ನಮ್ಮೂರ ಹೆಮ್ಮೆಯ ದಿಟ್ಟ ಸಾಹಸಿ, ಸ್ವಾವಲಂಬಿ ನಾರಿ-ಈ ನಮ್ಮ ರಾಜೇಶ್ವರಿ
ಹೆತ್ತ ಮನೆಗೂ ಕೊಟ್ಟ ಮನೆಗೂ ಕೀರ್ತಿ ತಂದ ರಾಜೇಶ್ವರಿ ನಾಯಕರವರಿಗೆ ಜನ್ಮದಿನದ ಸಂಭ್ರಮ
ನಮ್ಮೂರ ಹೆಮ್ಮೆಯ ದಿಟ್ಟ ಸಾಹಸಿ, ಸ್ವಾವಲಂಬಿ ನಾರಿ-ಈ ನಮ್ಮ ರಾಜೇಶ್ವರಿ
ಹೆತ್ತ ಮನೆಗೂ ಕೊಟ್ಟ ಮನೆಗೂ ಕೀರ್ತಿ ತಂದ ರಾಜೇಶ್ವರಿ ನಾಯಕರವರಿಗೆ ಜನ್ಮದಿನದ ಸಂಭ್ರಮ
ಹೆತ್ತ ಮನೆಗೂ ಕೊಟ್ಟ ಮನೆಗೂ ಕೀರ್ತಿ ತಂದ ರಾಜೇಶ್ವರಿ ನಾಯಕರವರಿಗೆ ಜನ್ಮದಿನದ ಸಂಭ್ರಮ
ಅವರಪ್ಪ ಪೊಲೀಸಪ್ಪ, ಅಮ್ಮ ಟೀಚರಮ್ಮ. ಹಾಗಾಗಿ ಧೈರ್ಯ, ಶಿಕ್ಷಣ ಹಾಗೂ ಸಂಸ್ಕಾರಯುತ ಜೀವನ ಮೌಲ್ಯ ಹುಟ್ಟಿನಿಂದಲೆ ಮೈಗೂಡಿಸಿಕೊಂಡ ಸಹೋದರಿಯವರು. ಅಂಜಿಕೆಯಿಲ್ಲದೆ, ಅಳುಕಿಲ್ಲದೇ ಮುನ್ನುಗ್ಗುವ ಸಾಹಸಿ ಮಹಿಳೆ, ಒಟ್ಟಿನಲ್ಲಿ ಧೈರ್ಯವಂತ ಧೀರೆ. ಸಂಸಾರದ ಒತ್ತಡದ ನಡುವೆಯೂ ಸಮಾಜಮುಖಿಯಾಗಿ ಬದುಕು ಕಟ್ಟಿಕೊಂಡು, ಸಾಹಸಿಕ ಚಟುವಟಿಕೆ ಹಾಗೂ ಆರ್ಥಿಕ ಸ್ವಾವಲಂಬಿಯಾಗಿ ಎಲ್ಲರಿಗೂ ಮಾದರಿಯಾಗಬಲ್ಲ ಗುಣವಂತೆ ಈ ನನ್ನ ಸಹೋದರಿ ಬೇರೆ ಯಾರು ಅಲ್ಲ. ಕಳೆದ ವರ್ಷ ದಾಂಡೇಲಿಯ ಇನ್ನರ್ ವ್ಹಿಲ್ ಕ್ಲಬಿನ ಅಧ್ಯಕ್ಷೆಯಾಗಿ ಗಮನಾರ್ಹ ಸಾಧನೆಗೈದ ನಗುಮೊಗದ ಬೆಡಗಿ ರಾಜೇಶ್ವರಿ ನಾಯಕ ಅವರು. ಇವತ್ತಿನ ಬರಹ ಅವರಿಗಾಗಿ ಅರ್ಪಣೆ.
