ನಮ್ಮೂರ
ಹೆಮ್ಮೆಯ ಕಲಾವಿದ ಜಿ.ಎಸ್.ರಾಣೆ (ಸಂತೋಷ)
ನಮ್ಮೂರ
ಹೆಮ್ಮೆಯ ಕಲಾವಿದ ಜಿ.ಎಸ್.ರಾಣೆ (ಸಂತೋಷ)
ದಾಂಡೇಲಿ: ಸರಳತೆ, ಆಡಂಬರವಿಲ್ಲದ
ಜೀವನ, ಹಿರಿ-ಕಿರಿಯರೆನ್ನದೆ ಎಲ್ಲರಲ್ಲಿಯೂ ನಗುಮೊಗದಿಂದ ಮಾತನಾಡಿಸುವ ನನ್ನ
ಸಹೃದಯಿ ಮಿತ್ರ ಜಿ.ಎಸ್.ರಾಣೆಯವರ ಕಲಾಸೇವೆಗೆ ಈ ಮೂಲಕ ನನ್ನದೊಂದು ಸಲಾಂ.
ಅಂದ ಹಾಗೆ ನಮ್ಮ ಜಿ.ಎಸ್.ರಾಣೆಯವರು (ಸಂತೋಷ) ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಇಲ್ಲಿ ಕೆಮಿಕಲ್ ರಿಕಾವರಿ ಆಪರೇಷನ್ ವಿಭಾಗದ ಅಧೀಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಣೆಯವರು ನಗರದ ಜನಪ್ರಿಯ ಚಿತ್ರ ಕಲಾವಿದ. ಅವರ ಕುಂಚದಿಂದ ಅರಳಿದ ಕಲಾಕೃತಿಗಳಿಗೆ ಅಸಂಖ್ಯಾತ ಜನರು, ಗಣ್ಯರು ಅವರನ್ನು ಅಭಿಮಾನದಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ದಸರಾ ಸಮಯದಲ್ಲಂತು ಕಾಗದ ಕಾರ್ಖಾನೆಯಲ್ಲಿ ಜಿ.ಎಸ್.ರಾಣೆಯವರು ಪ್ರಮುಖ ಆಕರ್ಷಣೀಯ ವ್ಯಕ್ತಿ. ಕಾಗದ ಕಾರ್ಖಾನೆಯೊಳಗಡೆ ಜಿ.ಎಸ್.ರಾಣೆಯವರ ಕುಂಚದಿಂದ ಅರಳಿದ ಕಲಾಕೃತಿಗಳು ಎಲ್ಲರ ಕಣ್ಮನ ಸೆಳೆಯುತ್ತದೆ. ಕ್ಷಣ ಮಾತ್ರದಲ್ಲಿ ವಿವಿಧ ಬಗೆಯ ಚಿತ್ರಗಳನ್ನು ಬಿಡಿಸುವ ಚಾಕ್ಯತೆಯನ್ನು ಹೊಂದಿರುವ ರಾಣೆಯವರ ಕಲಾಸೇವೆ ನಿಜಕ್ಕೂ ಅಭಿನಂದನೀಯ.
ಹೊಸ ವಿಚಾರ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ರಾಣೆಯವರು ಬಿಡಿಸುವ ಚಿತ್ರಗಳಲ್ಲಿ ರಾಷ್ಟ್ರೀಯತೆ ಮತ್ತು ಧಾರ್ಮಿಕ ಪ್ರಜ್ಷೆ ಮೂಡಿಸುವ ಸಂದೇಶವಿದೆ. ನವನವೀನ ಶೈಲಿಯಲ್ಲಿ ಚಿತ್ರಗಳನ್ನು ರಚಿಸಿ ಚಿತ್ರಪ್ರಿಯರ ಮನಸೂರೆಗೊಳಿಸುವ ರಾಣೆಯವರ ಕಲಾಸೇವೆ ಹೀಗೆಯೆ ನಿತ್ಯನಿರಂತರ ಮುಂದುವರಿಯಲಿ. ಅವರ ಈ ಕಲಾಸೇವೆಯನ್ನು ಕಾಗದ ಕಾರ್ಖಾನೆಯು ಗಮನಿಸಿ ಅವರನ್ನು ವಿಶೇಷವಾಗಿ ಪ್ರೋತ್ಸಾಹಿಸುವಂತಾಗಲೆನ್ನುವುದೆ ನಮ್ಮ ಹಾರೈಕೆ.
ಏನಾಂತಿರಿ,
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment