Sunday, December 9, 2018

ಸಮಾಜಸೇವಕ, ಯಶಸ್ವಿ ಉದ್ಯಮಿ ಶ್ರೀಪತಿ ಭಟ್ ಹಾಗೂ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್ ಗುರವ ಅವರಿಗೆ ಸನ್ಮಾನ

ಸಮಾಜಸೇವಕ, ಯಶಸ್ವಿ ಉದ್ಯಮಿ ಶ್ರೀಪತಿ ಭಟ್ ಅವರಿಗೆ ಸನ್ಮಾನ
ಜಿಲ್ಲೆಯ ಹೆಸರಾಂತ ಸಮಾಜಸೇವಕ, ಉದ್ಯಮಿ, ಪ್ರವಾಸೋದ್ಯಮಿ ಹಾಗೂ ಮಾರುತಿ ಸೌಹಾರ್ಧ ಸಹಕಾರಿ ಸಂಘದ ಪ್ರವರ್ತಕರು ಹಾಗೂ ಸ್ಥಾಪಕಾಧ್ಯಕ್ಷರಾಗಿರುವ ಹಳಿಯಾಳದ ಶ್ರೀಪತಿ ಭಟ್ ಅವರನ್ನು ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ನಡೆದ ಮುಕ್ತ ಶಟಲ್ ಲೀಗ್ ಪಂದ್ಯಾವಳಿಯ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
 ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್ ಗುರವ ಅವರಿಗೆ ಸನ್ಮಾನ
ದಾಂಡೇಲಿಯ ನಿವಾಸಿ, ಕ್ರೀಡಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಕ್ರೀಡಾ ತರಬೇತುದಾರರಾಗಿರುವ ಅಮರ್.ಎಂ.ಗುರವ ಅವರನ್ನು ಅವರ ಕ್ರೀಡಾ ಸೇವೆಯನ್ನು ಪರಿಗಣಿಸಿ ಅವರನ್ನು ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ನಡೆದ ಮುಕ್ತ ಶಟಲ್ ಲೀಗ್ ಪಂದ್ಯಾವಳಿಯ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಅಮರ್.ಎಂ.ಗುರವ ಅವರ ಕ್ರೀಡಾ ಸೇವೆಯನ್ನು ಶ್ಲಾಘಿಸಿ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪರವಾಗಿ ಉದ್ಯಮಿ ಶ್ರೀಪತಿ ಭಟ್ ಹಳಿಯಾಳ ಅವರು ಸನ್ಮಾನಿಸಿದರು.

ಶ್ರೀಪತಿ ಭಟ್ ಅವರ ಸಮಾಜಮುಖಿ ಹಾಗೂ ಜನಮುಖಿ ಕಾರ್ಯಗಳನ್ನು ಮೆಚ್ಚಿ ಸನ್ಮಾನಿಸಿದ ಈ ಸಂದರ್ಭದಲ್ಲಿ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷ ಸಂದೇಶ್.ಎಸ್.ಜೈನ್, ಉಪಾಧ್ಯಕ್ಷ ಮುರುಗೇಶ ನಾಯರ್, ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್ ಗುರವ, ಉದ್ಯಮಿ ನವೀನ ಕಾಮತ್, ನಗರ ಸಭಾ ಸದಸ್ಯ ರೋಶನಜಿತ್, ಬಂಗೂರನಗರ ಪದವಿ ಕಾಲೇಜಿನ ದೈಹಿಕ ಕ್ರೀಡಾ ಉಪನ್ಯಾಸಕ ವಿನಯ್, ದೇಶಪಾಂಡೆ ಆರ್ಸೆಟಿಯ ಶ್ರೀನಿವಾಸ.ಎಸ್.ಕೆ, ಸ್ಥಳೀಯ ಬ್ಯಾಡ್ಮಿಂಟನ್ ಕೋಚ್ ಶರಣಯ್ಯ ಹೆಬ್ಬಳ್ಳಿಮಠ, ಉದ್ಯಮಿ ನವೀನ ಕಾಮತ್, ಹೆಸ್ಕಾಂ ಅಧಿಕಾರಿ ಕುಮಾರ್ ಕರಗಯ್ಯ, ಧಾರವಾಡದ ಸಮಾಜ ಸೇವಕ ಸುದೀಂದ್ರ ಪವಾರ್,  ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಪದಾಧಿಕಾರಿ ಗುರು ಮಠಪತಿ, ಪ್ರವಾಸೋದ್ಯಮಿ ಸುರೇಶ ದಂಡಗಲ್ ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನಿತರಿಗೆ ಹಾರ್ದಿಕ ಶುಭಾಶಯಗಳು,

ನಿಮ್ಮವ

ಸಂದೇಶ್.ಎಸ್.ಜೈನ್


No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...