ಅಂದ ಹಾಗೆ ಇಂದವರಿಗೆ ಜನ್ಮದಿನದ ಸಂಭ್ರಮ, ಸಡಗರ. ಜನ್ಮದಿನದ ಸಂಭ್ರಮದಲ್ಲಿರುವ ಸಹೋದರಿ ರಾಜೇಶ್ವರಿಯವರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿಯೆ ಅವರ ಜೀವನ ಯಶೋಗಾಥೆಯನ್ನು ಉಣಬಡಿಸಲು ಶುರುವಚ್ಚಿಕೊಳ್ಳುತ್ತೇನೆ.
ದೇಶದಲ್ಲೆ ಅತೀ ಹೆಚ್ಚು ರ್ಯಾಪ್ಟ್ ಗಳನ್ನು ಹೊಂದಿರುವ ಕಾಳಿ ಎಡ್ವೆಂಚರ್ಸ್ ನ ಮಾಲಕ ಹಾಗೂ ಯಶಸ್ವಿ ಪ್ರವಾಸೋದ್ಯಮಿ ದಾಂಡೇಲಿಯ ಹೆಮ್ಮೆಯ ಕುವರ ರವಿಕುಮಾರ್.ಜಿ.ನಾಯಕ ಅವರ ಮನದ ಮಡದಿ ರಾಜೇಶ್ವರಿಯವರ ಬಗ್ಗೆ ಆತ್ಮೀಯವಾದ ಪರಿಚಯವಾದದ್ದೆ ಇನ್ನರ್ ವ್ಹಿಲ್ ಕ್ಲಬ್ ಮೂಲಕ. ನಿಜಕ್ಕೂ ಹೇಳುವುದಾದರೇ ಅವರಲ್ಲಿರುವ ಮಾನವೀಯ ಕಾಳಜಿ, ಸಮಾಜಮುಖಿ ನಡವಳಿಕೆಯೆ ಅವರ ಬಗ್ಗೆ ನನಗಂತೂ ಅತೀವ ಗೌರವ ಮೂಡಿದೆ. ಇಂಥಹ ಅಮೂಲ್ಯ ರಾಣಿಯನ್ನು ವರಿಸಿಕೊಂಡು ರಾಜನಂತೆ ಬದುಕು ನಡೆಸುತ್ತಿರುವ ರವಿಕುಮಾರ್ ಅವರು ನಿಜವಾಗಿಯೂ ಲಕ್ಕಿ ಎಂದರೇ ತಪ್ಪೇನಿಲ್ಲ.
ಅಂದ ಹಾಗೆ ನಮ್ಮ ರಾಜೇಶ್ವರಿಯವರು ಮೂಲತ: ಅಂಕೋಲಾದವರು. ನಮ್ಮ ಸೊಬಗಿನ ಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಸತ್ವವೆ ಅಂತಹದ್ದು. ಈ ಜಿಲ್ಲೆಯವರು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡೆ ಜೀವನ ನಡೆಸುವವರು. ಈ ವಿಷ್ಯದಲ್ಲಿ ನಮ್ಮ ರಾಜೇಶ್ವರಿಯವರು ಸಹ ಅದನ್ನೆ ಜೀವನದಲ್ಲಿ ಪಾಲಿಸಿಕೊಂಡು ಮುನ್ನಡೆಯುತ್ತಿದ್ದಾರೆ. ನಮ್ಮ ರಾಜೇಶ್ವರಿಯವರು ಪೊಲೀಸ್ ಅಧಿಕಾರಿಯಾಗಿ ನಿವೃತ್ತರಾಗಿದ್ದ ರಾಮ ನಾಯಕ ಹಾಗೂ ಶಿಕ್ಷಕಿಯಾಗಿ ಹಲವು ವರ್ಷಗಳವರೆಗೆ ಅನುಪಮ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲರ ಅಮ್ಮನೆಂದೆ ಜನಪ್ರಿಯತೆಯನ್ನು ಗಳಿಸಿದ ಶಿವಮ್ಮ ಟೀಚರ್ ದಂಪತಿಗಳ ಮುದ್ದಿನ ಮಗಳು. ರಾಜೇಶ್ವರಿಯವರಿಗೆ ರಾಘವೇಂದ್ರ ಎಂಬ ಅಣ್ಣನಿದ್ದಾರೆ. ಅವರು ಉನ್ನತ ಶಿಕ್ಷಣವನ್ನು ಪಡೆದು ಬೆಂಗಳೂರಿನಲ್ಲಿರುವ ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.
