Thursday, January 31, 2019




ಉತ್ತರಕನ್ನಡ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಕುಣಬಿ ಮತ್ತು ಸಿದ್ದಿ ಬುಡಕಟ್ಟು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪರಿಣಾಮಕಾರಿಯಾಗಿ ಶ್ರಮಸಾಧನೆಗೈದ, ಹಿರಿಯ ವಾಗ್ಮಿ, ಚಿಂತಕ, ಲೇಖಕ, ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹಾಗೂ ಅಧ್ಯಯನಶೀಲ ವ್ಯಕ್ತಿತ್ವದ ಗುಣಸಂಪನ್ನ ನನ್ನಣ್ಣ ಎಂದೆ ಹೆಮ್ಮೆಯಿಂದ ಎದೆ ತಟ್ಟಿ ಹೇಳಲು ಹೆಮ್ಮೆಯೆನಿಸುವ ಬಿ.ಪಿ.ಮಹೇಂದ್ರಕುಮಾರ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಬುಡಕಟ್ಟು ಸಮುದಾಯಗಳ ಸೀಮಾಪದ್ಧತಿ: ತಾತ್ವಿಕ ವಿವೇಚನೆ ಎಂಬ ಉತ್ತರಕನ್ನಡ ಜಿಲ್ಲೆಯ ಕುಣಬಿ ಸಮುದಾಯವನ್ನು ಕೇಂದ್ರವಾಗಿಸಿಕೊಂಡು ವಿವಿಧ ಬುಡಕಟ್ಟು ಸಮುದಾಯಗಳ ಸೀಮಾ ಪದ್ಧತಿಯ ತೌಲನಿಕ ಅಧ್ಯಯನ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಇಂದು ಡಾಕ್ಟರೇಟ್ (ಪಿ.ಎಚ್.ಡಿ) ಪದವಿಯನ್ನು ಪ್ರಧಾನ ಮಾಡಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ: ಎ.ಎಸ್.ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಬಿ.ಪಿ.ಮಹೇಂದ್ರಕುಮಾರ್ ಅವರು ಮೊತ್ತಮೊದಲ ಬಾರಿಗೆ ಬುಡಕಟ್ಟು ಸಮುದಾಯಗಳ ಸೀಮಾ ಪದ್ಧತಿ: ತಾತ್ವಿಕ ವಿವೇಚನೆ ಎಂಬ ಮಹಾಪ್ರಬಂಧವನ್ನು ಮಂಡಿಸಿ ಇಂದು ಪಿ.ಎಚ್.ಡಿ ಪದವಿಯನ್ನು ಪಡೆಯುವುದರ ಮೂಲಕ ಜೀವನದ ಮಹತ್ವದ ಹಾಗೂ ಅಮೃತ ಘಳಿಗೆಯನ್ನು ತನ್ನತ್ತ ಬರಮಾಡಿಕೊಂಡರು.

6 ವರ್ಷಗಳ ನಿರಂತರ ಪ್ರಯತ್ನ, ಪರಿಶ್ರಮ, ತನ್ನೆಲ್ಲಾ ಸುಖವನ್ನು ತ್ಯಾಗಮಾಡಿ ರಾತ್ರಿ ಹಗಲೆನ್ನದೆ ಸಂಶೋಧನೆಯನ್ನು ನಡೆಸಿ, ಅದಕ್ಕೆ ವಸ್ತುನಿಷ್ಟವಾದ ರೂಪವನ್ನು ಕೊಟ್ಟು ಸ್ಮರಣೀಯ ಮತ್ತು ಇತಿಹಾಸದ ಪುಟದಲ್ಲಿ ದಾಖಲಾಗಬಹುದಾದ ಅತೀ ಮಹತ್ವದ ಪ್ರಬಂಧವನ್ನು ಮಂಡಿಸಿ ಬುಡಕಟ್ಟು ಸಮುದಾಯದ ಭವಿಷ್ಯದ ಉನ್ನತ ಬೆಳಕಿಗೆ ಜೀವನ ಸವೆಸಿದ ಮಹೇಂದ್ರಾಜೀಯವರ ಸಾರ್ಥಕ ಕಾರ್ಯಕ್ಕೆ ಗೌರವದಿಂದ ಶಿರಬಾಗುವೆ.

ಜೀವನದಲ್ಲಿ ಹಲವಾರು ಎಡರು ತೊಡರುಗಳನ್ನು, ನೋವು ನಲಿವುಗಳನ್ನು ಉಂಡು ತಿಂದು ಬೆಳೆದು, ಇನ್ನೊಬ್ಬರಿಗಾಗಿ, ತುಳಿತಕ್ಕೊಳಗಾದ ಸಮಾಜಕ್ಕಾಗಿ ತನ್ನನ್ನು ಸಮರ್ಪಣಾಭಾವದಿಂದ ಸಮರ್ಪಿಸಿರುವುದರ ಫಲವೆ ಅವರಿಗೆ ಡಾಕ್ಟರೇಟ್ ಪದವಿ ದೊರೆಯಲು ಬಹುಮೂಲ್ಯ ಕಾರಣ ಎಂದು ಹೇಳಬಹುದು.

ಇನ್ನೊಬ್ಬರ ನಾಳೆಯ ಒಳಿತಿಗಾಗಿ ಬದುಕು ಕಟ್ಟಿಕೊಂಡ ಸ್ವಚ್ಚ ಹೃದಯದ ಹಟಯೋಗಿ ಮಹೇಂದ್ರಕುಮಾರ್ ಅವರ ಅಪರೂಪದ ಅಪೂರ್ವ ಸಾಧನೆಗೆ ಮಗದೊಮ್ಮೆ ಗೌರವಪೂರ್ವಕ ಅಭಿವಂದನೆಗಳು. ಅವರ ಈ ಕಾರ್ಯಕ್ಕೆ ತುಂಬು ಮನಸ್ಸಿನಿಂದ ಸಹಕರಿಸಿದ ಅವರ ಮಡದಿ ಸಿಂಚನಾ ಅವರಿಗೆ, ಮಕ್ಕಳಾದ ಸಸ್ಯ ಹಾಗೂ ಶೌರ್ಯ ಅವರ ಮಮಕಾರದ ಪ್ರೀತಿಗೆ ಬಿಗ್ ಹ್ಯಾಟ್ಸ್ ಆಫ್.

ಈ ಮಹಾಪ್ರಬಂಧ ಅದ್ವಿತೀಯ ಪ್ರಬಂಧವಾಗಿ, ಗ್ರಂಥವಾಗಿ ಬುಡಕಟ್ಟು ಸಮುದಾಯದ ಬದುಕಿಗೆ ಬೆಳಕಿಂಡಿಯಾಗಲೆಂದು ಪ್ರಾರ್ಥಿಸುವುದರ ಜೊತೆಗೆ ಸಾಧನೆಗೆ ಮನಸ್ಸು ಇರಬೇಕು, ಛಲವಿರಬೇಕೆಂಬ ಸಂದೇಶವನ್ನು ಸಾರಿದ ಮಹೇಧ್ರಕುಮಾರ್ ಅವರ ಹಟಸಾಧನೆಗೆ ಮತ್ತು ಗುರಿ ಸಾಧನೆಗೆ ಕೈಮುಗಿದು ನಮಿಸುವೆ.

ಸುಖವಾಗಿರಿ, ಶುಭವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್

 

Wednesday, January 30, 2019

ಜನ್ಮದಿನದ ಸಂಭ್ರಮದಲ್ಲಿ ಜೀವದ ಗೆಳೆಯ ಪ್ರಮೋದ ನಾಯರ್
ಶ್ರಮ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಯಶಸ್ವಿ ಯುವಕ ಪ್ರಮೋದ
ಅವನ ಹೆಸರು ಪ್ರಮೋದ ನಾಯರ್. ಆತನಿಗೆ ಎಲ್ಲರು ಬೇಕು. ಇನ್ನೊಬ್ಬರ ಕಷ್ಟ ನಿವಾರಣೆಗಾಗಿಯೆ ಜನ್ಮವೆತ್ತಿ ಬಂದ ಹೆಮ್ಮೆಯ ಕುವರ. ಗೆಳೆಯರಿಗಾಗಿ ಜೀವವನ್ನು ಕೊಡುವ ನಿಸ್ವಾರ್ಥ ಮನಸ್ಸಿನ ಸರಳ ಗುಣಸಂಪನ್ನ. ಅಪ್ಪ, ಅಮ್ಮನಿಗೆ ಮುದ್ದಿನ ಮಗನಾದರೂ, ಅಪ್ಪ, ಅಮ್ಮನಿಗೆ ಸುಂದರ ಮತ್ತು ಸ್ವಚ್ಚ ಮನಸ್ಸಿನ ಗೆಳೆಯನಂತಿರುವ ಸುಂದರ ಮೈಕಟ್ಟಿನ ನಗುಮೊಗದ ಯುವಕ.

ಆತ ಮೂಲತ: ಕೇರಳದವನಿರಬಹುದು. ಆದ್ರೆ ಆತನ ತಂದೆ ಉದ್ಯೋಗವನ್ನರಸಿ ಬಂದದ್ದು ದಾಂಡೇಲಿಗೆ. ಹಾಗಾಗಿ ಆತನ ಜನ್ಮ ಕಾಳಿ ನದಿಯ ವಿಹಂಗಮ ತಟದ ಬಳಿಯಿರುವ ದಾಂಡೇಲಿಯಲ್ಲಿ ಆಯ್ತೆನ್ನಿ.  ಅವನು ಬೇರೆ ಯಾರು ಅಲ್ಲರೀ. ನಾನು ಆರಂಭದಲ್ಲೆ ಹೇಳಿದಂತೆ ಎಲ್ಲರ ಮೆಚ್ಚಿನ ಮತ್ತು ಹೆಚ್ಚಿಗೆ ಪ್ರೀತಿ ಕೊಡುವ ಮುದ್ದಿನ ಗೆಳೆಯ ನಮ್ಮೂಡುಗ ಪ್ರಮೋದ ನಾಯರ್. ಇಂದವ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಈ ಶುಭ ಸಂದರ್ಭದಲ್ಲಿ ನನ್ನೊಳವಿನ ಪ್ರಮೋದನಿಗೆ ಜನ್ಮದಿನದ ಮನದುಂಬಿದ ಹಾರ್ದಿಕ ಶುಭಾಶಯಗಳನ್ನು ಪ್ರೀತಿಯ ಮನಸ್ಸಿನಿಂದ ಅರ್ಪಿಸಿ ಮುಂದಿನ ಬರವಣಿಗೆಗೆ ಹೆಜ್ಜೆಯನ್ನಿಡುತ್ತಿದ್ದೇನೆ.

ಬಹುಷ: ಕೇರಳದವರೆಂದ್ರೆ ಬೆವರು ಸುರಿಸಿ ಶ್ರಮ ಸಾಧನೆಯ ಮೂಲಕ ಬದುಕು ನಡೆಸುವವರು ಎಂದು ಅಭಿಮಾನ ಮತ್ತು ಬಿಗುಮಾನದಿಂದ ಹೇಳಲು ನನಗಂತೂ ಸ್ವಲ್ಪವೂ ಸಂಕೋಚವಿಲ್ಲ. ನನಗೇಕೆ ಕೇರಳಿಯರು ಇಷ್ಟವಾಗುತ್ತಾರೆಂದ್ರೆ, ಅವರು ಬೆವರು ಸುರಿಸಿ ಕಷ್ಟಪಟ್ಟು ಜೀವನದಲ್ಲಿ ಯಶಸ್ಸನ್ನು ಕಾಣುವಂತಹ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು. ನಾನು ಸೇರಿ ನನ್ನ ಜೇಬಲ್ಲಿ 500 ರ ನೋಟು ಇದ್ದ ಕೂಡ್ಲೆ ಮಾರ್ಕೆಟಿಗೆ ಹೋಗಿ 1 ಕೇಜಿ ಪ್ರುಟ್ಸ್ ಖರೀದಿಸುತ್ತೇನೆ. ಆದ್ರೆ ಜೇಬಲ್ಲಿ ದುಡ್ಡು ಇಲ್ಲದಿದ್ದಾಗ ಮತ್ತೇ ಮರಳಿ ಹಿಂದಿನ ಸ್ಥಿತಿಯತ್ತ ಹೋಗುತ್ತೇನೆ. ಆದರೆ ಕೇರಳಿಗರು ಮಾತ್ರ ಡಿಫರೆಂಟ್ ಕಣ್ರೀ. ಎಲ್ಲಿ ಕೇರಳಿಗರು ಹೋಗುತ್ತಾರೆ, ಅಲ್ಲಿ ಮರಗೆಣಸು ಇದ್ದೇ ಇರುತ್ತದೆ. ನಂಗೊತ್ತು ಇವತ್ತಿಗೂ ನಮ್ಮ ಪ್ರಮೋದ ನಾಯರ್ ಮನೆಯಂಗಳದಲ್ಲಿ ಮರಗೆಣಸಿನ ಗಿಡವಿದೆ.  ನಾನ್ಯಾಕೆ ಹೇಳ್ತೇನೆಂದ್ರೆ, ಹಾಸಿಗೆ ಇದ್ದಷ್ಟೆ ಕಾಲು ಚಾಚುವವರು ನಮ್ಮ ಕೇರಳಿಗರು. ಆದ್ರೆ ನಾನು ಹಾಸಿಗೆ ತೆಗೆದುಕೊಳ್ಳಲು ದುಡ್ಡು ಇಲ್ಲದಿದ್ದರೂ ಸಾಗುವಾಣಿಯ ಮಂಚ ಮಾಡಲು ಮುಂದೆ ಹೋಗುತ್ತೇನೆ. ನಾನು ಸೇರಿ ಬಹಳಷ್ಟು ಜನ ಅಲ್ಪ ದಿನದ ಖುಷಿಗೋಸ್ಕರವೆ ಶಾಶ್ವತ ಸುಖವನ್ನು ಮರೆಯುತ್ತೇವೆ. ಆದರೆ ನಮ್ಮ ಕೇರಳಿಗರು ಬಹುಕಾಲದ ಸುಖಕ್ಕಾಗಿ ಅಲ್ಪವರ್ಷ ತಮ್ಮ ಖುಷಿಯನ್ನು, ನೆಮ್ಮದಿಯನ್ನು ತ್ಯಾಗ ಮಾಡುತ್ತಾರೆ. ಅದಕ್ಕಾಗಿ ಅವರು ಜೀವನದಲ್ಲಿ ಸಫಲತೆ ಕಾಣುತ್ತಾರೆ, ನನ್ನಂಥವರು ಜೀವನದಲ್ಲಿ ವಿಫಲತೆಯನ್ನು ಕೈಯಾರೆ ಸ್ವೀಕರಿಸಬೇಕಾದ ಅನಿವಾರ್ಯ ಸಂದಿಗ್ದತೆಗೆ ಒಳಗಾಗಬೇಕಾದ ಸ್ಥಿತಿಯನ್ನು ಅಲ್ಪ ಖುಷಿಗಾಗಿ ತರುತ್ತೇವೆ. ಹಾಗಾಗಿ ಕೇರಳಿಗರು ಎಲ್ಲೆ ಹೋದರು ಜೀವನಯಶಸ್ಸನ್ನು ಕಾಣುತ್ತಾರೆ, ಯಾಕಿರಬಹುದು ಎಂಬುವುದಕ್ಕೆ ಇದೊಂದು ಸಣ್ಣ ಉದಾಹರಣೆ ಎನ್ನಿ.

ಇದೆಲ್ಲಾ ಯಾಕೆ ಉಸಾಬರಿ ಎನ್ನಬಹುದು. ನೀವು ಹಾಗೆ ಅಂದ್ರುನೂ ಬೇಜಾರಿಲ್ಲ. ನಮ್ಮ ಪ್ರಮೋದ ನಾಯರ್ ಶ್ರಮ ಸಾಧನೆಯ ಮೂಲಕ ಜೀವನದ ಯಶಸ್ಸನ್ನು ಕಂಡ ಅಪ್ಪಟ ಶ್ರಮಸಾಧಕ. ಹಾಗಾಗಿ ಇಷ್ಟೆಲ್ಲಾ ಬರೆಯಬೇಕಾಯ್ತಿನ್ನಿ.

ಅಂದ ಹಾಗೆ ನಮ್ಮ ಪ್ರಮೋದ ನಾಯರ್ ಬಹಳ ಶ್ರೀಮಂತಿಕೆಯ ಸುಪ್ಪೊತ್ತಿಗೆಯಲ್ಲಿ ಬೆಳೆದವನಲ್ಲ. ಉದ್ಯೋಗವನ್ನರಸಿ ಕೇರಳದಿಂದ ದಾಂಡೇಲಿಯ ಐಪಿಎಂ ಕಾರ್ಖಾನೆಯಲ್ಲಿ ಕಾರ್ಮಿನಾಗಿ ವೃತ್ತಿ ಮಾಡಲು ಬಂದ ಪ್ರಭಾಕರ ಹಾಗೂ ತಾಯಿ ಹೃದಯದ ಪ್ರೇಮಾ ದಂಪತಿಗಳ ಮುದ್ದಿನ ಕುವರ. ನಮ್ಮ ಪ್ರಮೋದನಿಗೆ ನಮ್ಮ ನಗರ ಸಭೆಗೆ ಚೊಚ್ಚಲ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ಸುಸಂಸ್ಕೃತ ಮನಸ್ಸಿನ ಪ್ರೀತಿ ಮತ್ತು ಸೀಯಾ ಎಂಬ ಅಕ್ಕಂದಿರರಿದ್ದಾರೆ.

ಪ್ರಮೋದ ನಾಯರ್ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವನಶ್ರೀನಗರದ ಪರಿಜ್ಞಾನಾಶ್ರಮ ಶಿಕ್ಷಣ ಸಂಸ್ಥೆಯಲ್ಲಿ ಪಡೆದನು. ಓದಿನಲ್ಲಿ ಬುದ್ದಿವಂತನಲ್ಲದಿದ್ದರೂ ದಡ್ಡನಂತೂ ಅಲ್ಲವೆ ಅಲ್ಲ. ಆದರೆ ಸ್ವಲ್ಪ ಹುಡುಗಾಟಿಗೆ ಬುದ್ದಿ ಇದ್ದರೂ ಕಷ್ಟದಲ್ಲಿದ್ದವರಿಗೆ ತನ್ನ ಊಟದ ಡಬ್ಬಿಯಿಂದ ಊಟವನ್ನು ಹಂಚಿ ತಿನ್ನುತ್ತಿದ್ದ ಸರ್ವಶ್ರೇಷ್ಟ ಗುಣವನ್ನು ಹೊಂದಿದ್ದ ಅಪರೂಪದ ಅಪೂರ್ವ ಬಾಲಕನಾಗಿದ್ದವ ಎನ್ನುವುದು ಇಲ್ಲಿ ಉಲ್ಲೇಖನೀಯ.

ಎಸ್.ಎಸ್.ಎಲ್.ಸಿ ಯಾದ ನಂತರ ಮುಂದೆ ಓದೋ ಎಂಬ ಅಪ್ಪ, ಅಮ್ಮನ ಹಟವಿದ್ದರೂ, ಇಷ್ಟೆ ಸಾಕೆಂಬ ಆಗ್ರಹ ನಮ್ಮ ಪ್ರಮೋದನದ್ದಾಗಿತ್ತು. ಹಾಗಾಗಿ ಎಸ್.ಎಸ್.ಎಲ್.ಸಿಗೆ ಅವನ ಶಿಕ್ಷಣ ಮುಗಿಯಲ್ಪಟ್ಟಿತ್ತು. ಶಾಲಾ ವಿದ್ಯಾರ್ಥಿಯಾಗಿರುವಾಗ ನಮ್ಮ ಪ್ರಮೋದ ಅತ್ಯುತ್ತಮ ಕಬಡ್ಡಿ ಪಟುವಾಗಿ ಗಮನ ಸೆಳೆದಿದ್ದ. ಆದರೆ ಆ ಸಮಯದಲ್ಲಿ ಕಬಡ್ಡಿಗೆ ಪ್ರಾಮುಖ್ಯತೆ ಸರಿಯಾಗಿ ಸಿಗದೇ ಇದ್ದ ಕಾರಣ ಅದರಲ್ಲಿ ಯಶಸ್ಸಿನ ಫಲಶೃತಿ ಪಡೆಯಲಾಗಲಿಲ್ಲ ಎನ್ನುವುದು ಸತ್ಯದ ಮಾತು.

ಮುಂದೆ ಸ್ಮಾರ್ಟ್ ಹುಡುಗನಿಗೆ ಕೆಲಸ ಕೊಡುವವರಾದರೂ ಯಾರು ಎಂಬ ಚಿಂತೆಯಲ್ಲಿರುವಾಗ್ಲೆ ಅಲ್ಲಿ ಇಲ್ಲಿ ಡ್ರೈವಿಂಗ್ ಕಲಿತುಕೊಂಡು ಲೈಸನ್ಸ್ ಆಗುವ ಮುನ್ನವೆ ಚಾಲಕನಾಗಿ ಸೇವೆಯನ್ನು ಸಲ್ಲಿಸಲಾರಂಭಿಸಿದ. ಆನಂತರದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಗಟ್ಟಿಗೊಳಿಸಿಕೊಂಡಿದ್ದ ಮಂಜು ರಾಥೋಡ ಅವರ ಐಪಿಎಂ ನಲ್ಲಿರುವ ಹೋಂ ಸ್ಟೆಯಲ್ಲಿ ಕೆಲ ವರ್ಷ ಕೆಲಸ ನಿರ್ವಹಿಸಿದ. ಇಲ್ಲಿಂದ ಪ್ರಮೋದ ನಾಯರ್ ವೈಯಕ್ತಿಕವಾಗಿ ಜೀವನದಲ್ಲಿ ಹೊಸತನವನ್ನು ಸಾಧಿಸಬೇಕು, ಅಪ್ಪ, ಅಮ್ಮನಿಗೆ ಹೆಮ್ಮೆಯ ದಿಟ್ಟ ಮಗನಾಗಬೇಕೆಂದು ಬಯಸಿ, ಡ್ರೈವಿಂಗ್ ಲೈಸನ್ಸ್ ಪಡೆದು, ಆದಾದನಂತರ ಪಾಸ್ ಪೋರ್ಟ್ ಮಾಡಿಸಿಕೊಂಡು, ವಿದೇಶದಲ್ಲಿ ಕೆಲಸ ಮಾಡಿಕೊಳ್ಳಬೇಕೆಂದು ಹಟಸಾಧಿಸಿ, ಅವರಿವರ ಬಳಿ ನಿವೇಧಿಸಿಕೊಂಡು ಪ್ರಯತ್ನ ಪಡಲು ಆರಂಭಿಸಿದ. ಕೊನೆಗೂ ಅವನ ಪ್ರಯತ್ನ ಕೈಗೂಡಿತು. ಅದರ ಫಲವಾಗಿ ಕಳೆದ ನಾಲ್ಕೈದು ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡುವ ಸುಯೋಗ ನಮ್ಮ ಪ್ರಮೋದನ ಪಾಲಿಗೆ ಲಭಿಸಿತ್ತು.

ವಿದೇಶದಲ್ಲಿ ಉದ್ಯೋಗ ಮಾಡುವುದರ ಮೂಲಕ ಆರ್ಥಿಕ ಚೇತರಿಕೆ ಕಂಡ ಪ್ರಮೋದ ಇಂದು ಜೀವನ ಯಶಸ್ಸಿನ ನಾಗಲೋಟದಲ್ಲಿ ಮುನ್ನಡೆಯುತ್ತಿದ್ದಾನೆ. ಅವನ ಬೇಕು ಬೇಡಗಳನ್ನು ಪೊರೈಸಿಕೊಂಡಿದ್ದಾನೆ. ಅಪ್ಪ, ಅಮ್ಮನ ಮನಸ್ಸು ಗೆಲ್ಲುವ ಕೆಲಸವನ್ನು ಆತ ಮಾಡುತ್ತಿದ್ದಾನೆ. ಅಕ್ಕಂದಿರರಿಬ್ಬರಿಗೆ ಬೆಸ್ಟ್ ಪ್ರೆಂಡ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. 

ಮೃದು ಹೃದಯದ ಪ್ರಮೋದ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾನೆ. ಜನ್ಮಕೊಟ್ಟ ದಾಂಡೇಲಿಯಲ್ಲೆ ಬದುಕು ಕಟ್ಟಿಕೊಳ್ಳುವ ಶಪಥಗೈದಿದ್ದಾನೆ. ಮುಂದಿನ ದಿನಮಾನದಲ್ಲಿ ದಾಂಡೇಲಿಯೆ ಮೆಚ್ಚುವಂತಹ ಸಾಹುಕಾರನಾಗುವ ಎಲ್ಲ ಅರ್ಹತೆಗಳನ್ನು ಮೈಗೂಡಿಸಿಕೊಂಡು ಬೆಳೆದು ನಿಂತ ನಮ್ಮ ಪ್ರಮೋದನ ಯಶಸ್ಸಿಗೆ ಅವನಪ್ಪ ಹಾಗೂ ಅವನಮ್ಮನ ಆಶೀರ್ವಾದ, ಸಹೋದರಿಯರ ಮಾರ್ಗದರ್ಶನ, ಸಮಾಜಸೇವಕ ಭಾವ ಉದಯ ನಾಯರ್ ಅವರ ಗೌರವದ ಭಯ, ಕುಟುಂಬಸ್ಥರ, ಬಂಧುಗಳ ಪ್ರೀತಿ, ಗೆಳೆಯರ ಪ್ರೀತಿ, ಸಹಕಾರವೆ ಪ್ರಮುಖ ಕಾರಣ. ಅದರಲ್ಲೂ ವಿಶೇಷವಾಗಿ ಅವನ ಜೀವದ ಗೆಳೆಯರಾದ ರಚಿತ್, ದೇವೇಂದ್ರ ಮತ್ತು ಸಂತೋಷ್ ಗಂಗಾಧರ್ ಅವರುಗಳ ಹೃದಯದ ಪ್ರೀತಿಯೂ ಬಹುಮಾಲ್ಯ ಕಾರಣವಾಗಿದೆ.

ನನ್ನೊಳವಿನ ಮಧುರ ಮನಸ್ಸಿನ ಅಪರಂಜಿಯಾಗಿರುವ ಪ್ರಮೋದ ನಾಯರನಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶಭಾಶಯಗಳನ್ನು ತಿಳಿಸುತ್ತಾ, ಮುಂದಿನ ವರ್ಷ ಜೋಡಿಯಾಗಿ ಜನ್ಮದಿನವನ್ನು ಆಚರಿಸುವ ಸೌಭಾಗ್ಯ ಪ್ರಮೋದನ ಪಾಲಿಗೆ ಒದಗಿ ಬರಲೆಂಬ ಪ್ರಾರ್ಥನೆಯೊಂದಿಗೆ.

ನಿಮ್ಮವ

ಸಂದೇಶ್.ಎಸ್.ಜೈನ್








ದಾಂಡೇಲಿ : ಹಳಿಯಾಳದ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಅರ್ಪಿಸುವ ಕುಂದಾಪುರದ ರೂಪಕಲಾ(ಕುಳ್ಳಪ್ಪು) ಇವರ ಸಹಯೋಗದೊಂದಿಗೆ ಅಂತಾಷ್ಟ್ರೀಯ ಖ್ಯಾತಿಯ ಮೂರುಮುತ್ತು ಕಲಾವಿದರಿಂದ ದಿ: ಕೆ.ಬಾಲಕೃಷ್ಣ ಪೈ ಯವರು ರಚಿಸಿದ ಕರಾವಳಿ ಮುತ್ತು ಖ್ಯಾತಿಯ  ಸತೀಶ ಶೆಟ್ಟಿಯವರ ನಿರ್ದೇಶನದಲ್ಲಿ ಹಾಸ್ಯಮಯ ಮೂರುಮುತ್ತು ಎಂಬ ನಗೆ ನಾಟಕವು ಉಚಿತವಾಗಿ ಫೆಬ್ರವರಿ: 03 ರಂದು ಭಾನುವಾರ ಸಂಜೆ 5.30 ಗಂಟೆಗೆ ಸರಿಯಾಗಿ ಕಾಗದ ಕಾರ್ಖಾನೆಯ ರಂಗನಾಥ ಸಭಾಭವನದಲ್ಲಿ ಜರಗಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ಮೂರುಮುತ್ತು ಕಲಾವಿದರುಗಳಿಂದ ಕೂಡಿದ ಹಾಸ್ಯಮಯ ನಗೆ ನಾಟಕವಾದ ಈ ನಾಟಕ ರಂಗಭೂಮಿಯ ಇತಿಹಾಸದಲ್ಲೆ ವಿಶಿಷಟ್ ದಾಖಲೆ ಬರೆಯುವದರ ಜೊತೆಗೆ 1400 ನೇ ಪ್ರಯೋಗವನ್ನು ಕಂಡಿದೆ. ಕರ್ನಾಟಕದೆಲ್ಲಡೆ ಪ್ರದರ್ಶನ ಕಂಡಿರುವುದಲ್ಲದೇ, ದೆಹಲಿ, ಮಹಾರಾಷ್ಟ್ರ, ಗುಜರಾತ್, ಗೋವಾ, ಕೇರಳ, ಆಂದ್ರಪ್ರದೇಶ, ತಮಿಳುನಾಡಿನಲ್ಲಿಯೂ ಯಶಸ್ವಿ ಪ್ರದರ್ಶನ ಕಂಡು, ದುಬೈ, ದೋಹಾ, ಕತರಾ, ಕುವೈತಿನಲ್ಲಿಯೂ ಅಮೋಘ ಪ್ರದರ್ಶನವನ್ನು ಕಂಡು ಅಲ್ಲಿಯ ಜನರಿಂದ ಭೇಷ್ ಎನಿಸಿಕೊಂಡಿದೆ.

ಕಲ್ಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಮಜಾಟಾಕೀಜ್ ನಲ್ಲೂ ಈ ನಾಟಕ ಪ್ರದರ್ಶನಗೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮನಮೋಹಕ ಪ್ರದರ್ಶನವನ್ನು ನೀಡಿದೆ.

ಮೊದಲ ಬಾರಿಗೆ ದಾಂಡೇಲಿಯಲ್ಲಿ ಉಚಿತವಾಗಿ ಪ್ರದರ್ಶನಗೊಳ್ಳುತ್ತಿರುವ ಅಮೋಘ ಮತ್ತು ನಗೆಗಡಲಲ್ಲಿ ತೇಲಾಡಿಸುವ ಮಹತ್ವದ ನಗೆನಾಟಕವನ್ನು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿ.ಆರ್.ಡಿ.ಎಂ ಟ್ರಸ್ಟ್ ಪ್ರಕಟಣೆಯಲ್ಲಿ ವಿನಂತಿಸಿದೆ.

ಬನ್ರೋಪ್ಪೋ, ಇಂಥಹ ವೈವಿಧ್ಯಮಯ, ಆಕರ್ಷಕ ನಾಟಕ ನಮ್ಮೂರಲ್ಲಿ, ನಮ್ಮೂರಲ್ಲಿ ನಡೆಯಲಿರುವ ಈ ನಾಟಕವನ್ನು ನಾವು ನೀವು ಕುಟುಂಬ ಸಮೇತರಾಗಿ ಆಗಮಿಸಿ, ನಾಟಕವನ್ನು ನೋಡಿ, ಹೊಟ್ಟೆತುಂಬ ನಕ್ಕು, ಕಲಾವಿದರುಗಳ ಕಲಾಸೇವೆಗೆ ಗೌರವವನ್ನು ಅರ್ಪಿಸೋಣ.

ನಿಮ್ಮವ

ಸಂದೇಶ್.ಎಸ್.ಜೈನ್
 

Monday, January 28, 2019

ಜನ್ಮದಿನದ ಸಂಭ್ರಮದಲ್ಲಿ ಯಶಸ್ವಿ ಸ್ವಾವಲಂಬಿ ಯುವಕ ದಾನಂ
ಅನ್ನಮ್ಮ ಸೌಂಡ್ಸ್ ಸಿಸ್ಟಂ ಮೂಲಕ ಜನಖ್ಯಾತಿಗಳಿಸಿದ ಹೆಮ್ಮೆಯ ಯುವಕ ದಾನಂ

 ಅವನು ಕೃಷ್ಣ ಸುಂದರ. ಸದಾ ಮುಗುಳ್ನಗೆ, ಪಾದರಸದಂತೆ ಕ್ರಿಯಾಶೀಲ ಯುವಕನಾತ. ಸಿಟ್ಟು ಮಾಡುವ ಮನಸ್ಸಿನವನಲ್ಲ. ಶಾಂತಿಯನ್ನೆ ಮೈಗೂಡಿಸಿಕೊಂಡು ಅರಳಿದ ಸರಳ ಸಹೃದಯಿ ಯುವಮಿತ್ರ. ಶ್ರೀಮಂತಿಕೆಯ ಕುಟುಂಬದಲ್ಲೂ ಜನ್ಮವೆತ್ತದಿದ್ದರೂ ಹೃದಯಶ್ರೀಮಂತಿಕೆಯ ಮೂಲಕ ಎಲ್ಲರ ಮನಸ್ಸು ಗೆದ್ದ ತಾಳ್ಮೆಯ ಯುವಕನಾತ. ಅವನು ಬೇರೆ ಯಾರು ಅಲ್ಲ. ದಾಂಡೇಲಿಯ ಮನೆ ಮನೆಗೆ ಪರಿಚಯವಿರುವ ಅನ್ನಮ್ಮ ಸೌಂಡ್ಸ್ ಸಿಸ್ಟಂ  ಎಂಬ ವ್ಯವಹಾರದ ಮಾಲಕ ನಮ್ಮುಡುಗ ದಾನಂ ಪಲ್ಲಪಾಟಿ.

