Friday, December 7, 2018

 ಸರಳ, ಸಹೃದಯಿ ಸಮಾಜಸೇವಕ ನಮ್ಮ ಶ್ರೀನಿವಾಸ.ಎಸ್.ಕೆ
 ಜನ್ಮದಿನದ ಸಂಭ್ರಮದಲ್ಲಿ ಸಹೋದರ ಶ್ರೀನಿವಾಸ.ಎಸ್.ಕೆ
 


  ಜನ್ಮದಿನದ ಸಂಭ್ರಮದಲ್ಲಿ ಸಹೋದರ ಶ್ರೀನಿವಾಸ.ಎಸ್.ಕೆ
ಸರಳ, ಸಹೃದಯಿ ಸಮಾಜಸೇವಕ ನಮ್ಮ ಶ್ರೀನಿವಾಸ.ಎಸ್.ಕೆ


ದಾಂಡೇಲಿಯ ಮೂಲೆ ಮೂಲೆಯ ಬಗ್ಗೆ ಇಂಚಿಂಚು ಪರಿಚಯಿಸಿಕೊಂಡು, ದಾಂಡೇಲಿಗರ ಮನೆಮಗನ ಪ್ರೀತಿಗೆ ಪಾತ್ರರಾದ ವಾತ್ಸಲ್ಯಮಯಿ ಹಾಗೂ ಅಷ್ಟೆ ಕರುಣಮಯಿ ಯುವಕ. ಜೀವನದಲ್ಲಿ ಹಲವಾರು ಅಡೆ ತಡೆಗಳನ್ನು ದಾಟಿ, ಮುಳುಗಿ ಮಿಂದೆದ್ದು, ಧೈರ್ಯದಿಂದ ಬದುಕು ಕಟ್ಟಿಕೊಂಡ ಸುಸಂಸ್ಕೃತ ಯುವಕ. ತನಗೆ ವಹಿಸಿದ ಜವಾಬ್ದಾರಿಯನ್ನು ನಿಷ್ಟೆಯಿಂದ ನಿಭಾಯಿಸಿ, ದಾಂಡೇಲಿಯ ದೇಶಪಾಂಡೆ ರುಡ್ ಸೆಟ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಸದ್ದಿಲ್ಲದೆ ಶಿಸ್ತಿನ ಸಿಪಾಯಿಯಂತೆ ಮನೆಬಾಗಿಲಿಗೆ ತಲುಪಿಸುತ್ತಿರುವ ಪ್ರಾಮಾಣಿಕ ಅಧಿಕಾರಿಯಾಗಿ ಗಮನ ಸೆಳೆದವರು ಇವರು. ಅಂದ ಹಾಗೆ ಇವರ್ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಅವರು ಈಗ ನಮ್ಮವರೇ ಆಗಿರುವ ರಾಜ್ಯದ ಪ್ರಭಾವಿ ಸಚಿವರಾದ ಶ್ರೀ.ಆರ್.ವಿ.ದೇಶಪಾಂಡೆಯವರ ಕಲ್ಪನೆಯ ಕೂಸು ದೇಶಪಾಂಡೆ ರುಡ್ ಸೆಟ್ ಸಂಸ್ಥೆಯ ದಾಂಡೇಲಿ ವಿಸ್ತರಣಾ ಕೇಂದ್ರದ ಡೈನಮಿಕ್ ಯೋಜನಾಧಿಕಾರಿಯಾಗಿರುವ ಹೆಮ್ಮೆಯ ಸಂಘಟಕ ನಮ್ಮ ಶ್ರೀನಿವಾಸ.ಎಸ್.ಕೆ ಯವರು. ಸಚಿವ ದೇಶಪಾಂಡೆಯವರ ಜನಸೇವೆಯ ಕಲ್ಪನೆಯನ್ನು ಸಕಾರಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶ್ರಮಿಕ ಶ್ರೀನಿವಾಸ.ಎಸ್.ಕೆ ಯವರಿಗೆ ನಿನ್ನೆ ದಿನ ಅಂದರೆ ದಿನಾಂಕ: 07.12.2018 ರಂದು ಜನ್ಮದಿನದ ಸಂಭ್ರಮ. ಗಡಿಬಿಡಿ ಹಾಗೂ ಒತ್ತಡದ ನಡುವೆ ನುಡಿರೂಪದಲ್ಲಿ ಶುಭ ಕೋರಲು ನಿನ್ನೆ ದಿನ ನನಗಾಗಲಿಲ್ವೆ ಎಂಬ ಕೊರಗು ನನ್ನನ್ನು ಕಾಡಿಸದಿರಲು ಸಾಧ್ಯವೆ. ಎಷ್ಟಾದರೂ ಅವರು ನಮ್ಮವರು ಅಂದ್ಮೇಲೆ, ಒಂದು ದಿನ ತಡವಾದರೂ ಪರ್ವಾಗಿಲ್ಲ, ನನ್ನ ಕಡೆಯಿಂದ ಅಕ್ಷರರೂಪದ ಮೂಲಕ ಶುಭಾಶಯ ಕೋರಲು ಅಣಿಯಾಗಿದ್ದೇನೆ. ಜನ್ಮದಿನವನ್ನು ಆಚರಿಸಿಕೊಂಡ ಅಪರೂಪದ ಅಪೂರ್ವ ನಲ್ಮೆಯ ಸಹೋದರ ಶ್ರೀನಿವಾಸ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಅಂದ ಹಾಗೆ ನಮ್ಮ ಶ್ರೀನಿವಾಸ ಅವರು ಮೂಲತ: ಮಂಜಿನ ನಗರಿ ಮಡಿಕೇರಿಯವರು. ಅವರಪ್ಪ ಸ್ವಂತ ಉದ್ಯಮವನ್ನು ಪ್ರಾರಂಭಿಸಿದ್ದು ಮಾತ್ರ ಗಂಡುಮೆಟ್ಟಿದ ಹುಬ್ಬಳ್ಳಿಯಲ್ಲಿ. ಹಾಗಾಗಿ ನಮ್ಮ ಶ್ರೀನಿವಾಸ ಅವರ ಜನ್ಮದೂರು ಹುಬ್ಬಳ್ಳಿಯೆ ಆಗಿದೆ.
ಯಶಸ್ವಿ ಉದ್ಯಮಿ ಹಾಗೂ ಚಾಕಲೇಟ್ ಪ್ಯಾಕ್ಟರಿ ಮಾಲಕ ಕೃಷ್ಣಮೂರ್ತಿ ಹಾಗೂ ಸತಿ ಸಾವಿತ್ರಿಯಂತೆ ಗುಣವಂತೆಯಾಗಿರುವ ಸಾವಿತ್ರಿ ದಂಪತಿಗಳ ಜೇಷ್ಟಪುತ್ರ ಈ ನಮ್ಮ ನಗುಮೊಗದ ಚೆಲುವ ಶ್ರೀನಿವಾಸ ಅವರು. ಶ್ರೀನಿವಾಸ ಅವರಿಗೆ ವಸುದಾ ಎಂಬ ಮುದ್ದಿನ ತಂಗಿ ಇದ್ದಾರೆ.