ಅಣ್ಣ ರಾಘವೇಂದ್ರ ಪಾಠದಲ್ಲಿ ಮುಂದೆ, ತಂಗಿ ರಾಜೇಶ್ವರಿ ಆಟದಲ್ಲಿ ಮುಂದೆ, ಹಾಗಾಂತ ಹೇಳಿ ರಾಜೇಶ್ವರಿಯವರು ಕಲಿಕೆಯಲ್ಲಿ ದಡ್ಡಿಯಂತೂ ಅಲ್ಲವೆ ಅಲ್ಲ. ಪಸ್ಟ್ ಕ್ಲಾಸ್ ತೇರ್ಗಡೆಗೇನು ಕೊರತೆಯಾಗದೇ ಕಲಿಕೆಯಲ್ಲಿ ತೊಡಗಿಸಿಕೊಂಡವರು ಈ ನಮ್ಮ ಸಹೋದರಿ ರಾಜೇಶ್ವರಿಯವರು.
ರಾಜೇಶ್ವರಿಯವರ ಅಮ್ಮ ಧಾರವಾಡದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವುದರಿಂದ ರಾಜೇಶ್ವರಿಯವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದ ಕೆ.ಇ. ಬೋರ್ಡ್ ಸ್ಕೂಲಿನಲ್ಲಿ ಪಡೆದರು. ಕರ್ನಾಟಕ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು.. ಅದಾದ ಬಳಿಕ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಮತ್ತು ಅಲ್ಲೆ ಬಿ.ಎ ಪದವಿಯನ್ನು ಪಡೆದರು. ಬಿ.ಎ ಓದುತ್ತಿರುವಾಗಲೆ ಕಂಪ್ಯೂಟರ್ ಶಿಕ್ಷಣವನ್ನು ಪಡೆದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ಎಂ.ಎ ಪದವಿಯನ್ನು ಪಡೆದ ಹೆಮ್ಮೆ ರಾಜೇಶ್ವರಿಯವರಿಗಿದೆ.
ರಾಜೇಶ್ವರಿಯವರು ಪ್ರಾಥಮಿಕ ವಿದ್ಯಾರ್ಥಿಯಾಗಿರುವಾಗಲೆ ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆದವರು. ನಾನು ಮೊದಲೆ ಹೇಳಿದಂತೆ ಪಾಠಕ್ಕಿಂತ ಆಟದಲ್ಲೆ ಸದಾ ಮೈಲುಗೈ ಸಾಧಿಸುತ್ತಿದ್ದ ಬಾಲಕಿ ರಾಜೇಶ್ವರಿ ಅವರ ಮನೆ ಓಣಿಯ ಜನರಿಗೇಕೆ, ಶಾಲೆ ಹಾಗೂ ಇನ್ನಿತರ ಊರುಗಳ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಥ್ಲೇಟಿಕ್, ಹೈಜಂಪ್, ಲಾಂಗ್ ಜಂಪ್ ಹೀಗೆ ಎಲ್ಲ ತರಹದ ಕ್ರೀಡೆಗಳಲ್ಲಿಯೂ ತನ್ನ ಸಹಾಸಿಕ ಪ್ರದರ್ಶನವನ್ನು ನೀಡಿ ರಾಶಿ ರಾಶಿ ಬಹುಮಾನವನ್ನು ತನ್ನದಾಗಿಸಿಕೊಂಡ ಶ್ರೇಯಸ್ಸು ರಾಜೇಶ್ವರಿಯವರಿಗೆ ಸಲ್ಲುತ್ತದೆ. ರಾಜೇಶ್ವರಿಯವರು ಆಟದ ಜೊತೆ ಜೊತೆಗೆ ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಜಿಲ್ಲಾಮಟ್ಟದವರೆಗೆ ತನ್ನ ಪ್ರತಿಭೆಯನ್ನು ಸಾದರಪಡಿಸಿದ್ದರು.
ಇಷ್ಟೇಲ್ಲ ಸಾಧನೆಗೈದಿದ್ದ ರಾಜೇಶ್ವರಿಯವರು ವಿದ್ಯಾರ್ಥಿ ದೆಸೆಯಲ್ಲಿರುವಾಗ್ಲೇ ಸಾಹಸಿಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದರು. ಅವರಿಗೆ ದೇಶ ಸೇವೆ ಮಾಡುವ ಸೈನಿಕ ಅಥವಾ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಬೇಕೆಂಬ ಉತ್ಕಟ ಬಯಕೆ. ಆದರೆ ಅವರಮ್ಮನಿಗೆ ಮಗಳಿಗೆ ಕಷ್ಟದ ಕೆಲಸ ಬೇಡ. ನನ್ನಂತೆ ಶಿಕ್ಷಕಿಯಾಗಬೇಕೆಂಬ ಹಂಬಲ.
ಹಾಗಾಗಿ ಓದಿನ ಬಳಿಕ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ 6 ತಿಂಗಳವರೆಗೆ ಉಪನ್ಯಾಸಕಿಯಾಗಿ ಸೇವೆಯನ್ನು ಸಲ್ಲಿಸಿದರು. ಇಲ್ಲಿ ಸೇವೆ ಸಲ್ಲಿಸುತ್ತಿರುವಾಗ್ಲೇ ರವಿಕುಮಾರ್ ನಾಯಕರವರು ಹುಡುಗಿ ನೋಡಲೆಂದು ರಾಜೇಶ್ವರಿಯವರ ಮನೆಗೆ ಹೋಗಿದ್ದರು. ಮೊದಲ ನೋಟದಲ್ಲಿ ರಾಜೇಶ್ವರಿಯವರನ್ನು ಒಪ್ಪಿಕೊಂಡ ರವಿಯವರು ಆನಂತರ ವಿವಾಹವಾಗಿ ರಾಜೇಶ್ವರಿಯವರ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಅಪ್ಪುಗೆಯ ಪ್ರೀತಿ, ಪ್ರೋತ್ಸಾಹವನ್ನು ನೀಡುತ್ತಾ ಆದರ್ಶ ದಂಪತಿಗಳು ಎಂಬುವುದನ್ನು ರುಜುವತು ಪಡಿಸಿದ್ದಾರೆ.
ರಾಮನಿಗೆ ತಕ್ಕ ಸೀತೆಯಂತಿರುವ ನಮ್ಮ ರಾಜೇಶ್ವರಿ ನಾಯಕ:
ಪತಿ ರವಿಯವರು ಸಾಹಸಿಕ ಮನೋಪ್ರವೃತ್ತಿಯವರು. ಅದೇ ರೀತಿಯ ವ್ಯಕ್ತಿತ್ವ ರಾಜೇಶ್ವರಿಯವರದ್ದಾಗಿತ್ತು. ರವಿಯವರ ಎಲ್ಲ ಕೆಲಸ ಕಾರ್ಯಗಳಿಗೆ ಬೆಂಬಲದ ಸ್ಪೂರ್ತಿಯಾಗಿ ನಿಂತವರು ಇದೇ ನಮ್ಮ ರಾಜೇಶ್ವರಿಯವರು. ಒಂದು ರೀತಿಯಲ್ಲಿ ಹೇಳುವುದಾದರೇ ರಾಮನಿಗೆ ತಕ್ಕ ಸೀತೆಯಂತೆ, ರವಿಯವರಿಗೆ ತಕ್ಕಂತೆ ರಾಜೇಶ್ವರಿಯವರು ಇದ್ದಾರೆ. ಹೆತ್ತಮನೆಯನ್ನು ಬೆಳಗಿಸಿದ ರಾಜೇಶ್ವರಿಯವರು ಕೊಟ್ಟ ಮನೆಯಾದ ಪತಿ ಮನೆಗೂ ಆರದ ನಂದಾದೀಪವಾಗಿ ಮನೆಯನ್ನು ಬೆಳೆಗಿಸಿದ್ದಾರೆ, ಬೆಳಗಿಸುತ್ತಲೇ ಇದ್ದಾರೆ. ಅಪ್ಪ, ಅಮ್ಮನಿಗೆ ಮುದ್ದಿನ ಮಗಳಾಗಿದ್ದ ರಾಜೇಶ್ವರಿಯವರು ಇತ್ತ ಅತ್ತೆ, ಮಾವನಿಗೂ ಎಂದು ಸೊಸೆಯಾಗದೇ ಅಕ್ಕರೆಯ ಮಗಳಾಗಿ ಅತ್ತೆ, ಮಾವನ ಒಲುಮೆ, ನಲುಮೆಗೆ ಪಾತ್ರರಾಗಿದ್ದಾರೆ. ಅತ್ತೆ, ಮಾವನನ್ನು ಪ್ರೀತಿಯಿಂದ ಆರಾಧಿಸುತ್ತಿರುವ ರಾಜೇಶ್ವರಿಯವರ ಮಾತೃ ಹೃದಯವನ್ನು ಕೊಂಡಾಡಲೆಬೇಕು.
ಜಿಲ್ಲೆಯಲ್ಲೆ ಗಮನ ಸೆಳೆದ ಸಾಹಸಿ ಮಹಿಳೆ:
ಹೌದು, ಈ ಮಾತು ಅಕ್ಷರಶ: ಸತ್ಯ. ಸಾಹಸ ವಿಷಯದಲ್ಲಿ ನಮ್ಮ ರಾಜೇಶ್ವರಿಯವರು ಜಿಲ್ಲೆಯಲ್ಲೆ ಗಮನ ಸೆಳೆದ ಸಾಧನೆ ಮಾಡಿದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಪ್ರಕೃತಿದತ್ತ ಸ್ಥಳಗಳನ್ನು ಟ್ರಕ್ಕಿಂಗ್ ಮೂಲಕ ಹೋಗಿ ನೋಡಿದ ಸಾಹಸ ಕೆಲಸವನ್ನು ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಸಮಾಜದ ಮುಖ್ಯಭೂಮಿಕೆಯಲ್ಲಿದರ ಅನೇಕ ಪ್ರಾಕೃತಿಕ ವೈವಿಧ್ಯತೆಗಳ ಆಗರವಿರುವ ಸ್ಥಳಗಳನ್ನು ಹಲವರಿಗೆ ಪರಿಚಯಿಸಿದ ಧನ್ಯತೆ ನಮ್ಮ ಸಹೋದರಿ ರಾಜೇಶ್ವರಿಯವರಿಗಿದೆ. ನಮ್ಮ ರಾಜೇಶ್ವರಿಯವರು ಭಾರತದೆಲ್ಲೆಡೆಯ ಅಂದರೆ ನಾಗಲ್ಯಾಂಡ್, ಹಿಮಚಲ ಪ್ರದೇಶ, ಓರಿಸ್ಸಾ, ಆಂದ್ರಪ್ರದೇಶ, ಮಹಾರಾಷ್ಟ್ರ ಹೀಗೆ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಟ್ರಕ್ಕಿಂಗ್ ಮಾಡಿದ್ದಾರೆ.
ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪಿಗೆ ಹೋದ ಜಿಲ್ಲೆಯ ಮೊದಲ ಮಹಿಳೆ:
ಪ್ರಪ್ರಂಚದ ಅತೀ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಶಿಖರದ ಬೆಸ್ ಕ್ಯಾಂಪನ್ನು ತಲುಪಿದ ಜಿಲ್ಲೆಯ ಮೊದಲ ಮಹಿಳೆ ಎಂಬ ಜನಖ್ಯಾತಿ ನಮ್ಮ ರಾಜೇಶ್ವರಿಯವರಿಗೆ ಸಲ್ಲುತ್ತದೆ. ಆತ್ಮವಿಶ್ವಾಸ, ಹಟಬಿಡದ ಪ್ರಯತ್ನ, ಸಾಧಿಸಬೇಕೆನ್ನುವ ಅಚಲವಾದ ಗುರಿಯೆ ಅವರ ಈ ಸಾಧನೆಗೆ ಕಾರಣವಾಯಿತೆನ್ನಿ.
