Friday, December 14, 2018

ಕಾಲ ಬದಲಾಗಿದೆ.....
ಹೌದು, ಕಾಲ ಬದಲಾಗಿದೆ. ಇಂದು ಸತ್ಯ, ಧರ್ಮಕ್ಕೆ ಕಾಲವಿಲ್ಲ. ಅನ್ಯಾಯ, ವಂಚನೆ, ಮೋಸಗಳೆ ಇಂದು ರಾರಾಜಿಸುತ್ತಿವೆ. ಹಾಗಾಗಿ ಎಷ್ಟೆ ಹೋರಾಟಗಳು ನಡೆದರೂ ಹೋರಾಟ ಸ್ಪಷ್ಟ ಗುರಿಯೆಡೆಗೆ ತಲುಪುವುದು ಮತ್ತು ತಲುಪಿಸುವುದು ಅಷ್ಟು ಸಲಭದ ಕೆಲಸವಲ್ಲ.
 
ನಾವು ನೋಡುತ್ತಿದ್ದೇವೆ. ಆರ್.ಟಿ.ಐ ಕಾರ್ಯಕರ್ತರ ಕೊಲೆಯಾಗುತ್ತಿದೆ. ಆಗಿರುವ ತಪ್ಪುಗಳನ್ನು ಸಮಾಜದ ಮುಂದಿಡಲು ಆರ್.ಟಿ.ಐ ಒಂದು ಮಹತ್ವದ ವೇದಿಕೆ. ಅದೇಷ್ಟೊ ಅನ್ಯಾಯ, ಮೋಸ, ವಂಚನೆಗಳು ಆರ್.ಟಿ.ಐ ಮೂಲಕ ಹೊರಜಗತ್ತಿಗೆ ತಿಳಿಯುವಂತಾಗಿದೆ. ಆರ್.ಟಿ.ಐ ಕಾಯ್ದೆಯನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳುವವರು ಬಹಳಷ್ಟು ಜನ ಇದ್ದರೂ, ವಾಮಾ ಮಾರ್ಗದಲ್ಲಿ ಹಣ ಕೀಳಿಸುವ ಹುನ್ನಾರವು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವ ಮೂಲಕ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಹಾಗಾಗಿ, ತಪ್ಪನ್ನು ಸಮಾಜಕ್ಕೆ ಎತ್ತಿ ತೋರಿಸಲು ಆರ್.ಟಿ.ಐ ಅಡಿಯಲ್ಲಿ ಮಾಹಿತಿ ಕೇಳುವ ಪ್ರಾಮಾಣಿಕ ಆರ್.ಟಿ.ಐ ಕಾರ್ಯಕರ್ತನಿಗೂ ಇಂದು ಬ್ಲ್ಯಾಕ್ ಮೆಲರ್ ಎಂಬ ಹಣೆ ಪಟ್ಟಿ ಸಮಾಜ ನೀಡುತ್ತಿರುವುದು ಮಾತ್ರ ದುರ್ದೈವ್ಯ. ಸ್ವಸ್ಥ ಸಮಾಜ ನಿರ್ಮಾಣದ ಹಂಬಲವನ್ನಿಟ್ಟು ಆರ್.ಟಿ.ಐ ಅಡಿಯಲ್ಲಿ ಮಾಹಿತಿ ಕೇಳಿದ ಕೆಲವೆ ದಿನಗಳೊಳಗೆ ಅರ್ಜಿದಾರನ ಹೆಸರಿಗೆ ಮಸಿ ಬಳಿಯುವ ತಂತ್ರಗಾರಿಕೆ ನಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ಆರ್.ಟಿ.ಐ ಮೂಲಕ ಹೋರಟಕ್ಕಿಳಿದ ವ್ಯಕ್ತಿಯನ್ನು ಹೇಗಾದರೂ ಮಾಡಿ ಮುಗಿಸಬೇಕೆಂಬ ಷಡ್ಯಂತ್ರವು ನಡೆಯುತ್ತವೆ. ಅದಕ್ಕಾಗಿ ಮದ್ಯದ ಅಮಲಿನ ಜೊತೆಗೆ ದುಂಡು ಮೇಜಿನ ಸಭೆಯು ದಿನಗಟ್ಟಲೆ ನಡೆಯುತ್ತದೆಯಂತೆ. ಆರ್.ಟಿ.ಐ ಮೂಲಕ ಮಾಹಿತಿ ಕೇಳಿದವನನ್ನು ಬಿಡಬಾರದು, ಆತನನ್ನು ಮುಗಿಸಬೇಕು, ಟ್ರಕ್ ಚಾಲಕನಿಗೆ ಸ್ವಲ್ಪ ಎಣ್ಣೆ ಕುಡಿಸಿ ಜೇಬಿಗೆ ರೂ:1000 ಇಟ್ಟು ಅಪಘಾತ ಮಾಡಿಸಿ ಆರ್.ಟಿ.ಐ ಕಾರ್ಯಕರ್ತನನ್ನು ಕೊಲೆ ಮಾಡು ಎಂಬ ಪಿತೂರಿಗಳು ನಡೆಯುತ್ತಿದೆಯಂತೆ, ಇನ್ನೂ ಸ್ವಲ್ಪ ಮುಂದುವರಿದು ಹೇಳಬೇಕಾದರೇ ಜಾತಿ ನಿಂದನೆ, ಜಾತಿಯ ಮೇಲೆ ಹಲ್ಲೆ ಹೀಗೆ ಏನಾದರೂ ಒಂದು ಕುಂಟು ಕಾರಣವನ್ನು ಹುಡುಕಿ ಸತ್ಯವನ್ನು ಹುಡಕ ಹೊರಟ ಆರ್.ಟಿ.ಐ ಕಾರ್ಯಕರ್ತನನ್ನು ಒಂದು ಪ್ರಕರಣದಲ್ಲಿ ಒದ್ದು ಒಳಗೆ ಹಾಕುವ ಪ್ರಯತ್ನಗಳ ಮಾತುಗಳು ನಡೆಯುತ್ತಿದ್ದೆಯಂತೆ.