ಎಳೆಯ ಬಾಲಕನಿರುವಾಗಲೆ ಚುರುಕಿನ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದ ಶ್ರೀನಿವಾಸ ಅವರ ನಡೆ ನುಡಿಯನ್ನು ಕಂಡು ಓಣಿ ಮಂದಿಯೆಲ್ಲಾ ಇಷ್ಟಪಟ್ಟು, ಓಣಿ ಜನರ ಮನೆಯಲ್ಲಿ ಮಾಡಿದ ನಾಷ್ಟದಲ್ಲಿ ಮೊದಲ ಪಾಲು ಅರ್ಹವಾಗಿ ಶ್ರೀನಿವಾಸ ಅವರ ಪಾಲಿಗೆ ಲಭಿಸುತ್ತಿತ್ತು. ಒಟ್ಟಿನಲ್ಲಿ ಓಣಿ ಜನರ ಇಷ್ಟದ ಹಾಗೂ ಮುದ್ದಿನ ಮಗು ನಮ್ಮ ಶ್ರೀನಿವಾಸ ಆಗಿದ್ದರು ಎನ್ನುವುದನ್ನು ಉದ್ದುದ್ದವಾಗಿ ವಿಸ್ತರಿಸುವ ಅಗತ್ಯವಿಲ್ಲ. ಕೃಷ್ಣ ಜನ್ಮಾಷ್ಟಮಿಯಂದು ಶ್ರೀನಿವಾಸ ಅವರ ಮನೆ ಓಣಿಯಲ್ಲಿ ಎಲ್ಲರೂ ಸೇರಿ ಬಾಲಕೃಷ್ಣನ ವೇಷ ಹಾಕುತ್ತಿದ್ದದ್ದು ನಮ್ಮ ಶ್ರೀನಿವಾಸ ಅವರಿಗೆನ್ನಿ. ಅಷ್ಟು ಒಳ್ಳೆಯ ಮುದ್ದಿನ ಪುಟಾಣಿ ಬಾಲಕನಾಗಿದ್ದವರು ನಮ್ಮ ಶ್ರೀನಿವಾಸ ಅವರು.

ನಮ್ಮ ಶ್ರೀನಿವಾಸ ಅವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಫಾತಿಮಾ ಕನ್ನಡ ಮಾದ್ಯಮ ಶಾಲೆಯಲ್ಲಿ ಪಡೆದರು. ಮುಂದೆ ಹುಬ್ಬಳ್ಳಿಯ ಎಸ್.ಎಸ್.ಕೆ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು, ಅಲ್ಲೆ ಸಮೀಪದ ಸರಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಬಿ.ಎ ಪದವಿಯನ್ನು ಅತ್ಯುತ್ತಮ ಅಂಕಗಳೊಂದಿಗೆ ಪಡೆದು ಮುಂದೆ ನನ್ನೂರಿನ ಹೆಮ್ಮೆಯ ಜ್ಞಾನದೇಗುಲ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನಲ್ಲಿ ಎಂ.ಎಸ್.ಡಬ್ಲೂ ಪದವಿಯನ್ನು ಉನ್ನತ ಅಂಕಗಳೊಂದಿಗೆ ಪಡೆದ ಧನ್ಯತೆಯನ್ನು ಹೊಂದಿದ್ದಾರೆ.

ಶ್ರೀನಿವಾಸ ಅವರು ಪ್ರಾಥಮಿಕ, ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಯಾಗಿರುವಾಗಲೆ ಶಾಲೆ ಬಿಟ್ಟ ಅವಧಿಯಲ್ಲಿ ಹಾಗೂ ರಜಾ ದಿನಗಳಲ್ಲಿ ಅಪ್ಪನ ಚಾಕಲೇಟ್ ಪ್ಯಾಕ್ಟರಿಯಲ್ಲಿ ಒಬ್ಬ ಕಾರ್ಮಿಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿವಿಧ ಅಂಗಡಿಗಳಿಗೆ ಸೈಕಲನ್ನೇರಿ ಚಾಕಲೇಟ್ ಸೇಲ್ ಮಾಡುವ ಸೇಲ್ಸ್ ಮ್ಯಾನ್ ಆಗಿಯೂ ಅಪ್ಪನ ಕಾರ್ಯದಲ್ಲಿ ಎಳೆಯ ಪ್ರಾಯದಲ್ಲೆ ತೊಡಗಿಸಿಕೊಂಡು ಕಷ್ಟದ ಹಾಗೂ ಶ್ರಮದ ಅರಿವನ್ನು ಮೈಗೂಡಿಸಿಕೊಂಡಿದ್ದರು.

ಓದಿನ ಬಳಿಕ ಶ್ರೀನಿವಾಸ ಅವರು ಬೆಂಗಳೂರಿನ ಜನಲಕ್ಷ್ಮೀ ಮೈಕ್ರೊ ಫೈನಾನ್ಸ್ ಸಂಸ್ಥೆಯಲ್ಲಿ ಸಮನ್ವಯಾಧಿಕಾರಿಯಾಗಿ ಒಂದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು. ಆನಂತರ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಅನುಷ್ಟಾನ ಪಡಿಸಲಾದ ವಿಶ್ವಬ್ಯಾಂಕಿನ ಜಲಸಂವರ್ಧನೆ ಯೋಜನೆಯ ಟೀಮ್ ಲೀಡರ್ ಆಗಿ 3 ವರ್ಷ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಲ್ಲಿಂದ ಮುಂದೆ ಗದಗ ಜಿಲ್ಲೆಯ 108 ತುರ್ತು ಆರೋಗ್ಯ ಘಟಕದ ಜಿಲ್ಲಾ ಉಸ್ತುವಾರಿ ಅಧಿಕಾರಿಯಾಗಿ ಕೆಲ ವರ್ಷಗಳ ವರೆಗೆ ಸೇವೆಯನ್ನು ಸಲ್ಲಿಸಿದ್ದರು. ಮುಂದೆ ಕಳೆದ ನಾಲ್ಕು ವರ್ಷಗಳಿಂದ ದೇಶಪಾಂಡೆ ರುಡ್ ಸೆಟ್ ಸಂಸ್ಥೆಯ ದಾಂಡೇಲಿ ವಿಸ್ತರಣಾ ಕೇಂದ್ರದ ಯೋಜನಾಧಿಕಾರಿಯಾಗಿ ಅನುಪಮ ಹಾಗೂ ದಕ್ಷ ಸೇವೆಯನ್ನು ನೀಡುತ್ತಿದ್ದಾರೆ.

ದೇಶಪಾಂಡೆ ರುಡ್ ಸೆಟಿನ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಪಡಿಸುವಲ್ಲಿ ಶ್ರೀನಿವಾಸ ಅವರ ಕಾರ್ಯಬದ್ದತೆಯನ್ನು ಶ್ಲಾಘಿಸಲೆಬೇಕು. ಜನಸಾಮಾನ್ಯರಿಂದ ಹಿಡಿದು ಸಮಾಜದ ಉನ್ನತ ಮಟ್ಟದ ಪ್ರಭಾವಿಗಳವರೆಗೆ ಅನ್ಯೋನ್ಯ ಸಂಬಂಧವನ್ನಿಟ್ಟುಕೊಂಡಿರುವ ಶ್ರೀನಿವಾಸ ಅವರ ಗುಣ ನಡತೆ, ಸಂಸ್ಕಾರಯುತವಾದ ನಡವಳಿಕೆ ಹಾಗೂ ಮಾತು ಎಲ್ಲರ ಪ್ರೀತಿಗೆ ಕಾರಣವಾಗಿದೆ.

ದೇಶಪಾಂಡೆ ಸಂಸ್ಥೆಯ ಸ್ವ ಸಹಾಯ ಸಂಘಗಳ ಸದಸ್ಯರುಗಳ ಸಮಸ್ಯೆಗಳಿಗೆ ಅಹವಾಲುಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವುದರ ಮೂಲಕ ನಿಜವಾದ ಸಾಮಾಜಿಕ ಕಾರ್ಯಕರ್ತನೆಂಬುದನ್ನು ಸಾದರ ಪಡಿಸಿಕೊಂಡಿರುವ ಶ್ರೀನಿವಾಸ ಅವರ ಕಾರ್ಯಶೈಲಿ ಸಚಿವ ದೇಶಪಾಂಡೆಯವರಿಗೆ, ಸಂಸ್ಥೆಯ ಆಡಳಿತ ಮಂಡಳಿಯವರಿಗೆ, ವಿ.ಆರ್.ಡಿ.ಎಂ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ ಪ್ರಭು ರವರಿಗೆ, ದೇಶಪಾಂಡೆ ರುಡ್ ಸೆಟಿನ ನಿರ್ದೇಶಕರು ಹಾಗೂ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸಹದ್ಯೋಗಿಗಳ ಜೊತೆ ಸಹೋದರತ್ವದ ಸಂಬಂಧವನ್ನಿಟ್ಟುಕೊಂಡಿರುವ ಶ್ರೀನಿವಾಸ ಅವರು ಹೊಸ ವಿಚಾರಗಳೊಂದಿಗೆ ಸಮಾಜದ ಬದಲಾವಣೆಗಾಗಿ ಮತ್ತು ಪ್ರಗತಿಗಾಗಿ ಸಂಸ್ಥೆಯ ಮೂಲಕ ತನ್ನನ್ನು ತಾನು ಸಮರ್ಪಣಾಭಾವದಿಂದ ಸಮರ್ಪಿಸಿಕೊಂಡಿದ್ದಾರೆ. ಸರಳ ಜ್ಜನಿಕೆಯ ವ್ಯಕ್ತಿತ್ವದ ಶ್ರೀನಿವಾಸ ಅವರು ಅತ್ಯುತ್ತಮ ಭಾಷಣಕಾರರಾಗಿ, ತರಬೇತಿದಾರರಾಗಿ ಈಗಾಗಲೆ ಗಮನ ಸೆಳೆದಿದ್ದಾರೆ.

ಜೀವನದಲ್ಲೆಂದೂ ಸೊಕ್ಕು, ಅಹಂನ್ನು ಪ್ರದರ್ಶಿಸಿದೇ, ಸರ್ವರಲ್ಲಿ ಒಂದಾಗಿರುವ ಗುಣವಂತ, ಹೃದಯವಂತ ಶ್ರೀನಿವಾಸ ಅವರ ಸಾಧನೆಗೆ ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಮುದ್ದಿನ ತಂಗಿಯ ಪ್ರೀತಿ, ಕನಸಿನ ರಾಣಿ, ಕೈಹಿಡಿದ ಪತ್ನಿ ಶ್ವೇತಾ ಅವರ ಸ್ವಚ್ಚ ಮನಸ್ಸಿನ ಸಹಕಾರ ಮತ್ತು ಪ್ರೋತ್ಸಾಹ, ತಮ್ಮನ ಬರುವಿಕೆಗಾಗಿ ಸದಾ ಕಾಯುತ್ತಿರುವ ಮಗಳು ಆದ್ಯಾಳ ಮುತ್ತಿನಂತ ಪ್ರೀತಿ, ಬಂಧುಗಳ, ಗೆಳೆಯರ, ದೇಶಪಾಂಡೆ ಸಂಸ್ಥೆಯ ಮುಖ್ಯಸ್ಥರುಗಳ, ಅಧಿಕಾರಿ ವರ್ಗದವರ ಸಹಕಾರವೂ ಪ್ರಮುಖ ಕಾರಣ.

ಜನ್ನದಿನವನ್ನು ಆಚರಿಸಿಕೊಂಡ ಶ್ರೀನಿವಾಸ ಅವರಿಗೆ ಮಗದೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್


No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...