ಜಬರ್ದಸ್ತು ಪೊಟೋಗ್ರಾಪರ್:
ನಮ್ಮ ರಾಜೇಶ್ವರಿಯವರು ಯಾವುದರಲ್ಲೂ ಕಮ್ಮಿಯಿಲ್ಲ. ಅವರೊಬ್ಬರು ಜಬರ್ದಸ್ತು ಪೊಟೋಗ್ರಾಪರ್ ಆಗಿ ಗಮನ ಸೆಳೆದಿದ್ದಾರೆ. ಪ್ರಕೃತಿಯ ಸುಂದರ ವೈವಿಧ್ಯತೆ ಮತ್ತು ವಿಸ್ಮಯಗಳನ್ನು ತಮ್ಮ ಹದ್ದಿನ ಕ್ಯಾಮಾರ ಕಣ್ಣಿನ ಮೂಲಕ ಸೆರೆ ಹಿಡಿದಿದ್ದಾರೆ. ಅವರ ಅನೇಕ ಛಾಯಚಿತ್ರಗಳು ಗಮನ ಸೆಳೆದಿವೆ.
ಮನೆಯಲ್ಲಿದ್ದುಕೊಂಡೆ ಮಾರ್ಕೆಂಟಿಂಗ್ ಮ್ಯಾನೇಜರ್ ಸೇವೆ ನೀಡುತ್ತಿರುವ ರಾಜೇಶ್ವರಿ :
ಪತಿ ರವಿ ನಾಯಕ ರವರ ದೇಶದ ಬಹುದೊಡ್ಡ ರ್ಯಾಪ್ಟಿಂಗ್ ಉದ್ಯಮವಾದ ಕಾಳಿ ರಿವರ್ ಎಡ್ವೆಂಚರ್ಸ್ ಇದರ ಮಹಾರಾಷ್ಟ್ರದ ಘಟಕವನ್ನು ಬಹುತೇಕವಾಗಿ ನಿಯಂತ್ರಿಸುತ್ತಿರುವವರು ನಮ್ಮ ರಾಜೇಶ್ವರಿಯವರೆ. ಮನೆಯಲ್ಲೆ ಕುಳಿತು ವೆಬ್ಸೈಟ್ ಮೂಲಕ ಮಹಾರಾಷ್ಟ್ರದ ರ್ಯಾಪ್ಟಿಂಗ್ ಉದ್ಯಮಕ್ಕೆ ಮಾರ್ಕೆಂಟಿಂಗ್ ಮ್ಯಾನೇಜರ್ ಆಗಿ ರಾಜೇಶ್ವರಿಯವರು ರವಿಯವರು ಮನಮೆಚ್ಚುವಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ಮಕ್ಕಳು, ಅತ್ತೆ, ಮಾವ ಹೀಗೆ ಸಂಸಾರವನ್ನು ನಿಭಾಯಿಸುವುದರ ಜೊತೆಗೆ ಸ್ವಾವಲಂಬಿಯಾಗಿ ಆರ್ಥಿಕ ಸದೃಢತೆಯಲ್ಲಿ ಯಶಸ್ವಿಯಾದ ರಾಜೇಶ್ವರಿ ನಾಯಕರವರ ಶ್ರಮ ಅದು ಸಾರ್ಥಕತೆಯ ಶ್ರಮವಾಗಿದೆ.
ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತೆ ರಾಜೇಶ್ವರಿ:
ರಾಜೇಶ್ವರಿಯವರ ಬಗ್ಗೆ ಬಹಳ ಗೌರವ ಯಾಕಿದೆ ಅಂದ್ರೆ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದೆಂಬ ನಿಲುವಿನಡಿಯಲ್ಲಿ ಅವರು ಬದುಕು ಕಟ್ಟಿಕೊಂಡವರು. ನನಗೆ ತಿಳಿದಿರುವ ಪ್ರಕಾರ ಸಂಕಷ್ಟದಲ್ಲಿದ್ದವರಿಗೆ, ಬಡ ಮಕ್ಕಳ ಶಿಕ್ಷಣಕ್ಕೆ ತಕ್ಷಣವೆ ಸ್ಪಂದಿಸುವುದರ ಮೂಲಕ ನಿಜವಾದ ಕಣ್ಣೀರನ್ನು ಒರೆಸಿದ ಮತ್ತು ಒರೆಸುತ್ತಿರುವ ಮಮತಾಮಯಿಯಾಗಿದ್ದಾರೆ.
ವಿರಸವಿಲ್ಲದ ಮನೆಯ ಗೃಹಲಕ್ಷ್ಮೀ -ರಾಜೇಶ್ವರಿ
ಪತಿ ರವಿಯವರನ್ನು ವಿವಾಹವಾಗಿ ಇಷ್ಟು ವರ್ಷಗಳಾದರೂ ಒಂದು ದಿನವೂ ಜಗಳವಿಲ್ಲ, ಕೋಪವಿಲ್ಲ. ಅವರ ಮನೆ ಒಂದು ರೀತಿಯಲ್ಲಿ ಹೇಳುವುದಾದರೇ ಅದು ಆನಂದದ ಸಾಗರ. ವಿರಸವಿಲ್ಲದೇ ಸದಾ ಸಂಭ್ರಮವನ್ನೆ ಆಸ್ತಿಯನ್ನಾಗಿಸಿದ ಮನೆಯ ಗೃಹಲಕ್ಷ್ಮೀಯಾಗಿ ರಾಜೇಶ್ವರಿಯವರು ಮನೆ ಬೆಳಗಿದ್ದಾರೆ.
ಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿ ಮುನ್ನುಗ್ಗುತ್ತಿರುವ ದಿಟ್ಟ ಮಹಿಳೆ ರಾಜೇಶ್ವರಿಯವರ ಜೀವನ ಸಾಧನೆಗೆ ಅವರ ಅಪ್ಪ ಹಾಗೂ ಅವರಮ್ಮ, ಅತ್ತೆ, ಮಾವನ ಆಶೀರ್ವಾದ, ಅಣ್ಣನ ಮಾರ್ಗದರ್ಶನ, ಸದಾ ಪ್ರೀತಿ, ಪ್ರೋತ್ಸಾಹ ನೀಡಿ ಹರಸುತ್ತಿರುವ ಪತಿ ರವಿಯವರ ಮನದಾಳದ ಬೆಂಬಲ, ಮುದ್ದು ಮಕ್ಕಳಾದ ಗಗನ್ ಮತ್ತು ನಂದನ್ ಅವರುಗಳ ಅಕ್ಕರೆ, ಅಭಿಮಾನದ ಪ್ರೀತಿ, ಕುಟುಂಬಸ್ಥರ, ಬಂಧುಗಳ, ಗೆಳತಿಯರ ಸಹಕಾರವು ಪ್ರಮುಖ ಕಾರಣ.
ಹಲವಾರು ಸನ್ಮಾನಗಳಿಗೆ ಬಾಜನರಾದ ಸ್ವಚ್ಚ ಹೃದಯದ ಸಹೋದರಿ, ರಾಣಿಯಂತೆ ಬದುಕು ನಡೆಸುತ್ತಿರುವ ಪರೋಪಕಾರಿ ರಾಜೇಶ್ವರಿ ನಾಯಕರವರಿಗೆ ಮಗದೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಸಹೋದರ,
ಸಂದೇಶ್.ಎಸ್.ಜೈನ್



No comments:
Post a Comment