್ಪ ಕಮೀಶನ್ ಹಣದಲ್ಲೆ ಜೀವನತೃಪ್ತಿಯನ್ನು ಕಾಣುತ್ತಿದ್ದಾನೆ.
ಈತನ ಬಗ್ಗೆ ನನಗೂ ಹೆಮ್ಮೆ, ಯಾಕೆಂದರೇ ಒಬ್ಬ ಉತ್ತಮ ಸಂಘಟಕ. ಇಂಥಹ ಕ್ರಿಯಾಶೀಲ ಯುವಕನನ್ನು ಒಂದು ಒಳ್ಳೆಯ ಉದ್ದೇಶಕ್ಕೆ ಬಳಸುವ ಅನಿವಾರ್ಯತೆಯಿದೆ. ಮೊದಲೆ ದಾಂಡೇಲಿ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಅಗ್ರಣೀಯ ಹೆಸರನ್ನು ಗಳಿಸುತ್ತಿದೆ. ಸರಕಾರದ ಜಂಗಲ್ ಲಾಡ್ಜ್ ಪ್ರವಾಸೋಧ್ಯಮ ಕ್ಷೇತ್ರದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಜಂಗಲ್
ಲಾಡ್ಸ್ಗೆ ಹೇಳಿ ಮಾಡಿಸಿದ ವ್ಯಕ್ತಿ ನಮ್ಮ ಅಮೀನ್:
ವಿಶೇಷವಾಗಿ ಅಮೀನ್ ನಂತಹ ವಿಶೇಷ ವ್ಯಕ್ತಿಗಳನ್ನು ಸಿನಿಮಾ, ಧಾರವಾಹಿಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ದಾಂಡೇಲಿಯಲ್ಲಿ ಅಂಥವುಗಳಿಗೆ ಅವಕಾಶವಿಲ್ಲದ ಕಾರಣ ಈತನನ್ನು ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು. ಬಹುಮುಖ್ಯವಾಗಿ ಹೇಳಬಹುದಾದರೇ ದಾಂಡೇಲಿಯ ಜಂಗಲ್ ಲಾಡ್ಜ್ನಲ್ಲಿ ಅಮೀನಿಗೊಂದು ನೌಕರಿ ನೀಡುವುದರ ಮೂಲಕ ಜಂಗಲ್ ಲಾಡ್ಜಿಗೆ ಬರುವ ಪ್ರವಾಸಿಗರಿಗೆ ಹೊಸ ಆಕರ್ಷಣೆ ಕೊಡಬಹುದಾಗಿದೆ. ಅದಕ್ಕೆ ನಮ್ಮ ಅಧಿಕಾರಿಗಳು ಸ್ಪಂದಿಸಿಯಾರೇ? ಕಾದು ನೋಡಬೇಕಾಗಿದೆ. ಹೊರರಾಜ್ಯದವರೆ ತುಂಬಿರುವ ಜಂಗಲ್ ಲಾಡ್ಜ್ನಲ್ಲಿ ಹಾಸ್ಯ ಚತುರ ಅಮೀನಿಗೊಂದು ನೌಕರಿ ಕೊಟ್ಟು ಜಂಗಲ್ ಲಾಡ್ಜ್ ವಿನೂತನ ಮಾನವೀಯತೆ ಮೆರೆಯುವುದರ ಜೊತೆಗೆ ಪ್ರವಾಸಿಗರಿಗೆ ವಿಶೇಷ ಆಕರ್ಷಣೆ ನೀಡಲು ಮುಂದಾಗಬೇಕಾಗಿದೆ.

ಕೊನೆಯ ಮಾತು ಇಷ್ಟೆ. ಬೆಳೆಯುತ್ತಿರುವ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಇಂಥವರಿಗೆ ಅವಕಾಶ ನಿಡುವುದು ಒಳಿತಲ್ಲವೇ.
ಸಂಪರ್ಕಕ್ಕಾಗಿ: ಅಮೀನ್ ನಾಜುಮುದ್ದೀನ್ ಶಮಶೇರ್, ಕೋಗಿಲೆಬನ, ದಾಂಡೇಲಿ. ಮೊ: 9886829793
ನಿಮ್ಮವ

No comments:
Post a Comment