ಒಂದಂಥು ನಿಜ. ಹೋರಾಟಗಾರನನ್ನು ಮಟ್ಟ ಹಾಕಬಹುದು. ಆದರೆ ಮಾಡಿರುವ ದಾಖಲೆ ಸಹಿತ ತಪ್ಪನ್ನು ಕಾನೂನಿನ ಮುಂದೆ ಮಟ್ಟ ಹಾಕಬಹುದೆ?. ಜೀವನದಲ್ಲಿ ನಾವು ಮಾಡಿದ ನಿಸ್ವಾರ್ಥ ಸೇವೆಯೆ ನಮ್ಮ ಜೊತೆ ಬರುವುದರ ಜೊತೆಗೆ ಅದು ಚಿರಾಯುವಾಗಿ ಉಳಿಯುತ್ತದೆ.

ನಾವು ಸತ್ತು ನಮ್ಮ ಶವ ಯಾತ್ರೆಯ ಸಂದರ್ಭ ನಮ್ಮ ಮನೆಯವರು ಅಳುವುದು ಸಹಜ. ಆದರೆ ನೆರೆಹೊರೆಯವರು ಅಳಬೇಕು. ನಾವು ಮಾಡಿದ ಪಾಪಕರ್ಮಗಳು ಅವರುಗಳ ಕಣ್ಣೀರಲ್ಲಿ ಪ್ರಾಯಶ್ಚಿತವಾಗಬೇಕು. ಅಂತಹ ಜೀವನ ನಮ್ಮದಾಗಬೇಕು. ಇದು ಸತ್ಕಾರ್ಯಗಳನ್ನು ಮಾಡಿದಾಗ ಮಾತ್ರ ಸಾಧ್ಯ.

ನೂರು ವರ್ಷ ಇಲಿಯಾಗಿ ಬದುಕುವ ಬದಲು, ಇದ್ದಷ್ಟು ವರ್ಷ ಹುಲಿಯಾಗಿ ಬದುಕುವ, ಏನಂತೀರಿ.

ನಿಮ್ಮವ
ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...