ಇಂದವನಿಗೆ ಜನ್ಮದಿನದ ಸಂಭ್ರಮ. ಪುಲ್ ಎಂಜಾಯಮೆಂಟಿನಲ್ಲಿರುವ ನಮ್ಮ ಹುಡುಗನಿಗೆ ಪದಗಳ ರೂಪದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರದಿದ್ದರೇ ಹೇಗೆ ತಾನೆ?. ಸಂಕಷ್ಟದಲ್ಲಿದ್ದವರಿಗೆ ಹಿಂದೆ ಮುಂದೆ ನೋಡದೆ ದಾನ ಮಾಡುವ ಗುಣ ಸಂಪನ್ನ ನಮ್ಮೂರ ಚೆಲುವ ಯುವಕ ದಾನಂ ಪಲ್ಲಪಾಟಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಅಂದ ಹಾಗೆ ದಾನಂ ನಮ್ಮ ಮಾರುತಿ ನಿಗರದ ನಿವಾಸಿ. ಕಳೆದ 40 ವರ್ಷಗಳಿಂದ ನಗರದಲ್ಲಿ ವಿವಿದೆಡೆ ನಡೆಯುವ ಖಾಸಗಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಮಧುರವಾದ ಸೌಂಡ್ಸ್ ಸಿಸ್ಟಂ ಹಚ್ಚುತ್ತಿದ್ದ ದಾನಂ ಸೌಂಡ್ ಸಿಸ್ಟಂ ಮಾಲಕರಾಗಿದ್ದ ಯೇಸು ಪ್ರಕಾಶ ಹಾಗೂ ಮೇರಿ ದಂಪತಿಗಳ ಜೇಷ್ಟಪುತ್ರ ಈ ನಮ್ಮ ದಾನಂ. ದಾನಂನಿಗೆ ಸ್ಟಿಪನ್, ಪ್ರಕಾಶ, ಅಣ್ಣು ಎಂಬ ಮೂವರು ತಮ್ಮಂದಿರರು ಕೊನೆಯದಾಗಿ ಗ್ರೇಸಿ ಎಂಬ ಮುದ್ದಿನ ತಂಗಿ ಇದ್ದಾರೆ. ಒಟ್ಟಿನಲ್ಲಿ ಹೇಳುವುದಾದರೇ ಸುಸಂಸ್ಕೃತ ಕುಟುಂಬದಲ್ಲಿ ಜನ್ಮವೆತ್ತ ಹೆಮ್ಮೆಯ ಕುವರ ಈ ನಮ್ಮ ದಾನಂ ಎಂದು ಹೇಳಬಹುದು.

ನಮ್ಮ ದಾನಂ ತನ್ನ ಪ್ರಾಥಮಿಕ ಶಿಕ್ಷಣವನ್ನು ದಾಂಡೇಲಿಯ ರೋಟರಿ ಶಾಲೆಯಲ್ಲಿ ಪಡೆದು, ಮುಂದೆ ಜೆವಿಡಿಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದನು. ಅದಾದ ಬಳಿಕ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿ, ಮತ್ತೇ ಅದೇ ಸಂಸ್ಥೆಯ ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೊರೈಸಿದನು.

ಎಳೆಯ ಬಾಲಕನಿರುವಾಗ್ಲೆ ಚುರುಕಿನ ಬಾಲಕನಾಗಿದ್ದ ನಮ್ಮ ದಾನಂ ತನ್ನ 5 ನೇ ತರಗತಿಯಲ್ಲಿರುವಾಗ್ಲೆ ಅಪ್ಪನ ಸೌಂಡ್ಸ್ ಸಿಸ್ಟಂ ಎಲ್ಲಿ ಬಾಡಿಗೆಗೆ ಹೋದರೂ ನಿರ್ವಹಣೆಯ ಹೊಣೆಯನ್ನು ಹೊತ್ತುಕೊಂಡು ಅಪ್ಪನ ಅಪ್ಪುಗೆಯ ಪ್ರೀತಿಗೆ ಪಾತ್ರನಾಗಿದ್ದ. ಹೈಸ್ಕೂಲ್ ವಿದ್ಯಾರ್ಥಿಯಾಗುತ್ತಿದ್ದಂತೆಯೆ ಪ್ರೊಪೆಷನಲ್ ಬ್ಯುಜಿನೆಸ್ ಮ್ಯಾನ್ ಆಗಿ ರೂಪುಗೊಂಡ ದಾನಂ ನ ವ್ಯವಹಾರ ಪ್ರಜ್ಞೆ ಮತ್ತು ಬುದ್ದಿವಂತಿಕೆಯನ್ನು ಮೆಚ್ಚಲೆಬೇಕು.

ಅಪ್ಪ ಮಗ ಯಾವತ್ತು ಅಪ್ಪ ಮಗನ ರೀತಿಯಲ್ಲಿರದೇ ಒಳ್ಳೆಯ ಗೆಳೆಯರಂತೆ ಸೌಂಡ್ ಸಿಸ್ಟಂ ವ್ಯವಹಾರವನ್ನು ಮುನ್ನಡೆಸಿಕೊಂಡ ರೀತಿಗೆ ಬಿಗ್ ಸೆಲ್ಯೂಟ್ ಹೇಳಲೆಬೇಕು. ಅಪ್ಪ ಯೇಸು ಪ್ರಕಾಶ ಅವರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಲೆ ಹವ್ಯಾಸಕ್ಕಾಗಿ ಆರಂಭಿಸಿದ ಈ ಸೌಂಡ್ ಸಿಸ್ಟಂ ಉದ್ಯಮ ಖ್ಯಾತಿಗೊಳ್ಳುವಲ್ಲಿ ಬಾಲಕ ದಾನಂನ ಶ್ರಮ ಸಾಧನೆ ಪ್ರಮುಖ ಕಾರಣ ಎಂದರೇ ಅತಿಶಯೋಕ್ತಿ ಎನಿಸದು. ಹತ್ತನೆ ತರಗತಿ ಓದುತ್ತಿರುವಾಗ್ಲೆ ಸೌಂಡ್ ಸಿಸ್ಟಂ ನ್ನು ದುರಸ್ತಿ ಮಾಡುವುದನ್ನು ಕರಗತ ಮಾಡಿಕೊಂಡ ದಾನಂ ಮುಂದೊಂದು ದಿನ ಈ ಕಾಯಕದಲ್ಲಿ ಹೆಸರನ್ನು ಗಳಿಸುತ್ತಾನೆಂಬ ಅವನಪ್ಪನ ಕನಸು ಸಾಕಾರಗೊಳ್ಳುವಲ್ಲಿ ದಾನಂ ಯಶಸ್ವಿಯಾಗಿದ್ದಾನೆ.

ವ್ಯವಹಾರಕ್ಕೆ ಸಹಕರಿಸುತ್ತಾ, ಉತ್ತಮ ಅಂಕಗಳೊಂದಿಗೆ ಪದವಿ ಮುಗಿಸಿದ ದಾನಂಗೆ ಅರ್ಹವಾಗಿ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ಉದ್ಯೋಗವು ಪ್ರಾಪ್ತಿಯಾಯಿತು. ಕಳೆದ 7 ವರ್ಷಗಳಿಂದ ನೌಕರಿಯನ್ನು ಮಾಡುವುದರ ಮೂಲಕ ಕಾಗದ ಕಾರ್ಖಾನೆಯ ಮೇಲಾಧಿಕಾರಿಗಳ ಪ್ರೀತಿಗೆ ಪಾತ್ರನಾದ ಧನ್ಯತೆ ನಮ್ಮ ದಾನಂನಿಗಿದೆ. ಪರಿಣಾಮವಾಗಿ ನೌಕರಿಯಲ್ಲಿಯೂ ಕಾಯಂಗೊಂಡು ಸುಂದರ ಬದುಕಿನೆಡೆಗೆ ಉಜ್ವಲ ಪಯಾಣ ಬೆಳೆಸಿದ ಸಂಭ್ರಮ ನನ್ನ ದಾನಂ ಹೊಂದಿರುವುದು ನನಗೆ ಅತೀವ ಸಂತಸ ತಂದಿದೆ.

ವೃತ್ತಿ ಬದುಕಿನ ಜೊತೆಗೆ ತಂದೆಯವರ ಅನ್ನಂ ಸೌಂಡ್ಸ್ ಸಿಸ್ಟಂನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡ ದಾನಂ ಮೊದಲು ಮಾಡಿದ್ದು ಹಳೆಯ ಸಿಸ್ಟಂನ್ನು ಡಿಲಿಟ್ ಮಾಡಿ ಹೊಚ್ಚ ಹೊಸ ಸೌಂಡ್ ಸಿಸ್ಟಂನ್ನು ಸಾಲ ಮಾಡಿ ಖರೀದಿಸಿದ. ದಾಂಡೇಲಿಯ ಜನತೆಯ ಬೇಡಿಕೆಗೆ ಅನುಗುಣವಾಗಿ ಮತ್ತು ಇಂದಿನ ಮಾರುಕಟ್ಟೆಗೆ ಉಪಯುಕ್ತ ಎನಿಸುವ ಅತ್ಯುತ್ತಮ ಸೌಂಡ್ ಸಿಸ್ಟಮ್ಸ್ ಗಳನ್ನು ಖರೀದಿಸಿ, ಅಚ್ಚುಕಟ್ಟಾಗಿ ಜೋಡಿಸಿ ಒಬ್ಬ ಸಮರ್ಥ ಮತ್ತು ಅನುಭವಿ ಸೌಂಡ್ ಸಿಸ್ಟಂನ ಮಾಲೀಕನಾಗಿರುವುದು ದಾನಂನ ಶ್ರಮ ಸಾಧನೆ ಮತ್ತು ನಿರಂತರವಾದ ಪ್ರಯತ್ನಕ್ಕೆ ಫಲಿಸಿದ ಫಲ ಎಂದೆ ಹೇಳಬಹುದು.

ಜನಪ್ರೀತಿಗಳಿಸಿದ ಅನ್ನಮ್ಮ ಸಿಸ್ಟಂ:


ಅತ್ಯುತ್ತಮ ಸಂವಹನ ಕಲೆ, ಶಿಸ್ತು, ಪ್ರಾಮಾಣಿಕ ಸೇವೆ, ಕಾರ್ಯದಕ್ಷತೆ ಮತ್ತು ಗುಣಮಟ್ಟದ ಸೇವೆಯ ಮೂಲಕ ಅನ್ನಮ್ಮ ಸೌಂಡ್ ಸಿಸ್ಟಂ ದಾಂಡೇಲಿಗರ ಮನಗೆದ್ದಿದೆ. ದಾಂಡೇಲಿಯ ಬಹುತೇಕ ಕಾರ್ಯಕ್ರಮಗಳಿಗೆ ಸುಯೋಗ್ಯ ಸಿಸ್ಟಂನ್ನು ಒದಗಿಸಿ ಎಲ್ಲರಿಂದ ಭೇಷ್ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಚೌತಿ ಸಂದರ್ಭದಲ್ಲಿ ಅನ್ನಮ್ಮ ಸೌಂಡ್ ಸಿಸ್ಟಂನ ಸೌಂಡ್ ಕೇಳಲು ಬರುವ ಜನರ ಸಂಖ್ಯೆಗೆ ಲೆಕ್ಕವಿಲ್ಲ. ನೀವು ಇದರಲ್ಲೆ ಅನ್ನಮ್ಮ ಸೌಂಡ್ ಸಿಸ್ಟಂನ ಕ್ವಾಲಿಟಿ ಮತ್ತು ಸೇವೆಯನ್ನು ಲೆಕ್ಕ ಹಾಕಿಕೊಳ್ಳಬಹುದು.

ದಾನಂ ಯಜಮಾನ ಪಿಲ್ಮಿನ ಹಿರೋ ಇದ್ದಂತೆ:
ದಾನಂನನ್ನು ನೋಡಿದಾಗ ಕನ್ನಡ ಚಿತ್ರರಂಗದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಯಜಮಾನ ಚಲನ ಚಿತ್ರ ನೆನಪಾಗುತ್ತೆ. ಅಲ್ಲಿ ನಾಯಕ ನಟ ವಿಷ್ಣುವರ್ದನ್ ಅವರು ತಮ್ಮಂದಿರರನ್ನು ಅಕ್ಕರೆ, ಅಭಿಮಾನದಿಂದ ನೋಡುವ ಮತ್ತು ಬೆಳೆಸುವ ಪರಿಯಂತೆ ನಮ್ಮ ದಾನಂ ಆತನ ತಮ್ಮಂದಿರರ ಜೊತೆ ಇರುವುದು ನನಗೆ ಸದಾ ನೆನಪಿಗೆ ಬರುತ್ತದೆ. ತಮ್ಮಂದಿರರ ಮತ್ತು ತಂಗಿಯ ಬೇಕುಬೇಡಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ದಾನಂನ ಸಹೋದರತ್ಬದ ಪ್ರೇಮಾಗುಣ ಮತ್ತು ಸಾಂಸಾರಿಕ ದಕ್ಷತೆ ಶ್ಲಾಘನೀಯ. ತಮ್ಮಂದಿರರು ಕೂಡಾ ಅಷ್ಟೆ ಅಣ್ಣ ದಾನಂ ಹಾಕಿದ ಗೆರೆಯನ್ನು ದಾಟದೇ ಅನ್ನಮ್ಮ ಸೌಂಡ್ ಸಿಸ್ಟಂನ ಪುರೋ ಅಭಿವೃದ್ಧಿಗಾಗಿ ಹೆಗಲಿಗೆ ಹೆಗಲು ಕೊಟ್ಟು ಬೆವರು ಸುರಿಸುತ್ತಿದ್ದಾರೆ.

ಜೀವನದಲ್ಲಿ ಉದ್ಯಮ ಹಾಗೂ ವೃತ್ತಿ ಬದುಕಿನ ಮೂಲಕ ಯಶಸ್ಸನ್ನು ಕಂಡ ದಾನಂ ಸಾಕಷ್ಟು ಬಡವರ ಮನೆಯ ಮಕ್ಕಳ ಮದುವೆಗೆ ಸಹಾಯ ಮಾಡಿರುವುದನ್ನು ಮರೆಯುವಂತಿಲ್ಲ. ಕಷ್ಟದಲ್ಲಿದ್ದವರಿಗೆ ಸ್ಪಂದಿಸುವುದರ ಮೂಲಕ ಮಾನವೀಯತೆಯ ಸಕಾರಮೂರ್ತಿಯಂತಿರುವ ದಾನಂನ ಜೀವನ ಯಶಸ್ಸಿಗೆ ಅವನ ಅಪ್ಪ ಮತ್ತು ಅಮ್ಮನ ಆಶೀರ್ವಾದ, ಸಹೋದರರ ಮತ್ತು ಸಹೋದರಿಯ ಪ್ರೀತಿ ವಾತ್ಸಲ್ಯ, ಪ್ರೀತಿಸಿ, ಮುದ್ದಿಸಿ ಕೈಹಿಡಿದ ಪತ್ನಿ ದೀಪಾ ಅವರ ಹೃದಯಪೂರ್ವಕ ಸಹಕಾರ, ಬಂಧುಗಳ, ಗೆಳೆಯರ ಪ್ರೀತಿ, ಪ್ರೋತ್ಸಾಹವು ಪ್ರಮುಖ ಕಾರಣವಾಗಿದೆ. ಮುಂದಿನ ವರ್ಷದ ಜನ್ಮದಿನದ ಸಂಭ್ರಮದಲ್ಲಿ ಕೈಯೊಲ್ಲೊಂದು ಹಸುಗೂಸು ಇರಲೆಂಬ ಶುಭ ನುಡಿಯೊಂದಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಲವ್ಲಿ ತಮ್ಮ ದಾನಂ.

ನಿಮ್ಮವ

ಸಂದೇಶ್.ಎಸ್.ಜೈನ್


 
ದಾಂಡೇಲಿಗೆ ಹೆಮ್ಮೆ ತಂದ ಬಾಲಕನ ಅಪ್ರತಿಮ ಸಾಧನೆಗೆ ಆಶೀರ್ವದಿಸಿ
ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ದಾಂಡೇಲಿಯ ಪಂಚಮ್ ಸುನೀಲ ಶೇಜವಾಡಕರ
ದಾಂಡೇಲಿ : ನಗರದ ಪ್ರತಿಭಾವಂತ ಕರಾಟೆ ಪಟು ಹಾಗೂ ಸ್ಥಳೀಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಪಂಚಮ್ ಸುನೀಲ ಶೇಜವಾಡಕರ ಈತನು ಇತ್ತೀಚೆಗೆ ಕಾರವಾರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಟಾ (ಆಕ್ಷನ್) ಹಾಗೂ ಕಮಿಟೆ (ಫೈಟಿಂಗ್) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ನಗರಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಈತನೂ ಈ ಹಿಂದೆಯು ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಬಾಗವಹಿಸಿ ಗಮನಾರ್ಹ ಸಾಧನೆ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ನಗರದ ಕೆನರಾ ಬ್ಯಾಂಕ್ ಅಧಿಕಾರಿ ಸುನೀಲ ಶೇಜವಾಡಕರ ಹಾಗೂ ವಂದಿನಿ ಶೇಜವಾಡಕರ ದಂಪತಿಗಳ ಪುತ್ರನಾಗಿರುವ ಈತ ನಗರದ ಹಿರಿಯ ಕರಾಟೆ ತರಬೇತುದಾರ ಲಕ್ಷ್ಮಣ ಹುಲಸ್ವಾರ ಅವರಿಂದ ತರಬೇತಿ ಪಡೆದು, ಇದೀಗ ನಗರದ ಕರಾಟೆ ಶೈನಿಂಗ್ ಸ್ಟಾರ್ಸ್ ಇಲ್ಲಿನ ಕರಾಟೆ ತರಬೇತುದಾರ ಸಾಗರ ಜಾಧವ್ ಅವರ ಶಿಷ್ಯನಾಗಿರುತ್ತಾನೆ. ಮೊಮ್ಮಗನ ಸಾಧನೆಗೆ ಹಿರಿಯ ನಾಟಕ ಕಲಾವಿದರೂ ಹಾಗೂ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು ಆಗಿರುವ ಗಣಪತಿ ಶೇಜವಾಡಕರ ಹಾಗೂ ಮಂದಾ ಶೇಜವಾಡಕರ ಅವರುಗಳು ಹರ್ಷಿತರಾಗಿದ್ದಾರೆ. ಮೊಮ್ಮಗನ ಸಾಧನೆಗೆ ಅಜ್ಜ ನೀಡುತ್ತಿರುವ ಬೆಂಬಲವನ್ನಂತು ಶ್ಲಾಘಿಸಲೆಬೇಕು. ಪಂಚಮನ ತಂದೆ ಸುನೀಲ ಶೇಜವಾಡಕರ ಅವರು ಪಾರ್ಶವಾಯುವಿಗೆ ತುತ್ತಾದರೂ ಮಗನ ಸಾಧನೆಗೆಂದು ಅಡ್ಡಿಯಾಗದೇ ಪ್ರೋತ್ಸಾಹಿಸುತ್ತಿರುವುದು ಮಾದರಿ ಮತ್ತು ಅಭಿನಂದನೀಯ.

ಪಂಚಮ್ ಶೇಜವಾಡಕರನ ಸಾಧನೆಗೆ ಕರಾಟೆ ಗುರುಗಳು, ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯ ಶಿಕ್ಷಕ ವೃಂದದವರು, ನಗರದ ಗಣ್ಯರನೇಕರು  ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಬೆಳೆಯುತ್ತಿರುವ ಪ್ರತಿಭೆ ಪಂಚಮ್ ದಾಂಡೇಲಿಗೆ ಆಸ್ತಿಯಾಗುವತ್ತಾ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾನೆ. ಅವನ ಪರಿಶ್ರಮಕ್ಕೆ ನಿಮ್ಮೆಲ್ಲರ ಅಕ್ಕರೆಯ ಆಶೀರ್ವಾದವಿರಲೆಂಬ ಪ್ರಾರ್ಥನೆ ನನ್ನದು.

ನಿಮ್ಮವ

ಸಂದೇಶ್.ಎಸ್.ಜೈನ್


 

Sunday, January 27, 2019

ಜಬರ್ದಸ್ತಾಗಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
ಪ್ರಚಂಡ ಬ್ಯಾಟಿಂಗ್, ಉಗ್ರ ಸ್ವರೂಪದ ಬೌಲಿಂಗ್, ಯರ್ರಾ ಬಿರ್ರಿ ಎದ್ದು ಬಿದ್ದು ಓಡಿ ಮಾಡಿದ ಕ್ಷೇತ್ರರಕ್ಷಣೆ
ಪಂದ್ಯಾವಳಿಯಲ್ಲಿ ಗೆದ್ದ ರೋಟರಿ, ಲಯನ್ಸ್ ಮತ್ತು ಪ್ರೆಸ್ ಕ್ಲಬ್ ತಂಡ
ದಾಂಡೇಲಿಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ದಾಂಡೇಲಿ ಪ್ರೆಸ್ ಕ್ಲಬ್ ಗಳ ನಡುವೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ಸ್ಥಳೀಯ ರೊಟರಿ ಕ್ಲಬ್ ಆಶ್ರಯದಡಿ ಇಂದು ಅಂದರೆ ಜನವರಿ 27 ರಂದು ನಡೆದ  ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು.
 
ಈ ಪಂದ್ಯಾವಳಿಯಲ್ಲಿ ಜೀವದ ಹಂಗುತೊರೆದು ಆಡಿದ ಎಲ್ಲ ಆಟಗಾರರಿಗೆ ಅಭಿಮಾನದ ವಂದನೆಗಳು, ಅಭಿವಂದನೆಗಳು. ಪಂದ್ಯಾವಳಿಯಲ್ಲಿ ಎಲ್ಲರು ಗೆದ್ದವರೇ ಎನ್ನುವುದು ಎಲ್ಲರಿಂದ ಬಂದ ಮಾತು. ರೋಟರಿ ಕ್ಲಬ್ ಪ್ರಥಮ ಸ್ಥಾನ ಪಡೆದರೇ, ಲಯನ್ಸ್ ಕ್ಲಬ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಆದರೆ ತೃತೀಯ ಸ್ಥಾನಕ್ಕಾಗಿ ನಡೆದ ಬಾರಿ ಪೈಪೋಟಿಯ ಮಧ್ಯೆಯು ನಮ್ಮ ದಾಂಡೇಲಿ ಪ್ರೆಸ್ ಕ್ಲಬ್ ಮೂರನೆ ಬಹುಮಾನವನ್ನು ಯಾರಿಗೂ ಬಿಟ್ಟುಕೊಡದೆ ತನ್ನತ್ತ ಎಳೆಯಿತು. ಆದ್ರೆ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ನಲ್ಲಿದ್ದ ಆಟಗಾರರ ವಯಸ್ಸಿಗೆ ಗೌರವ ಕೊಡಬೇಕೆಂಬ ಅಭಿಮಾನದಿಂದ ಮತ್ತು ಗೌರವದಿಂದ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆಯಲು ಅವರಿಗೆ ಮಹತ್ವದ ಅವಕಾಶ ನೀಡಿದ್ದೇವು ಎನ್ನುವುದು ಇಲ್ಲಿ ಪ್ರಮುಖ ಸಂಗತಿ. 
 
ಸ್ಮರಣೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ ಧನ್ಯತೆ ನನಗಿದೆ. ನಮ್ಮ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಪ್ರೆಸ್ ಕ್ಲಬಿನ ಗೌರವಾನ್ವಿತ ಪದಾಧಿಕಾರಿಗಳು, ಸದಸ್ಯರುಗಳು ಈ ಪಂದ್ಯಾವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿಗೆ ಹ್ಯಾಟ್ಸ್ ಆಪ್ ಹೇಳಲೆಬೇಕು.
 
ಕೆಸರಿ-ಬಿಳಿ-ಹಸಿರು ಬಣ್ಣಗಳ ಟೀ ಶರ್ಟಿನೊಂದಿಗೆ ಕಂಗೊಳಿಸಿದ ಕ್ರೀಡಾಪಟುಗಳು:
ರೋಟರಿಯವರು ಕೆಸರಿ ಟೀ ಶರ್ಟ್, ಲಯನ್ಸ್ ನವರು ಬಿಳಿ ಹಾಗೂ ಪ್ರೆಸ್ ಕ್ಲಬಿನ ಆಟಗಾರರು ಹಸಿರು ಟೀ ಶರ್ಟಿನೊಂದಿಗೆ ಕಂಗೊಳಿಸಿದ್ದು ಮಾತ್ರ ಆಕಸ್ಮಿಕವಾದರೂ ಸತ್ಯ ಕಣ್ರೀ.
 
ರೋಟರಿ ತಂಡದ ಇಮಾಮ್ ಸರ್ವರ್ ಅವರ ಬ್ಯಾಟಿಂಗ್ ಬಗ್ಗೆ ವರ್ಣಿಸಲು ನನ್ನಲ್ಲಿ ಪದಗಳ ಕೊರತೆಯಿದೆ. ಅದ್ಬುತ ಮತ್ತು ಸ್ಟೈಲೀಶ್ ಬ್ಯಾಟ್ಸ್ ಮ್ಯಾನ್ ಆಗಿ ಗಮನ ಸೆಳೆದವರು ಇಮಾಮ್ ಸರ್ವರ್. ಸಿಡಿಲ ಮರಿಗಳಂತೆ ರೋಟರಿಯ ಡಾ: ಅನೂಪ್ ಮಾಡ್ದೊಳ್ಕರ್, ವಿಷ್ಣುಮೂರ್ತಿ ರಾವ್, ಮಿಥುನ್ ನಾಯಕ, ರಾಹುಲ್ ಬಾವಾಜಿ, ಲಯನ್ಸ್ ಕ್ಲಬಿನಿಂದ ಅಭಿಷೇಕ, ಸಂತೋಷ್ ಚೌವ್ಹಾಣ್, ಮಹೇಶ ಹಿರೇಮಠ, ದಾಂಡೇಲಿ ಪ್ರೆಸ್ ಕ್ಲಬಿನಿಂದ ಸಂತೋಷ್, ಜೀವನ್, ಕಿರಣ್ ಅವರ ಆಟ ಪಂದ್ಯಾವಳಿಯ ಪ್ರಮುಖ ಹೈಲೈಟ್ಸ್. 
 
ಮೊಬೈಲಿನಲ್ಲಿ ಮಾತಾಡಿಕೊಂಡೆ ಕ್ಷೇತ್ರ ರಕ್ಷಣೆ ಮಾಡಿದ ನಮ್ಮ ಮಹೇಂದ್ರಕುಮಾರ್, ಬ್ಯಾಟಿಂಗ್ ಸಮಯದಲ್ಲೂ ಮೈದಾನದಲ್ಲೆ ಮೊಬೈಲ್ ನಲ್ಲಿ ಮಾತನಾಡಿದ ಇಮಾಮ್ ಸರ್ವರ್ ಅವರುಗಳ ಈ ಕಾರ್ಯ ಮರೆಯುವಂತಿಲ್ಲ. ಕ್ಷೇತ್ರ ರಕ್ಷಣೆ ಮಾಡುವಾಗ ಮೂರು ಬೌಂಡರಿ ಹೋಗಲು ಬಿಟ್ಟು ಎದುರಾಳಿಗೆ ಬಿಚ್ಚು ಮನಸ್ಸಿನಿಂದ ಹೆಚ್ಚುವರಿಯಾಗಿ ರನ್ ಕೊಡಿಸಿದ ನನ್ನ ಔದಾರ್ಯಕ್ಕೆ ಏನು ಹೇಳಲಿ. ನಮ್ಮ ಪ್ರೆಸ್ ಕ್ಲಬ್ ಅಧ್ಯಕ್ಷರಾದ ವಾಸರೆ, ಕೃಷ್ಣಾ ಪಾಟೀಲ ಅವರ ಪಿಲ್ಡಿಂಗ್ ಗುಣಮಟ್ಟದಿಂದ ಕೂಡಿತ್ತು. ಸಿಕ್ಸರ್ ಸಿದ್ದು ಎಂದೆ ಖ್ಯಾತಿ ಪಡೆದಿದ್ದ ಯಾಗೇಶ ಸಿಂಗ್ ಅವರಿಂದ ಸಿಕ್ಸರ್ ಸುರಿಮಳೆ ಇರಲಿಲ್ಲ. ಇನ್ನೂ ಕ್ರಿಕೆಟ್ ಕಲಿ ರಾಜೇಶ ತಿವಾರಿ ಮೈದಾನಕ್ಕಿಳಿಯದೇ ತನ್ನ ರೋಟರಿ ತಂಡಕ್ಕೆ ಮಾರ್ಗದರ್ಶನ ಮಾಡಿದರು. ಹಿರಿಯ ವಕೀಲ ವಿ.ಆರ್.ಹೆಗಡೆಯವರ ಕರಾರುವಕ್ಕಾದ ಬೌಲಿಂಗ್ ಮೆಚ್ಚುವಂತಹದ್ದು. ಉಮೇಶ ಜಿ.ಈ ಮತ್ತು ಅನಿಲ್ ಪಾಟ್ನೇಕರ ಅವರುಗಳ ವಿಕೆಟ್ ಕಿಪಿಂಗ್ ಬಗ್ಗೆ ದೂಸ್ರ ಮಾತೆ ಇಲ್ಲ. ಗುರುಶಾಂತ ಜಡೆಹಿರೇಮಠ ಅವರು ಬ್ಯಾಟ್ ಬೀಸಿದ್ದು ಪಂದ್ಯಕ್ಕೆ ಮೆರುಗು ತಂದಿತ್ತು. ಕೃಷ್ಣಾ ಪಾಟೀಲ ಅವರ ಬೌಲಿಂಗ್ ಯುವಕರನ್ನು ನಾಚಿಸುವಂತಿತ್ತು. ನರೇಂದ್ರ ಚೌವ್ಹಾಣ್, ಎನ್.ವಿ.ಪಾಟೀಲ ಅವರುಗಳು ತಾಕತ್ತಿಗೆ ಅನುಗುಣವಾಗಿ ಬೆಸ್ಟ್ ಬೌಲಿಂಗ್ ಮಾಡಿ ಗಮನ ಸೆಳೆದರು. ಎಸ್.ಪ್ರಕಾಶ ಶೆಟ್ಟಿಯವರ ಪಿಲ್ಡಿಂಗ್ ಸೂಪರ್ ಇತ್ತು. ಲಯನ್ಸ್ ಕ್ಲಬಿನ ಚಾಣಕ್ಯ ಅಟಗಾರ ಉದಯ ಶೆಟ್ಟಿಯವರ ಕ್ಷೇತ್ರ ರಕ್ಷಣೆ ಲಯನ್ಸ್ ತಂಡಕ್ಕೆ ಆಸ್ತಿಯಾಯಿತು. ಕ್ರಿಯಾಶೀಲ ವಕೀಲರಾದ ಎಸ್.ಸೋಮಕುಮಾರ್ ಅವರು ಕ್ರೀಡಾಪ್ರಜ್ಞೆ ಶ್ಲಾಘನೀಯವಾಗಿತ್ತು.  ಕ್ಷೇತ್ರ ರಕ್ಷಣೆಯಲ್ಲಿ ಮುರಳಿ ನಾಯ್ಕ, ಅಶುತೋಷ್ ರಾಯ್ ಅವರ ಎದೆಗಾರಿಕೆ ಯಾವತ್ತು ಮರೆಯುವ ಹಾಗಿಲ್ಲ. ಲಯನ್ಸಿನ ಪ್ರಸಾದ ಶಿರಹಟ್ಟಿಯವರು ಅಂತರಾಷ್ಟ್ರೀಯ ಗುಣಮಟ್ಟದ ಸ್ಕೋರರ್ ಆಗಿ ಸೇವೆಯನ್ನು ನೀಡಿದರು. ಇನ್ನೂ ನಮ್ಮ ಯು.ಎಸ್.ಪಾಟೀಲ ಅವರು ಇತ್ತ ಪ್ರೆಸ್ ಕ್ಲಬಿಗೂ ಪ್ರೋತ್ಸಾಹಿಸಿದರು, ಅತ್ತ ಲಯನ್ಸಿಗೂ ಪ್ರೀತಿಸಿದರು. ಡಾ: ಮೋಹನ ಪಾಟೀಲ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರಿದರೇ, ಇತ್ತ ನಮ್ಮ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಹಾಗೂ ನಗರ ಸಭಾ ಸದಸ್ಯ ಮೋಹನ ಹಲವಾಯಿಯವರು ಪಂದ್ಯ ಆರಂಭವಾಗಿ ಮುಗಿಯುವರೆಗೂ ಪಂದ್ಯಾವಳಿಗೆ ಪ್ರೋತ್ಸಾಹ ನೀಡುತ್ತಿದ್ದದ್ದು ಉಲ್ಲೇಖನೀಯ.
 
ಒಟ್ಟಿನಲ್ಲಿ ಪಂದ್ಯಾವಳಿ ವಿಶೇಷ ಆಕರ್ಷಣೆಯಾಗಿ, ಮನೋರಂಜನೆಯಾಗಿ ನಡೆದಿರುವುದರ ಜೊತೆಗೆ ಒಂದು ಸ್ಪರ್ಧೆಯ ತರವೆ ನಡೆದಿರುವುದು ಇಲ್ಲಿ ಉಲ್ಲೇಖನೀಯ. ಬೆಳ್ಳಂ ಬೆಳಗ್ಗೆ ಎದ್ದು ಮನೆ ಮನೆಗೆ ಪೇಪರ್ ಹಂಚುವ ನಮ್ಮ ಹುಡುಗರ ಆಟಕ್ಕೆ ಯಾವ ರೀತಿಯಲ್ಲೂ ಥ್ಯಾಂಕ್ಸ್ ಹೇಳಿದರೂ ಕಡಿಮೆನೆ. ದಾಂಡೇಲಿ ಪ್ರೆಸ್ ಕ್ಲಬಿನ ಆಟಗಾರರಿಗೆ ಯುವ ಪ್ರವಾಸೋದ್ಯಮಿ ಸಂಜಯ್ ಭಟ್ ಅವರು ಟೀ ಶರ್ಟ್ ಒದಗಿಸಿ ಸಹಕರಿಸಿದರು. ಸಂಜಯ್ ಭಟ್ ಅವರಿಗೆ ಪ್ರೀತಿಯ ಧನ್ಯವಾದಗಳು. ವಾಸರೆಯವರು, ಮಹೇಂದ್ರಕುಮಾರ್ ಅವರು, ಜಡೆಯವರು, ಕೃಷ್ಣಾ ಪಾಟೀಲ ಅವರು, ಯು.ಎಸ್.ಪಾಟೀಲ ಅವರು ನಮ್ಮ ರಿಯಾಜ ಅವರು ನನಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಋಣಿಯಾಗಿದ್ದೇನೆ.
 
ಪಂದ್ಯಾವಳಿಯ ಸಂದರ್ಭದಲ್ಲಿ ಎಲ್ಲರು ಆಡಿಕೊಳ್ಳುತ್ತಿದ್ದದ್ದು ಒಂದೆ ಮಾತು. ಗಿಡ್ಡಗಿದ್ದವರಿಗೆ ಮಾತ್ರ ಬೌಂಡರಿ ಲೈನ್ ಸ್ವಲ್ಪ ಹತ್ತಿರ ಇಡಬೇಕೆಂಬುವುದೆ ಆಗಿತ್ತು. ನೋಡೋಣ, ಮುಂದಿನ ದಿನಗಳಲ್ಲಿ ಪಂದ್ಯಾವಳಿಯ ಆಯೋಜಕರು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವರೆಂಬ ಆಶಾಭಾವನೆಯಿದೆ.
 
ಒಟ್ಟಿನಲ್ಲಿ ಈ ಪಂದ್ಯಾವಳಿಯಲ್ಲಿ ಎಲ್ಲರು ಗೆದ್ದಿದ್ದಾರೆ. ಇಲ್ಲಿ ಮುಖ್ಯವಾಗಿ ಪ್ರೀತಿ, ಆತ್ಮೀಯತೆ, ಸಂಬಂಧಗಳು ಗೆದ್ದಿವೆ, ಮನಸ್ಸುಗಳು ಸಮೀಪವಾಗಿವೆ. ಇದಕ್ಕಿಂತ ದೊಡ್ಡ ಗೆಲುವು ಇನ್ನೇನು ಬೇಕು ಅಲ್ವೆ.
 
ಪಂದ್ಯಾವಳಿಯಲ್ಲಿ ಭಾಗವಹಿಸಿ, ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲ ತಂಡಗಳ ಆಟಗಾರರಿಗೆ ಗೌರವದ ಕೃತಜ್ಞತೆಗಳು. ತೀರ್ಪುಗಾರರಾಗಿ ಸಹಕರಿಸಿ ಮಹೇಶ ಹಾಗೂ ದಾಂಡೇಲಿ ಪಾಟೀಲ ಅವರಿಗೆ ದೊಡ್ಡ ದನ್ಯವಾದಗಳು. ಡಿಲಕ್ಸ್ ಮೈದಾನದಲ್ಲಿ ಆಡಲು ಅವಕಾಶ ಕೊಡಿಸಿ, ಪಂದ್ಯಾವಳಿಗೆ ಸಹಕರಿಸಿದ ರಾಜೇಶ ತಿವಾರಿಯವರಿಗೆ ಮತ್ತು ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಸಂಘಟಿಸಿದ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರಿಗೆ ಕೃತಜ್ಞತೆಗಳು.
 
ಮಗದೊಮ್ಮೆ ರೋಟರಿ ಕ್ಲಬಿನ, ಲಯನ್ಸ್ ಕ್ಲಬಿನ ಹಾಗೂ ಪ್ರೆಸ್ ಕ್ಲಬಿನ ಸರ್ವ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ಹೃದಯಸ್ಪರ್ಶಿ ವಂದನೆ, ಅಭಿವಂದನೆಗಳು.
 
ನಿಮ್ಮವ
 
ಸಂದೇಶ್.ಎಸ್.ಜೈನ್


 

Saturday, January 26, 2019

ಜನವರಿ 27 ರಂದು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
ಘಟಾನುಗಳಿಗಳ ನಡುವೆ ಪೈಟ್-
ತೃತೀಯ ಬಹುಮಾನಕ್ಕಾಗಿ ಬಿರುಸಿನ ಸ್ಪರ್ಧೆ
ಈ ಪಂದ್ಯಾವಳಿಯನ್ನು ನೋಡುವುದೆ ಭಾಗ್ಯ-ಈ ಸೌಭಾಗ್ಯವನ್ನು ತಪ್ಪಿಸುವುದೇಕೆ ಅಲ್ವೆ.

ದಾಂಡೇಲಿಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ದಾಂಡೇಲಿ ಪ್ರೆಸ್ ಕ್ಲಬ್ಗಳ ನಡುವೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ಸ್ಥಳೀಯ ರೊಟರಿ ಕ್ಲಬ್ ಆಶ್ರಯದಡಿ ನಾಳೆ ಅಂದರೆ ಜನವರಿ 27 ರಂದು ಮುಂಜಾನೆ 9 ಗಂಟೆಯಿಂದ  ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ರೋಟರಿ ಕ್ಲಬ್ನ ಅಧ್ಯಕ್ಷ ಎಸ್. ಪ್ರಕಾಶ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಎನ್. ಮುನವಳ್ಳಿ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.

ಇದರ ಜೊತೆಗೆ ನನ್ನ ಮಾತು.
ಆತ್ಮೀಯ ಕ್ರೀಡಾಭಿಮಾನಿಗಳೆ, ಬಹಳ ಸ್ವಾರಸ್ವಕರ ಮತ್ತು ಅತ್ಯದ್ಬುತ ಮನೋರಂಜನೆಯನ್ನು ಕೊಡಲಿರುವ ಈ ಪಂದ್ಯಾಟವನ್ನು ವೀಕ್ಷಿಸಲು ಯಾರು ಮರೆಯದಿರಿ.

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಯುವರಾಜ ಸಿಂಗ್ ಅವರ ಆಟದ ವೈಖರಿ ನಾಳೆ ನಡೆಯುವ ಪಂದ್ಯಾವಳಿಯಲ್ಲಿ ಪ್ರಬುದ್ದ ಆಟಗಾರರಿಂದ ದೊರೆಯಲಿದೆ. ಲಯನ್ಸ್ ಕ್ಲಬಿನ ಅಧ್ಯಕ್ಷರು ಹಾಗೂ ಡೈನಮಿಕ್ ಬ್ಯಾಟ್ಸ್ ಮ್ಯಾನ್ ವೈ.ಎನ್.ಮುನವಳ್ಳಿಯವರು ಲಯನ್ಸ್ ಪರವಾಗಿ ಬ್ಯಾಟ್ ಬೀಸಿದರೇ, ಇತ್ತ ಪ್ರೆಸ್ ಕ್ಲಬ್ ಪರವಾಗಿ ಡ್ಯಾಶಿಂಗ್ ಬ್ಯಾಟ್ಸ್ ಮ್ಯಾನ್ ಯು.ಎಸ್.ಪಾಟೀಲ, ಹೊಡಿಬಡಿ ಆಟಗಾರರಾದ ಬಿ.ಎನ್.ವಾಸರೆ, ಬಿ.ಪಿ.ಮಹೇಂದ್ರಕುಮಾರ್, ಗುರುಶಾಂತ ಜಡೆಹಿರೇಮಠ ಅವರುಗಳ ಮನೋಜ್ಞ ಬ್ಯಾಟಿಂಗ್ ಹಾಗೂ ಕೃಷ್ಣಾ ಪಾಟೀಲ ಅವರ ವೇಗದ ಬೌಲಿಂಗ್ ನೋಡುಗರ ಮನ ಸೆಳೆಯಲಿದೆ. 
 
ಇನ್ನೊಂದು ಕಡೆ ತನ್ನ ತಂಡದಲ್ಲಿ ಹೆಚ್ಚಿನ ಸ್ಥಾನವನ್ನು 50 ವರ್ಷ ಮೇಲ್ಪಟ್ಟ ಹಿರಿಯ ರೋಟರಿ ಕ್ಲಬ್ ಸದಸ್ಯರುಗಳಿಗೆ ನೀಡುವುದರ ಮೂಲಕ ರೊಟರಿ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರ ತಂಡ ಗೆಲುವಿನ ತಂತ್ರಗಾರಿಕೆಯನ್ನು ಹೆಣೆದಿದೆ. ಅತ್ಯುತ್ತಮ ಕ್ಷೇತ್ರರಕ್ಷಕರಾಗಿ ಗಮನ ಸೆಳೆದ ಅಶುತೋಷ್ ರಾಯ್ ಅವರು ರೋಟರಿ ತಂಡದ ಪ್ರಮುಖ ಆಸ್ತಿಯಾಗಲಿದ್ದಾರೆ. ಮನಮೋಹಕವಾಗಿ ಸಿಕ್ಸರ್ ಸಿಡಿಸುವ ರಾಜೇಶ ತಿವಾರಿಯವರ ಬಲವಾದ ಹೊಡೆತ ನಾಳೆ ಪಂದ್ಯಾವಳಿಗೆ ರಂಗು ತರಲಿದೆ. ರಕ್ಷಣಾತ್ಮಕ ಆಟದ ಮೂಲಕ ಮೈದಾನಕ್ಕೆ ಎಸ್.ಪ್ರಕಾಶ ಶೆಟ್ಟಿ, ರಾಹುಲ್ ಬಾವಾಜಿ, ಡಾ: ಅನೂಪ್ ಮಾಡ್ದೊಳ್ಕರ ಇಳಿದರೇ, ಇತ್ತ ಸಿಡಿಲಮರಿಗಳಾದ ವಿಷ್ಣುಮೂರ್ತಿ ರಾವ್ ಮತ್ತು ಇಮಾಮ್ ಸರ್ವರ್ ನೋಡೆಬಿಡೋಣ ಎಂಬ ಕಾತುರತೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ ಬೆಸ್ಟ್ ಆಲ್ ರೌಂಡರ್ ಆಗಿ ವಿಜಯಕುಮಾರ್ ಶೆಟ್ಟಿ ಅಂಗಳಕ್ಕಳಿಯುವುದು ಬಹುತೇಕ ಖಚಿತ. ಲೆಗ್ ಸ್ಪಿನ್ನರ್ ಡಾ: ಧಪೇದಾರ್ ಹಾಗೂ ಜಬರ್ದಸ್ತು ಪ್ಲೇಯರ್ ರವಿಕುಮಾರ್.ಜಿ.ನಾಯಕ ಅವರು ಆಡಲೆಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. 
 
ಹಿರಿಯರಿಗೆ ಗೌರವ ಕೊಡಬೇಕೆಂಬ ದೃಷ್ಟಿಯಿಂದ ರೋಟರಿ ಕ್ಲಬಿನ ಅನಿಲ್ ಪಾಟ್ನೇಕರ್ ಮತ್ತು ಮಿಥುನ್ ನಾಯಕ ಅವರುಗಳು ತೀರ್ಪುಗಾರರಾಗಿ ಸಹಕರಿಸಲಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದೆ. ಒಟ್ಟಿನಲ್ಲಿ ಉತ್ಸಾಹಿ ತರುಣರಿದ್ದರೂ ಹಿರಿಯರಿಗೆ ಮಣೆ ಹಾಕಿದ ಎಸ್.ಪ್ರಕಾಶ ಶೆಟ್ಟಿಯವರ ಔದಾರ್ಯದ ಮನಸ್ಸಿಗೆ ಬಿಗ್ ಸೆಲ್ಯೂಟ್ ಹೇಳಲೆಬೇಕು.

ರೋಚಕ, ಸ್ಮರಣೀಯ, ಮಹೋನ್ನತ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನಕ್ಕಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ತೃತೀಯ ಸ್ಥಾನವನ್ನು ಗೆದ್ದವರೇ ನಾಳೆಯ ಪಂದ್ಯಾವಳಿಯ ನೈಜ ಹಿರೋ ಆಗಲಿದ್ದಾರೆ ಎನ್ನುವುದು ಗಮನಾರ್ಹ.

ಅದೇನೆ ಇರಲಿ ಗೆಲ್ಲುವರು ಮತ್ತು ಸೋಲುವವರು ನಮ್ಮವರೆ, ಈ ಪಂದ್ಯಾವಳಿಯನ್ನು ನೋಡಬರುವವರೆ ನಿಜವಾದ ಜಯಶೀಲರು.

ಬನ್ನಿ, ಪ್ಲೀಸ್ ಬನ್ನಿ.

ನಿಮ್ಮವ

ಸಂದೇಶ್.ಎಸ್.ಜೈನ್




 
ದಾಂಡೇಲಿಯ ಹೃದಯವಂತ ಆಟೋ ಚಾಲಕರ ಸೇವಾಗುಣವನ್ನು ಪ್ರೋತ್ಸಾಹಿಸಿ
ದಾಂಡೇಲಿಯ ಹೆಮ್ಮೆಯ ಸೇವಕರ ಸೇವಾಗುಣ ಕೈಂಕರ್ಯಕ್ಕೆ ಬಿಗ್ ಸೆಲ್ಯೂಟ್
ಬಹಳ ಹೆಮ್ಮೆಯಿಂದ ಬರೆಯುತ್ತಿದ್ದೇನೆ ಬಂಧುಗಳೆ. ಅದಕ್ಕೆ ಕಾರಣವುಂಟು. ನಾನಿವತ್ತು ಬರೆಯಲು ಹೊರಟಿರುವುದು ದಾಂಡೇಲಿಯ ಹೆಮ್ಮೆಯ ಸುಪುತ್ರರುಗಳ ಬಗ್ಗೆ ಎನ್ನುವುದನ್ನು ಅಭಿಮಾನದಿಂದ ಹೇಳಲು ಹೊರಟಿದ್ದೇನೆ.
 
ನಾನಿವತ್ತು ಬರೆಯಲು ಹೊರಟಿರುವುದು, ನಮ್ಮ ದಾಂಡೇಲಿಯ ಕರ್ಮಜೀವಿಗಳವರ ಬಗ್ಗೆ. ಅವರು ಬೇರೆ ಯಾರು ಅಲ್ಲ. ಬೆಳ್ಳಂ ಬೆಳಗ್ಗೆ ಮನೆಮಂದಿಯೆಲ್ಲ ಏಳುವ ಮುಂಚೆ ಬರಿಹೊಟ್ಟೆಯಲ್ಲಿ ರಿಕ್ಷಾ ಓಡಿಸುವ ಕಾಯಕಯೋಗಿಗಳು. ಅವರ ಬದುಕು ಒಂಥರ ದುಸ್ತರದ ಬದುಕು ಕಣ್ರೀ. 
 
ಮನೆ ಮಂದಿ ಏಳುವ ಮುಂಚೆ ಮನೆಯಿಂದ ಹೊರಬೀಳುವ ನಮ್ಮ ಆಟೋ ಚಾಲಕರು ಮತ್ತೇ ಮನೆ ಸೇರುವುದು ಮನೆ ಮಂದಿ ಮಲಗಿದ ಮೇಲೆಯೆ ಎಂಬುವುದನ್ನು ವಿವರಿಸುವ ಅಗತ್ಯವಿಲ್ಲ. ಬಹುಷ: ನಮ್ಮ ಆಟೋ ಚಾಲಕರು ಬಿಸಿ ಬಿಸಿ ಅಡುಗೆ ತಿನ್ನುವುದೆ ವಿರಳಾತಿ ವಿರಳ ದಿನವೆನ್ನಿ. ಆದರೂ ತಮ್ಮ ಕಾರ್ಯವನ್ನು ಶೃದ್ದೆಯಿಂದ ನಿರ್ವಹಿಸುವುದರ ಮೂಲಕ ದಾಂಡೇಲಿಗರ ಮನಗೆದ್ದಿರುವುದಿದೆಯಲ್ಲ ಅದವರ ವ್ಯಕ್ತಿತ್ವ ಮತ್ತು ಗುಣಸಂಪನ್ನತೆಗೆ ಮಹತ್ವದ ಸಾಕ್ಷಿ ಎಂದೆ ಹೇಳಬಹುದು.
ಅದು ಈಗೀಗ ಸರಕಾರಿ ಬಸ್ಸು ಗಲ್ಲಿ ಗಲ್ಲಿ ತಿರುಗುವುದರಿಂದ ಆಟೋ ಚಾಲಕರ ಆದಾಯಕ್ಕೆ ಕತ್ತರಿ ಬಿದ್ದಿರುವುದು ಸತ್ಯ. ಆದರೂ ತಮ್ಮ ಮನೆಮಂದಿಗಾಗಿ ನಾಳೆಯ ಕನಸನ್ನೇರಿ ಅವರು ಬದುಕಿನ ಪಯಾಣವನ್ನು ಆಟೋ ವೃತ್ತಿಯ ಮೂಲಕ ನಿಭಾಯಿಸುತ್ತಿರುವುದು ಗ್ರೇಟ್.
 
ನಾನೇಕೆ ಆಟೋ ಚಾಲಕರ ಬಗ್ಗೆ ಹೆಮ್ಮೆ ಪಡುತ್ತೇನೆಂದ್ರೆ, ಇಡೀ ರಾಜ್ಯದಲ್ಲೆ ನೋಡಬಹುದಾದರೇ, ಜಾತಿ, ಧರ್ಮ, ಭಾಷೆಯನ್ನು ಮೀರಿ ಮನುಷ್ಯತ್ವವನ್ನೆ ಧರ್ಮ, ಜಾತಿ ಎಂದು ಬಗೆದು ಮನುಷ್ಯತ್ವದ ಮಾನವೀಯ ಕಾರ್ಯಗಳನ್ನು ಮಡುತ್ತಿರುವ ಬಿಡಿಗಾಸು ಸಂಪಾದನೆಯ ಆಟೋ ಚಾಲಕರೆ ನಮ್ಮ ದಾಂಡೇಲಿಯ ನಿಜವಾದ ಆಸ್ತಿ ಎಂದು ಹೇಳಲೇಕೆ ಅಂಜಲಿ ಅಲ್ವೆ.
 
ಯಾವುದೇ ಧರ್ಮದ ಹಬ್ಬ ಹರಿದಿನಗಳು ಬರಲಿ, ರಾಷ್ಟ್ರೀಯ ಹಬ್ಬಗಳು ಬರಲಿ ದಾಂಡೇಲಿಯ ಎಲ್ಲಾ ಆಟೋ ನಿಲ್ದಾಣಗಳು ತಳಿರು ತೋರಣಗಳಿಂದ ಶೃಂಗರಿಸಿಕೊಂಡು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿರುವಂತೆ ಮಾಡುವ ಇದೇ ನಮ್ಮ ಆಟೋ ಚಾಲಕರು ಇದಕ್ಕಾಗಿ ಯಾರ ಬಳಿಯೂ ಆರ್ಥಿಕ ಸಹಾಯ ಪಡೆಯುವುದಿಲ್ಲ. ತಾವು ದುಡಿದ ಬಿಡಿಕಾಸು ಹಣವನ್ನೆ ಸಂಗ್ರಹಿಸಿ, ಬಳಕೆ ಮಾಡಿ ತಮ್ಮತನದ ಜೊತೆಗೆ ಆದರ್ಶ ಸಂಸ್ಕೃತಿಯನ್ನು ಸಾದರ ಪಡಿಸಿಕೊಳ್ಳುತ್ತಿದ್ದಾರೆ.
 
ಆಟೋ ಚಾಲಕರೊಳಗೆ ಏನೆ ತೊಂದರೆ, ಅನಾಹುತ, ಅಪತ್ತುಗಳು ನಡೆದರೂ ಸ್ವತ: ಎಲ್ಲ ಅಟೋ ಚಾಲಕರು ಒಂದಾಗಿ ಸಮಸ್ಯೆ ಪರಿಹಾರವನ್ನು ಸೂಚಿಸಿ, ಸಂಕಷ್ಟಕ್ಕೆ ಅಪತ್ಪಾಂದವರಂತೆ ಜೀವದುಸಿರನ್ನು ನೀಡುವ ಮಾನವೀಯ ಸ್ಪಂದನೆಗೆ ಏನು ಹೇಳಲಿ. 
 
ಇಂದು ನಮ್ಮ ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ. ಒಂದು ಕಡೆ ನಗರದ ಸುತ್ತಮುತ್ತಲಿಗೆ ಹಾಗೂ ನಗರದೊಳಗಡೆ ಸರಕಾರಿ ಬಸ್ಸುಗಳು ಸಂಚರಿಸುತ್ತಿರುವುದರಿಂದ ಆಟೋ ಚಾಲಕರು ಕಂಗಲಾಗಿದ್ದರೂ ಈ ಬಗ್ಗೆ ಯಾವತ್ತು ಆಕ್ಷೇಪಣೆ ಎತ್ತಿದವರಲ್ಲ. ಇತ್ತ ತಮ್ಮ ಕಾಯಕವನ್ನು ನಡೆಸುವ ಸಲುವಾಗಿ ಬೆಳ್ಳಂ ಬೆಳಗ್ಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಶೃದ್ದೆಯಿಂದ ನಿರ್ವಹಿಸುತ್ತಿದ್ದಾರೆ. ಆದರೇನು ನಮ್ಮ ಆರ್.ಟಿ.ಓ ಅಧಿಕಾರಿಗಳು ಸಹ ಅವರಿಗೆ ಆ ಕೇಸ್ ಈ ಕೇಸ್ ಎಂದು ಹೆದರಿಸುತ್ತಿರುವುದು ಕೆಲವಡೆ ಬೆಳಕಿಗೆ ಬರುತ್ತಿದೆ. ಸ್ವಾಮಿ, ನಮ್ಮ ಆಟೋ ಚಾಲಕರು ಪ್ರತಿದಿನ ಬೇರೆ ಬೇರೆ ಮನೆಯ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋದರೂ, ಆ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಪ್ರೀತಿಸುವುದರ ಜೊತೆಗೆ ಅತ್ಯಂತ ಜೋಪನವಾಗಿ ಶಾಲೆಗೆ ಕರೆದುಕೊಂಡು ಮರಳಿ ಮನೆಗೆ ವಾಪಸ್ಸು ಕರೆದುಕೊಂಡು ಹೋಗಿ ಬಿಡುತ್ತಾರೆ. ಇನ್ನೊಂದು ಮಾತು ಹೇಳಬೇಕೆಂದರೇ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಎಲ್ಲ ಆಟೋಗಳಲ್ಲಿ ಮಕ್ಕಳಿಗಾಗಿ ಚಾಕಲೇಟ್ಸ್ ಬಾಕ್ಸ್ ಇಟ್ಕೊಂಡಿರುತ್ತಾರೆ. ಆ ಮಕ್ಕಳಿಗೆ ಆಟೋ ಮಾಮಾ ಕೊಡುವ ಚಾಕಲೇಟೆ ಪೇವರಿಟ್ ಕೂಡಾ ಎನ್ನುವುದು ಇಲ್ಲಿ ಪ್ರಮುಖ ವಿಷಯ:
 
ಸ್ವಾಬಿಮಾನದ ಬದುಕು ನಡೆಸುತ್ತಿರುವ ದಾಂಡೇಲಿಯ ಹೆಮ್ಮೆಯ ಮಾನಸಪುತ್ರರಾದ ಆಟೋ ಚಾಲಕರ ಜೊತೆ ನಾವು ನೀವೆಲ್ಲರೂ ಇರೋಣ. ಅವರ ಮಾನವೀಯ ಕಾರ್ಯವನ್ನು ಬೆಂಬಲಿಸುವುದರ ಜೊತೆಗೆ ಅವರನ್ನು ಪ್ರೀತಿಯಿಂದ ಕಾಣೋಣ, ಗೌರವಿಸೋಣ ಎಂಬ ಪ್ರಾರ್ಥನೆಯೊಂದಿಗೆ,
 
ನಿಮ್ಮವ
 
ಸಂದೇಶ್.ಎಸ್.ಜೈನ್
 

Tuesday, January 22, 2019

 
ಅವರು ಎಲ್ಲರಂತಲ್ಲ. ಒಂದು ವಿಶಿಷ್ಟ ವ್ಯಕ್ತಿತ್ವದ ಸರಳ ಸಹೃದಯಿ ಅಣ್ಣ. ಅಪಾರ ಜ್ಞಾನ ಸಂಪನ್ನ. ಅತ್ಯುತ್ತಮ ವಾಗ್ಮಿ. ಹೊಸತನ, ಹೊಸ ವಿಚಾರಗಳೊಂದಿಗೆ ಸಮಾಜಮುಖಿಯಾಗಿ ಆದರ್ಶ ಜೀವನವನ್ನು ನಡೆಸುತ್ತಿರುವ ಇವರು ನನ್ನ ಹೆಮ್ಮೆಯ ಅಣ್ಣ ಮಹೇಂದ್ರಕುಮಾರ್ ಅವರು.

ಇಂದವರಿಗೆ ಹುಟ್ಟುಹಬ್ಬದ ಶುಭ ಸಂಭ್ರಮ. ಕಳೆದ ವರ್ಷವೆ ಅವರ ಹುಟ್ಟುಹಬ್ಬದ ಲೇಖನದಲ್ಲಿ ಸವಿವರವಾಗಿ ಬರೆದಿದ್ದೆ. ಆದ್ರೆ ಈ ಬಾರಿ ಮತ್ಯಾಕೆ ಬರೆಯುತ್ತಿದ್ದೇನೆಂದು ಅಂದುಕೊಂಡಿರೆ?

ಜೀವನದ ಮಹತ್ವದ ಜನ್ಮವರ್ಷ ನಮ್ಮ ಮಹೇಂದ್ರ ಅವರ ಪಾಲಿಗೆ :
ವಿವಿಧ ಹೋರಾಟ, ಜನಜಾಗೃತಿಗಳ ಮೂಲಕ ಬುಡಕಟ್ಟು ಸಮಾಜವನ್ನು ಸಮಾಜದ ಮುಖ್ಯಭೂಮಿಕೆಗೆ ತರುವಲ್ಲಿ ಪ್ರಾಮಾಣಿಕ ಹೋರಾಟಗೈದ ನಮ್ಮ ಬಿ.ಪಿ.ಮಹೇಂದ್ರಕುಮಾರ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಡಿ ಬುಡಕಟ್ಟು ಸಮಾಜಕ್ಕಾಗಿಯೆ ಬುಡಕಟ್ಟು ಸಮಾಜದ ಸಮಗ್ರ ವಿಚಾರಗಳನ್ನೊಳಗೊಂಡ ಸಂಶೋಧನೆಯನ್ನು ನಡೆಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಾತ್ರಿ ಹಗಲೆನ್ನದೆ ಸಂಶೋಧನಾ ಕಾರ್ಯದಲ್ಲಿ ತೊಡಗಿ ಇದೀಗ ತಮ್ಮ ಸಂಶೋಧನಾ ಗ್ರಂಥ ಸಿದ್ದಗೊಂಡು ಪದವಿ ಪ್ರಧಾನ ಸಮಾರಂಭದ ದಿನಗಣನೆಯಲ್ಲಿ ನನ್ನಣ್ಣ ಇದ್ದಾರೆ.

ಹಾಗಾಗಿ ಈ ವರ್ಷ ಮಹೇಂದ್ರಕುಮಾರ್ ಅವರ ಪಾಲಿಗೆ ಜೀವನದ ಮಹತ್ವದ ವರ್ಷವೆಂದೆ ಹೇಳಬಹುದು. ಮಹೇಂದ್ರಕುಮಾರ್ ಅವರ ಪ್ರಯತ್ನ, ಪ್ರಾಮಾಣಿಕತೆ, ದಕ್ಷತೆ, ಪರಿಶ್ರಮಕ್ಕೆ ಅಬಾರಿಯಾಗಿದ್ದೇನೆ. ಜನ್ಮದಿನದ ಸಂಭ್ರಮದಲ್ಲಿರುವ ಸಾಧನೆಯ ಸರದಾರ ಮಹೇಂದ್ರಕುಮಾರ್ ಅವರಿಗೆ ಈ ನಿಮ್ಮ ತಮ್ಮನ ಕಡೆಯಿಂದ ಪ್ರೀತಿಪೂರ್ವಕ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್
 

ಗೌರಿಯ ಚಿಕಿತ್ಸೆಗೆ ಧನಸಹಾಯ ನೀಡಿದ ಆಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗ



ದಾಂಡೇಲಿ : ರಕ್ತದ ಕ್ಯಾನ್ಸರಿಗೊಳಗಾಗಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಗರದ ಹನ್ನೊಂದರ ಹರೆಯದ ಬಾಲಕಿ ಗೌರಿಯ ಚಿಕಿತ್ಸೆಗೆ ನಗರದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದವರು ರೂ:5150/- ಧನ ಸಹಾಯವನ್ನು ನೀಡಿ ಗಮನ ಸೆಳೆದಿದ್ದಾರೆ.

ಬಾಲಕಿ ಗೌರಿಯ ತಂದೆ ಅನಿಲ್ ನಾಯ್ಕ ಅವರ ಉಳಿತಾಯ ಖಾತೆಗೆ ಈ ಹಣವನ್ನು ಹರೀಶ ಪೂಜಾರಿಯವರ ಮೂಲಕ ಜಮಾ ಮಾಡಲಾಗಿದ್ದು, ಧನ ಸಹಾಯ ಮಾಡಿದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವಿಷ್ಣು ನಾಯರ್, ಪ್ರಶಾಂತ ಕಲಾಲ, ಪಾಂಡುರಂಗ ಮೋಟ್ರಾಚೆ, ರಾಮ ನಾಯ್ಡು ಮತ್ತು ಉಮ್ಮರ್ ಶೇಖ ಉಪಸ್ಥಿತರಿದ್ದರು.
ವಿಷ್ಣು ನಾಯರ್ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಈ ಮಾನವೀಯ ಕಾರ್ಯಕ್ಕೆ ಗೌರಿ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಈ ಸತ್ಕಾರ್ಯಕ್ಕೆ ವಿಶೇಷ ಅಭಿನಂದನೆಗಳು.

ನಿಮ್ಮವ

ಸಂದೇಶ್.ಎಸ್.ಜೈನ್

Monday, January 21, 2019

ಮನಸೂರೆಗೊಂಡ ಯಕ್ಷಗಾನ ಪ್ರದರ್ಶನ


ದಾಂಡೇಲಿ: ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ಹಾಗೂ ದಾನಿಗಳ ನೆರವಿನಲ್ಲಿ ಹೊನ್ನಾವರ ತಾಲ್ಲೂಕಿನ ಜಲವಳ್ಳಿಯ ಕಲಾಧರ ಯಕ್ಷರಂಗ ಇವರಿಂದ ನಗರದ ಹಳೆ ನಗರ ಸಭಾ ಮೈದಾನದಲ್ಲಿ ಭಾನುವಾರ ರಾತ್ರಿ ಕಾರ್ತವೀರ್ಯಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ ಎಂಬ ಪೌರಾಣಿಕ ಯಕ್ಷಗಾನವು ಉಚಿತ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಜರುಗಿ ಮನಸೂರೆಗೊಂಡಿತು.

ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಪಲ್ಲವ ಗಾಣಿಗ ಹೆರಂಜಾಲು, ಮದ್ದಳೆಯಲ್ಲಿ ಎನ್.ಜಿ.ಹೆಗಡೆ ಯಲ್ಲಾಪುರ, ವೆಂಕಟ್ರಮಣ ಹೆಗಡೆ ನಿಟ್ಟೂರು, ಚೆಂಡೆಯಲ್ಲಿ ಗಣೇಶ ಗಾಂವಕರ ಹೆಳುವಳ್ಳಿ, ರಾಮ ಭಂಡಾರಿ ಸಹಕರಿಸಿದರು. ಸ್ತ್ರೀ ವೇಷದಾರಿಗಳಾಗಿ ಹೊಸಂಗಡಿ ರಾಜೀವ ಶೆಟ್ಟಿ, ನಿಲ್ಕೊಡ ಶಂಕರ ಹೆಗಡೆ, ನಾಗರಾಜ ಭಟ್, ಹಾಸ್ಯ ಕಲಾವಿದರಾಗಿ ಹಳ್ಳಾಡಿ ಜಯರಾಮ ಶೆಟ್ಟಿ ಹಾಗೂ ಪ್ರಮುಖ ಕಲಾವಿದರುಗಳಾಗಿ ಬಳ್ಕೂರು ಕೃಷ್ಣಯಾಜಿ, ಉಪ್ಪುಂದ ನಾಗೇಂದ್ರ ರಾವ್, ಜಲವಳ್ಳಿ ವಿದ್ಯಾದರ ರಾವ್, ಕಾರ್ತಿಕ ಚಿಟ್ಟಾಣಿ, ವಿನಯ್ ಭಟ್ ಬೇರೋಳ್ಳಿ, ಆನಂದ ಭಟ್, ಮಹಾಬಲೇಶ್ವರ ಗೌಡ, ನಿರಂಜನ ಜಾಗನಳ್ಳಿ, ಗಣಪತಿ ಬೈಲುಗದ್ದೆ, ಬಾಸ್ಕರ ಕುಮುಟಾ ಮತ್ತು ಪರಿಶುದ್ದ ಆಚಾರ್ಯ ಅವರುಗಳು ಮನೋಜ್ಷ ಅಭಿನಯ ನೀಡಿದರು. ವಿಶೇಷ ಪಾತ್ರದಲ್ಲಿ ಜೊಯಿಡಾ ಯಕ್ಷಗಾನ ಕಲಾವಿದ ಸುದರ್ಶನ ಹೆಗಡೆಯವರು ವೇಷದಾರಿಯಾಗಿ ಗಮನ ಸೆಳೆದರು.

ಆರಂಭದಲ್ಲಿ ಯಕ್ಷಗಾನ ಪ್ರದರ್ಶನದ ಪ್ರಮುಖ ಸಂಘಟಕ ಹಾಗೂ ರೂವಾರಿ ವಿಷ್ಣುಮೂರ್ತಿ ರಾವ್ ಸರ್ವರನ್ನು ಸ್ವಾಗತಿಸಿದರು. ಕಲಾಧರ ಯಕ್ಷರಂಗದ ಮುಖ್ಯಸ್ಥ ವಿದ್ಯಾದರ ಜಲವಳ್ಳಿಯವರು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷ ಸಂದೇಶ್.ಎಸ್.ಜೈನ್ ಧನ್ಯವಾದ ಸಲ್ಲಿಸಿದರು. ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಮತ್ತು ಯಕ್ಷಗಾನ ಕಲಾಭಿಮಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
 

Saturday, January 19, 2019

ದಾಂಡೇಲಿಯಲ್ಲಿ ಮೇಳೈಸಿದ ಆಳ್ವಾಸ್ ಸಾಂಸ್ಕೃತಿಕ ವೈಭವ
ಕನ್ನಡ ಸಂಸ್ಕೃತಿ ಉಳವಿಗೆ ಕನ್ನಡ ಶಾಲೆಯ ಉಳಿವು ಅತ್ಯಗತ್ಯ-
ಡಾ: ಎಂ.ಮೋಹನ ಆಳ್ವಾ
 




ದಾಂಡೇಲಿ : ಕಾಲ ಬದಲಾಗಿದೆ. ಪಾಶ್ವಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಾವು ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ತೀವ್ರ ಹಿನ್ನಡೆ ಸಾಧಿಸುತ್ತಿರುವುದು ದುರ್ದೈವ್ಯ. ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಚಿಂತಜನಕವಾಗಿದೆ. ಕನ್ನಡ ನಾಡಿನ ದಿವ್ಯ ಸಂಸ್ಕೃತಿ ಉಳಿಯಬೇಕಾದರೇ ನಮ್ಮ ನೆಲದ ಭಾಷೆಯ ಕನ್ನಡ ಶಾಲೆಗಳನ್ನು ಉಳಿಸುವುದರ ಜೊತೆಗೆ ಹೊಸ ಆಯಾಮವನ್ನು ನೀಡಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದೇ ಹೋದಲ್ಲಿ ಭವಿಷ್ಯದಲ್ಲಿ ಕನ್ನಡ ಭಾಷೆ, ನಮ್ಮ ನೆಲದ ಸಂಸ್ಕೃತಿ ವಿನಾಶದ ಅಂಚಿಗೆ ಹೋಗಲಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ: ಎಂ.ಮೋಹನ ಆಳ್ವಾ ಅವರು ಹೇಳಿದರು.

ಅವರು ನಗರದಲ್ಲಿ ಹಳಿಯಾಳದ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರ ನಗರದ ಬಂಗೂರನಗರ ಡಿಲಕ್ಸ್ ಮೈದಾನದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ರಾಜ್ಯ ಸರ್ಕಾರ ಕೆಲ ವರ್ಷಗಳ ಹಿಂದೆ ಮೊರಾರ್ಜಿ ವಸತಿ ಶಾಲೆಯನ್ನು ಪ್ರಾರಂಭಿಸಿತ್ತು. ಆದರೆ ನಂತರ ವರ್ಷಗಳಲ್ಲಿ ಅದರ ಅಭಿವೃದ್ಧಿಯ ಬಗ್ಗೆ ಮತ್ತು ಇನ್ನೂ ಹೆಚ್ಚಿನ ಕಡೆಗಳಲ್ಲಿ ಈ ಶಾಲೆಗಳನ್ನು ಪ್ರಾರಂಭಿಸುವಲ್ಲಿ ಗಮನ ನೀಡಿಲ್ಲ. ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಾಡಿನ ಸಂಸ್ಕೃತಿಗೆ ಧಕ್ಕೆಯಾಗುವುದರಲ್ಲಿ ಯಾವ ಅನುಮಾವು ಇಲ್ಲ.

ನಮ್ಮ ನೆಲದ ಬಾಷೆ, ಸಂಸ್ಕೃತಿ, ನಮ್ಮ ಆಚಾರ ವಿಚಾರಗಳ ಜೊತೆಗೆ ಮೇರು ಸಾಂಸ್ಕೃತಿಕ ಕಲೆಗಳನ್ನು ಜೀವಂತವಾಗಿರಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಒಂದು ಪ್ರಯತ್ನವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಮೂಲಕ ಮಾಡಿಕೊಂಡು ಬರುತ್ತಿದೆ. ಇದು ರಾಜ್ಯದ ಉದ್ದಗಲದಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕು. ಶಿಕ್ಷಣ ವ್ಯಾಪಾರವಾಗಬಾರದು. ವ್ಯಾಪಾರದ ದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳು, ಶಾಲೆಗಳು ಬೆಳೆಯುತ್ತಿರುವುದು ನಾಡಿನ ಸಂಸ್ಕೃತಿ ಮತ್ತು ಕಲೆಗಳು ನಾಶವಾಗಲು ಕಾರಣವಾಗಲಿದೆ. ಆ ಕಾರಣಕ್ಕಾಗಿ ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಕಟಿಬದ್ದವಾಗಬೇಕೆಂದು ಡಾ: ಮೋಹನ.ಎಂ.ಆಳ್ವಾ ಕರೆ ನೀಡಿದರು. ಮನರಂಜನೆ ಎಂದರೆ  ಕೇವಲ ಕಲೆಗಳ ಪ್ರದರ್ಶನವಷ್ಟೇ ಅಲ್ಲ. ಅದು ದೇಶಿ ಸಂಸ್ಕೃತಿ, ಶಾಶ್ತ್ರೀಯ ಹಾಗೂ ಜಾನಪದ ಕಲೆಗಳನ್ನು ರಕ್ಷಿಸುವ ಒಂದು ಪ್ರಕ್ರಿಯೆ ಕೂಡಾ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸೌಹಾರ್ಧ ಮನಸ್ಸುಗಳನ್ನು ಕಟ್ಟುವ ಕೆಲಸವೂ ಆಗಬೇಕು ಎಂದು ಡಾ. ಮೋಹನ ಆಳ್ವಾ ನುಡಿದರು.  

ಮುತ್ಸದ್ದಿ ರಾಜಕಾರಣಿಯಾಗಿ, ಸಮಾಜಮುಖಿಯಾಗಿರುವ ಸಚಿವ ದೇಶಪಾಂಡೆಯವರ ಕಾಳಜಿ ಮತ್ತು ಜನಪಯೋಗಿ ನೀತಿಗಳು ಅವರ ರಾಜಕೀಯ ಮುತ್ಸದ್ದಿತನಕ್ಕೆ ಪ್ರಮುಖ ಸಾಕ್ಷಿ ಎಂದು ದೇಶಪಾಂಡೆಯವರ ಸಮಾಜೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಡಾ: ಮೋಹನ.ಎಂ.ಆಳ್ವಾ ಅವರು ಕೊಂಡಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟಿನ ಧರ್ಮದರ್ಶಿ ಪ್ರಸಾದ ದೇಶಪಾಂಡೆಯವರು ಡಾ: ಮೋಹನ ಆಳ್ವಾ ಅವರು ಈ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಶಕ್ತಿ. 26 ಸಾವಿರ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಸೇವೆಯ ಜೊತೆಗೆ ಸಾಂಸ್ಕೃತಿಕವಾಗಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅವರಿಗೆ ಹೊಸ ಬದುಕು ಕಟ್ಟಿಕೊಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾರ್ಯ ಅದು ಮಹೋನ್ನತ ಕಾರ್ಯ ಎಂದು ಬಣ್ಣಿಸಿದರು.

ಅತಿಥಿಗಳಾಗಿದ್ದ ಪದವಿ ಕಾಲೇಜಿನ ಉಪನ್ಯಾಸಕ, ಲೇಖಕ ಡಾ. ಆರ್.ಜಿ. ಹೆಗಡೆಯವರು ಡಾ. ಮೋಹನ ಆಳ್ವಾರವರು ಸಾರ್ಥಕ ಶ್ರಮ ಹಾಗೂ ಸಾಧನೆಗಳ ಬಗ್ಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ  ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ, ನಗರಸಭಾ ಸದಸ್ಯೆ ಯಾಸ್ಮಿನ್ ಕಿತ್ತೂರ, ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಸಾಹಿತಿ ಮಾಸ್ಕೇರಿ ಎಮ್.ಕೆ. ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ಉಪೇಂದ್ರ ಘೋರ್ಪಡೆ, ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ  ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ಡಾ. ಮೋಹನ ಅಳ್ವಾರನ್ನು ಸನ್ಮಾನಿಸಿ ಗೌರವಿಸಿದರು. ಗೀತಾ ವಿ. ಹೆಗಡೆ ಪ್ರಾರ್ಥಿಸಿದರು.  ದಿನೇಶ ನಾಯ್ಕ  ಸ್ವಾಗತಿಸಿ ಪರಿಚಯಿಸಿದರು.  ಸಂಗೀತಾ ಮೇಲಗೇರಿ ವಂದಿಸಿದರು. ವಿ.ಆರ್.ಡಿ.ಎಂ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಆಳ್ವಾಸ್ ಶಿಕ್ಷಣ ಸಂಸ್ಥೆಯ ನಾಗರಾಜ ಶೆಟ್ಟಿ ಸಹಕರಿಸಿದರು.

ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಕೇರಳದ ಮೋಹಿನಿಯಾಟ್ನಮ್-ಅಷ್ಟಲಕ್ಷ್ಮಿ,  ಬಡಗುತಿಟ್ಟು ಯಕ್ಷಗಾನ-ದಾಸ ದೀಪಾಂಜಲಿ,  ಆಂದ್ರದ ಜನಪದ - ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಶಾಸ್ತ್ರೀಯ ನೃತ್ಯ ನವ ದುರ್ಗೆ, ಶ್ರೀಲಂಕಾದ  ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತನ ಗಾರ್ಬ ಮತ್ತು ದಾಂಡಿಯಾ, ಮಣಿಪುರ ಡೋಲ್ - ಚಲಮ್,   ಕಥಕ್ ನೃತ್ಯ-ನವರಂಗ, ಪಶ್ಚಿಮ ಬಂಗಾಳದ ಪುಲಿಯಸಿಂಹ ನೃತ್ಯ, ತೆಂಕು ಯಕ್ಷಗಾನ ಪ್ರಯೋಗ-ಅಗ್ರಪೂಜೆ ಸೇರಿದಂತೆ ದೇಶದ ವಿವಿದೆಡೆಯ ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಭೂತಪೂರ್ವವಾಗಿ ಪ್ರದರ್ಶನಗೊಂಡು ಜನಮನ ರಂಜಿಸಿದವು. 




 
ನಾಳೆ ಯಕ್ಷಗಾನ -ನೀವೆಲ್ಲ ಬನ್ನಿ ಮಾರಾಯ್ರೆ
ದಾಂಡೇಲಿಯ ಹಳೆ ನಗರ ಸಭಾ ಮೈದಾನದಲ್ಲಿ ನಾಳೆ ಸಂಜೆ: 6 ಗಂಟೆಗೆ ಸರಿಯಾಗಿ

ಪ್ಲೀಸ್ ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ
 
ಕರಾವಳಿಯ ಗಂಡು ಕಲೆಯನ್ನು ಉಳಿಸುವುದರ ಜೊತೆಗೆ ಕಲಾಸೇವೆಗಾಗಿ ಬದುಕು ಸಮರ್ಪಿಪಿಸಿಕೊಂಡ ಹಮ್ಮೆಯ ಕಲಾವಿದರುಗಳನ್ನು ಪ್ರೋತ್ಸಾಹಿಸೋಣ.
 
ನಮ್ಮೂರ ಹಮ್ಮೆಯ ಕಲಾವಿದರಾದ ಶ್ರೀ.ವಿಷ್ಣುಮೂರ್ತಿಯವರ ಭಾಗವತಿಗೆ ಹಾಗೂ ಜೊಯಿಡಾದ ಅಪ್ಪಟ ಕಲಾವಿದ ಸುದರ್ಶನ ಹೆಗಡೆಯವರಿಂದ ಮನೋಜ್ಞ ಅಭಿನಯವಿದೆ. 
 
ಮರೆಯಬೇಡಿ, ಮರೆತು ನಿರಾಶರಾಗಬೇಡಿ. ನಾಳೆ ಒ0ದು ದಿನ ಏನೆ ಕೆಲಸವಿದ್ದರೂ, ಕೆಲಸವನ್ನೆಲ್ಲ ಬದಿಗೊತ್ತಿ, ಪ್ಯಾಮಿಲಿ ಸಮೇತ ಪುರುಸೊತ್ತು ಮಾಡಿಕೊಂಡು ಬನ್ನಿ, ನಿಮಗಾಗಿ ಕಾಯುತ್ತಿದ್ದೇವೆ.
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ-581325
ಇವರ ಆಶ್ರಯದಲ್ಲಿ
ಕಲಾಧರ ಯಕ್ಷರಂಗ ಬಳಗ(ರಿ.) ಜಲವಳ್ಳಿ, ಹೊನ್ನಾವರ ತಾಲೂಕು.
ಇವರಿಂದ
 ಕಾರ್ತಿವೀರ & ಕೃಷ್ಣಾರ್ಜುನ ಕಾಳಗ
(ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ)
 

ದಿನಾಂಕ: 20.01.2019,  ಸ್ಥಳ: ಹಳೆ ನಗರ ಸಭಾ ಮೈದಾನ, ದಾಂಡೇಲಿ.
ಉಚಿತ ಪ್ರದರ್ಶನ            
 
ಹಾರ್ದಿಕ ಸ್ವಾಗತ, ಸುಸ್ವಾಗತ ಬಯಸುವ
 
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ 
ಯಕ್ಷಗಾನಂ ಗೆಲ್ಗೆ



Friday, January 18, 2019

ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಇಂದು ದಾಂಡೇಲಿಯಲ್ಲಿ
ಅಭೂತಪೂರ್ವ  ಆಳ್ವಾಸ್ ಸಾಂಸ್ಕೃತಿಕ ವೈಭವ



ಸ್ಥಳ: ಡಿಲಕ್ಸ್ ಮೈದಾನ, ಬಂಗೂರನಗರ, ದಾಂಡೇಲಿ.
ಸಮಯ: ಇಂದು ಸಂಜೆ 6 ಗಂಟೆಯಿಂದ


ಮನೆ ಕೆಲಸ ಬೇಗ ಮುಗಿಸಿ, ಕುಟುಂಬಸಮೇತರಾಗಿ ಬನ್ನಿ, ಮಹೋನ್ನತ ಕಾರ್ಯಕ್ರಮವನ್ನು ನೋಡುವ ಭಾಗ್ಯಶಾಲಿಗಳು ನಾವಾಗೋಣ.


ನಮ್ಮ ಪುಣ್ಯದ ದಾಂಡೇಲಿ ನೆಲದಲ್ಲಿ ವಿಜೃಂಭಿಸಲಿದೆ ವೈವಿಧ್ಯಮಯ, ಆಕರ್ಷಕ, ಅತ್ಯದ್ಭುತ ಕಾರ್ಯಕ್ರಮಗಳು ನಮ್ಮ ನಿಮ್ಮೆಲ್ಲರಿಗಾಗಿ, ಬನ್ನಿ ಆನಂದಿಸೋಣ, ಕಲಾಪ್ರತಿಭೆಗಳ ಪ್ರತಿಭೆಗೆ ಗೌರವವನ್ನು ನೀಡೋಣ.


ನಿಮ್ಮವ


ಸಂದೇಶ್.ಎಸ್.ಜೈನ್



ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಬಿ.ನಾಯ್ಕ ವಿಧಿವಶ
ದಾಂಡೇಲಿ: ನಗರದ ಹಿರಿಯ ಕಾಂಗ್ರೆಸ್ ಮುಖಂಡ ಟೌನಶೀಪ್ ನಿವಾಸಿ ಎಸ್.ಬಿ.ನಾಯ್ಕ (ವ: 75) ಅವರು ಗುರುವಾರ ತಡರಾತ್ರಿ ವಿಧಿವಶರಾಗಿದ್ದಾರೆ.

ಮೃತ ಎಸ್.ಬಿ.ನಾಯ್ಕ ಅವರು ಕಳೆದ 50 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದು, ನಗರದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕೆ.ಪಿ.ಸಿ.ಸಿ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು:
ಎಸ್.ಬಿ.ನಾಯ್ಕ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಕಂಬನಿ ಮಿಡಿದಿದ್ದು, ಎಸ್.ಬಿ.ನಾಯ್ಕ ಅವರ ಪ್ರಾಮಾಣಿಕ ಸೇವೆ ಮತ್ತು ಜನಪರ ನಿಲುವನ್ನು ಸ್ಮರಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಕಾಂಗ್ರೆಸ್ ಮುಖಂಡರುಗಳಾದ ಸತೀಶ ಬೆಂಡೆ, ರಾಧಾಕೃಷ್ಣ ಕನ್ಯಾಡಿ, ವಿ.ಸತ್ಯನ್, ಎನ್.ಜಿ.ಸಾಳುಂಕೆ, ದಿವಾಕರ ನಾಯ್ಕ, ಕರೀಂ ಅಜ್ರೇಕರ, ಆರ್.ಜಿ.ಶೆಟ್ಟಿ, ಬಸೀರ್ ಗಿರಿಯಾಲ, ಎಸ್.ಎಸ್.ಪೂಜಾರ, ಬಾಪು ಗೌಡ, ಎನ್.ಎಸ್.ನಾಯ್ಕ, ಸುಬ್ರಹ್ಮಣಿ ಸಮರು, ವೀರೇಶ ಯರಗೇರಿ, ಅವಿನಾಶ ಘೋಡಕೆ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಆದಂ ದೇಸೂರು, ಅಷ್ಪಾಕ ಶೇಖ, ನಂದೀಶ ಮುಂಗರವಾಡಿ, ಅನಿಲ್ ನಾಯ್ಕರ್, ಆಸೀಪ್ ಮುಜಾವರ, ಮೌಲಾಲಿ ಮುಲ್ಲಾ, ಸಂಜು ಚಂದ್ರಕಾಂತ ನಂದ್ಯಾಳ್ಕರ ಮೊದಲಾದವರು ಕಂಬನಿ ಮಿಡಿದಿದ್ದಾರೆ.

ಆದರ್ಶ ರಾಜಕಾರಣಿಯಾಇ, ಜನಸೇವೆಗೈದ ಸರಳ ವ್ಯಕ್ತಿತ್ವದ ಸಹೃದಯಿ ಎಸ್.ಬಿ.ನಾಯ್ಕ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವ,

ಸಂದೇಶ್.ಎಸ್.ಜೈನ್


 
ಜ: 20 ರಂದು ದಾಂಡೇಲಿಯಲ್ಲಿ ಉಚಿತ ಯಕ್ಷಗಾನ ಪ್ರದರ್ಶನ

ದಾಂಡೇಲಿ : ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ದಾನಿಗಳ ನೆರವಿನೊಂದಿಗೆ ಹೊನ್ನಾವರ ತಾಲ್ಲೂಕಿನ ಜಲವಳ್ಳಿಯ ಕಲಾಧರ ಯಕ್ಷರಂಗ ಬಳಗ (ರಿ.) ಇವರಿಂದ ಜನವರಿ:20 ರಂದು ಸಂಜೆ 6.00 ಗಂಟೆಗೆ ಸರಿಯಾಗಿ ಹಳೆ ನಗರ ಸಭಾ ಮೈದಾನದಲ್ಲಿ ಉಚಿತ ಯಕ್ಷಗಾನ ಪ್ರದರ್ಶನ ನಡೆಯಲಿದೆ.
 
ಕಾರ್ತಿವೀರ & ಕೃಷ್ಣಾರ್ಜುನ ಕಾಳಗ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಲಿದ್ದು, ಮೇಳದಲ್ಲಿ ಭಾಗವತರುಗಳಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಪಲ್ಲವ ಗಾಣಿಗ ಹೆರಂಜಾಲು ಭಾಗವಹಿಸಲಿದ್ದಾರೆ. ಮದ್ದಳೆ: ಎನ್.ಜಿ.ಹೆಗಡೆ ಯಲ್ಲಾಪುರ, ವೆಂಕಟ್ರಮಣ ಹೆಗಡೆ ನಿಟ್ಟೂರು, ಚೆಂಡೆ: ಗಣೇಶ ಗಾಂವಕರ ಹೆಳುವಳ್ಳಿ, ರಾಮ ಭಂಡಾರಿ ಕಲಾಸೇವೆ ನೀಡಲಿದ್ದಾರೆ.

ಸ್ತ್ರೀ ವೇಷದಾರಿಗಳಾಗಿ ಹೊಸಂಗಡಿ ರಾಜೀವ ಶೇಟ್ಟಿ, ನಿಲ್ಕೊಡ, ಶಂಕರ ಹೆಗಡೆ, ನಾಗರಾಜ ಭಟ್, ಹಾಸ್ಯ ಕಲಾವಿದರುಗಳಾಗಿ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀಧರ ಭಟ್ ಕಾಸರಕೋಡ ಅವರುಗಳು ಭಾಗವಹಿಸಲಿದ್ದಾರೆ. ಪ್ರಮುಖ ಕಲಾವಿದರುಗಳಾಗಿ ಬಳ್ಕೂರು ಕೃಷ್ಣಯಾಜಿ, ಉಪ್ಪುಂದ ನಾಗೇಂದ್ರ ರಾವ್, ಜಲವಳ್ಳಿ ವಿದ್ಯಾದರ ರಾವ್, ಕಾತರ್ಿಕ ಚಿಟ್ಟಾಣಿ, ವಿನಯ್ ಭಟ್ ಬೇರೋಳ್ಳಿ, ಆನಂದ ಭಟ್, ಮಹಾಬಲೇಶ್ವರ ಗೌಡ, ನಿರಂಜನ ಜಾಗನಳ್ಳಿ, ಗಣಪತಿ ಬೈಲುಗದ್ದೆ, ಬಾಸ್ಕರ ಕುಮುಟಾ ಮತ್ತು ಪರಿಶುದ್ದ ಆಚಾರ್ಯ ಅವರುಗಳು ಗೆಜ್ಜೆ ಕಟ್ಟಲಿದ್ದಾರೆ.

ಇವರ ಜೊತೆ ಜೊತೆಯಲ್ಲಿ ದಾಂಡೇಲಿಯ ಹೆಮ್ಮೆಯ ಕಲಾವಿದ ಹಾಗೂ ಸಂತೋಷ್ ಹೊಟೆಲ್ ಮಾಲಕರಾದ ವಿಷ್ಣುಮೂರ್ತಿ ರಾವ್ ಅವರ ಕಂಚಿನ ಕಂಠದ ಭಾಗವತಿಗೆ ಹಾಗೂ ಜೊಯಿಡಾ ಖ್ಯಾತ ಕಲಾವಿದ ಸುದರ್ಶನ ಹೆಗಡೆಯವರು ವೇಶದಾರಿಯಾಗಿ ಗಮನ ಸೆಳೆಯಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.

ಹಾರ್ದಿಕ ಸ್ವಾಗತ ಸುಸ್ವಾಗತ ಬಯಸುವ
 
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ


 

Thursday, January 17, 2019

ರಾಜ್ಯಮಟ್ಟದಲ್ಲಿ ಮಿಂಚಿ ದಾಂಡೇಲಿಗೆ ಕೀರ್ತಿ ತಂದ ಸ್ಕಂದ ಸುದರ್ಶನ
ಅಭಿಮಾನದ ಅಭಿವಂದನೆಗಳು
ದಾಂಡೇಲಿ: ನಗರದ ಕೆನರಾ ವೆಲ್ಪೇರ್ ಟ್ರಸ್ಟಿನ ಇ.ಎಂ.ಎಸ್ ಆಂಗ್ಲ ಮಾದ್ಯಮ ಹಿ.ಪ್ರಾ.ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಸ್ಕಂದ ಸುದರ್ಶನ ಈತನು ಇತ್ತೀಚೆಗೆ ಉಡುಪಿಯಲ್ಲಿ ನಡೆದ 13 ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಟ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ರಾಜ್ಯಮಟ್ಟದಲ್ಲಿ ಮಿಂಚುವುದರ ಮೂಲಕ ನಗರಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ. ಈಗಾಗಲೆ ವಿವಿದೆಡೆಗಳಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾನೆ.
 
ಈತನ ಸಾಧನೆಗೆ ಕರಾಟೆ ತರಬೇತುದಾರ ಲಕ್ಷ್ಮಣ ಹುಲಸ್ವಾರ, ಕೆನರಾ ವೆಲ್ಪೇರ್ ಟ್ರಸ್ಟಿನ ಇ.ಎಂ.ಎಸ್ ಸಂಸ್ಥೆಯ ಆಡಳಿತ ಮಂಡಳಿ, ಸಂಸ್ಥೆಯ ಅಧೀಕ್ಷಕ ಎಂ.ಎಸ್.ಇಟಗಿ, ಮುಖ್ಯೋಪಾಧ್ಯಯನಿ ಯೂಜಿನ್ ಡಿವಾಜ್, ಶಾಲೆಯ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಯ ಪೋಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
 
ರಾಜ್ಯಮಟ್ಟದಲ್ಲಿ ಮಿಂಚಿದ ನಮ್ಮೂರ ಕುವರ ಸ್ಕಂದ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಶಿಖರವನ್ನೇರಲಿ ಎಂಬ ಆಶಯ ಹಾರೈಕೆಯೊಂದಿಗೆ, ಮುದ್ದು ಬಾಲಕನಿಗೆ ನಿಮ್ಮೆಲ್ಲರ ಅಕ್ಕರೆಯ ಆಶೀರ್ವಾದವಿರಲೆಂಬ ಪ್ರಾರ್ಥನೆ.
 
ನಿಮ್ಮವ
 
ಸಂದೇಶ್.ಎಸ್.ಜೈನ್

ವಿದ್ಯಾರ್ಥಿಗಳ ಪಾಲಿಗೆ ಅಪ್ಪಟ ಅಮ್ಮನಂತಿದ್ದ ವನಿತಾ.ಪಿ.ಕಿನ್ನರಕರ
ವನಿತಮ್ಮನ ಮಾತೃಹೃದಯದ ಮನಸ್ಸು ಮತ್ತು ಸ್ಪಂದನೆಯ ಗುಣ ಶಾಶ್ವತ

ಅವರು ಗತಿಸಿ ನಿನ್ನೆಗೆ ಎರಡು ವರ್ಷ. ಅವರು ಎಲ್ಲರಂತಿರಲಿಲ್ಲ. ವಿಭಿನ್ನ ವ್ಯಕ್ತಿತ್ವದ ಆದರ್ಶ ಮನಸ್ಸಿನ ಸುಸಂಸ್ಕೃತ ಮಾತೆಯಾಗಿದ್ದರು. ಅಪಾರ ವರ್ಷಗಳ ಕಾಲ ಶಿಕ್ಷಕಿಯಾಗಿ ಅನುಪಮ ಸೇವೆ ಸಲ್ಲಿಸಿದವರು. ವೃತ್ತಿಯಲ್ಲಿರುವಾಗಲೆ ಅನಾರೋಗ್ಯ ಪೀಡಿತರಾಗಿ ಇಹಲೋಕವನ್ನು ತ್ಯಜಿಸಿದವರು.

ಅವರು ಬೇರೆ ಯಾರು ಅಲ್ಲ. ದಾಂಡೇಲಿಯ ಟೌನಶೀಪ್ ನಿವಾಸಿಯಾಗಿದ್ದ ದಿ: ವನಿತಾ ಪಂಡರಿನಾಥ ಕಿನ್ನರಕರ ಅವರು. ಅಂದ ಹಾಗೆ ಅವರು ಸ್ಥಳೀಯ ಕೋಗಿಲೆಬನ ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದವರು. ಕೋಗಿಲೆಬನದ ವಿದ್ಯಾರ್ಥಿಗಳಿಗೆಂದು ಅವರು  ಶಿಕ್ಷಕಿಯಾಗಿರಲಿಲ್ಲ. ಹೆತ್ತಮ್ಮನ ಆರೈಕೆ ನೀಡಿದ ಮಾತೃ ಹೃದಯದ ಅಮ್ಮನಾಗಿದ್ದವರು. 

ವಿದ್ಯಾರ್ಥಿಗಳು ಆಟವಾಡುವಾಗ ಬಿದ್ದಾಗ ಸರ ಸರನೆ ಓಡೋಡಿ, ಅವರನ್ನು ಮೇಲೆಬ್ಬಿಸಿ, ಗಾಯಕ್ಕೆ ಮುಲಾಂ ಹಚ್ಚಿಕೊಳ್ಳುವ ಮೂಲಕ ಮಕ್ಕಳ ಮನಸ್ಸು ಗೆದ್ದ ಆದರ್ಶ ಶಿಕ್ಷಕಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದ ಹೃದಯವಂತೆ ನಮ್ಮ ವನಿತಮ್ಮನವರಾಗಿದ್ದರು. ಜೀವನದಲ್ಲೆಂದೂ ಸ್ವಾರ್ಥವನ್ನು ಬಯಸದ ಪರಿಪೂರ್ಣ ಮನಸ್ಸಿನ ಹೃದಯವಂತೆ, ಗುಣವಂತೆ ಅಮ್ಮ ನಮ್ಮ ವನಿತಾಮ್ಮನಾಗಿದ್ದರು.

ಅವರ ಪತಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಪತಿಗೆ ತಕ್ಕ ಮುದ್ದಿನ ಮಡದಿಯಾಗಿ, ಪತಿ ಮುರಳೀಧರ ಗುರವ ಅವರು ಪೊಲೀಸ್ ಇಲಾಖೆಯಲ್ಲಿದ್ದುಕೊಂಡೆ ರಾಷ್ಟ್ರೀಯ ವಾಲಿಬಾಲ್ ಆಟಗಾರರಾಗುವಲ್ಲಿ ಪರಿಣಾಮಕಾರಿಯಾಗಿ ಸ್ಪೂರ್ತಿಯ ಸೆಳೆಯಾಗಿದ್ದವರು ನಮ್ಮ ವನಿತಮ್ಮನವರು. ಮಗಳು ಪೂರ್ಣಿಮಾ ಗುರವ ಅವರು ಇಂದು ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಭಾಗ್ಯಾದಾಸರೆ ನೀಡಿದ ತಾಯಿಯವರು. ಮಗ ಅಮರ್ ಗುರವ ಅವರ ಕ್ರೀಡಾ ಬಾಳ್ವೆಯನ್ನು ಬೆಳಗಿಸಿದ ಜ್ಯೋತಿಯಾಗಿದ್ದವರು ಈ ನಮ್ಮ ಅಮ್ಮ ವನಿತಮ್ಮನವರು.

ಮನೆಗಷ್ಟೆ ಆದರ್ಶ ಗುಣಸಂಪನ್ನೆಯಾಗದೇ ಇಡೀ ಸಮಾಜಕ್ಕೆ ಮಾದರಿ ಮತ್ತು ಅನುಪಮ ವ್ಯಕ್ತಿತ್ವದ ಮಹಿಳಾಮಣಿಯಾಗಿದ್ದವರು ನಮ್ಮ ವನಿತಮ್ಮನವರು.

ವನಿತಮ್ಮನವರು ನಮ್ಮನಗಲಿ ವರ್ಷ ಎರಡು ಉರುಳಿರಬಹುದು. ಆದ್ರೆ ಅವರ ಜೀವನ ಸನ್ನಡತೆ, ಆದರ್ಶ ನಡವಳಿಕೆ ನಮಗೆಲ್ಲರಿಗೂ ದಿವ್ಯ ಪ್ರೇರಣೆ. ಮಗದೊಮ್ಮೆ ಜನ್ಮವೆತ್ತಿ ಬನ್ನಿ ಅಮ್ಮ ಎಂಬ ಪ್ರಾರ್ಥನೆಯೊಂದಿಗೆ.

ನಿಮ್ಮ ಮಗನಂತಿರುವ

ಸಂದೇಶ್.ಎಸ್.ಜೈನ್
 

Wednesday, January 16, 2019

ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಜ:18 ರಂದು ದಾಂಡೇಲಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ
ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವದ ಬಗ್ಗೆ ನಗರ ಸಭೆಯ ಅಧಿಕಾರಿಯೊಬ್ಬರು ಶಿರಸಿಯಲ್ಲಿರುವ ಮುದ್ದಿನ ಮಡದಿಗೆ ಪೋನು ಮಾಡಿ ಮಾತಾಡಿದ್ದು, ಹೀಗೆ

ಅಧಿಕಾರಿ : ಹಲೋ ನಾನು ಕಣೇ, ಚೆನ್ನಾಗಿದ್ದೀಯಾ, 

ಅಧಿಕಾರಿ ಮಡದಿ : ಹಾಂ: ಹೇಳ್ರಿ, ಚೆನ್ನಾಗಿದ್ದೇನ್ರಿ, ನೀವು

ಅಧಿಕಾರಿ : ಪರ್ವಾಗಿಲ್ಲ ಕಣೇ

ಅಧಿಕಾರಿ ಮಡದಿ: ಏನು ಮುಂಜಾನೆ ಮುಂಜಾನೆ ಕಾಲ್ ಹಚ್ಚಿರಿ.

ಅಧಿಕಾರಿ : ಹಂಗೇನಿಲ್ಲ. ಇದೇ ತಿಂಗಳು 18 ರಂದು ಅಂದ್ರೆ ಶುಕ್ರವಾರ ಸಂಜೆ 6 ಗಂಟೆಗೆ ನಮ್ಮ ಮೂಡಬಿದ್ರೆಯ ಆಳ್ವಾಸ್ ನವರ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪೇಪರ್ ಮಿಲ್ಲಿನ ಡಿಲಕ್ಸ್ ಮೈದಾನದಲ್ಲಿ ಭರ್ಜರಿಯಾಗಿ ನಡೆಯಲಿದೆ.  ಅದನ್ನು ಹೇಳೋಣ ಅಂತಾ ಕಾಲ್ ಮಾಡಿದೆ.

ಅಧಿಕಾರಿ ಮಡದಿ: ಓ, ಹೌದಾ, ಶಿರಸಿಯಲ್ಲಿಯೂ ಇದೆಯಂತೆ ಕಣ್ರೀ.

ಅಧಿಕಾರಿ: ಹೌದೌದು, ಶಿರಸಿಯಲ್ಲಿದೆ. ನೀನು ಮತ್ತು ಮಕ್ಕಳು ಅಲ್ಲಿ ಹೋಗಿ ಬನ್ನಿ.

ಅಧಿಕಾರಿ ಮಡದಿ: ಅಲ್ಲಿನೂ ಹೋಗ್ತಿವಿ. ಮತ್ತೇ ನಿಮ್ಮ ದಾಂಡೇಲಿಗೂ ಬರುತ್ತಿದ್ದೇವೆ.

ಅಧಿಕಾರಿ: ಶಿರಸಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನೋಡ್ತಿಯಲ್ಲ. ಮತ್ಯಾಕೆ ಸುಮ್ನೆ ಖರ್ಚು ಮಾಡ್ಕೊಂಡು ದಾಂಡೇಲಿಗೆ ಬರ್ತಿ.

ಅಧಿಕಾರಿ ಮಡದಿ : ಅದು ಹಂಗಿಲ್ರಿ, ನಮ್ಮ ಆಳ್ವಾಸ್ ನವರ ಕಾರ್ಯಕ್ರಮ ನೂರು ಸಲ ನೋಡಿದ್ರೂ ಬೋರಾಂಗಿಲ್ಲರಿ, ಮತ್ತೇ ಮತ್ತೇ ನೋಡ್ಬೇಕುಂತಾ ಅನಿಸ್ತದೆ. ಮಸ್ತ್ ಮಸ್ತ್ ಕಾರ್ಯಕ್ರಮ ಕೊಡುತ್ತಾರೆರಿ. ಅದಕ್ಕೆ ನಾವು ಇಲ್ಲಿನೂ ನೋಡ್ತಿವಿ. ಮತ್ತೇ ದಾಂಡೇಲಿಗುನೂ ಬರ್ತೀವಿ. 

ಅಧಿಕಾರಿ: ಈ ಹೆಣ್ಮಕ್ಕಲೆ ಹಿಂಗೆ ನೋಡು, ಒಂದು ಕಾರ್ಯಕ್ರಮವನ್ನು ನೂರು ಸಲ ನೋಡಿದ್ರೂನೂ ಮತ್ತೇ ಮತ್ತೇ ನೋಡ್ಬೇಕುಂತಾ ಹಟ ಹಿಡಿಯತ್ತಾರೆ ಅಲ್ವೆ,

ಅಧಿಕಾರಿ ಮಡದಿ : ನಿಮ್ಗೇನು ನೋವು,, ನಾವು ಅಲ್ಲಿ ಬರುವುದು ನಿಮಗೆ ಇಷ್ಟವಿಲ್ವಾ. 

ಅಧಿಕಾರಿ : ಇಲ್ಲೆ ಕಣೇ, ನೀನಂದ್ರೆ ನನಗೆ ಪಂಚಪ್ರಾಣ, ನೀನೆ ನನ್ನ ಪಾಲಿನ ದೇವತೆ ಅಂದ್ಮೇಲೆ ಇನ್ನೇನು ಹೇಳ್ಬೇಕು. ಸರಿ ಹಾಗಾದ್ರೆ ಬಾ, ಇಲ್ಲಿ ಚಳಿ ಸ್ವಲ್ಪ ಬಹಳ ಇದೆ. ಹಾಗಾಗಿ ಮಕ್ಕಳಿಗೆ ಶೆಟರ್ ಗಿಟರ್ ಹಾಕೊಂಡು ಕರ್ಕೊಂಡು ಬಾ.

ಅಧಿಕಾರಿ ಮಡದಿ: ನೀವು ಬಹಳ ಚಲೋ ಇದ್ದೀರಿ. ಪಾಪಾ ರೀ ನೀವು, ನೀವು ನನ್ನ ದೇವರು ಕಣ್ರೀ. ನೀವು ಹೇಳಿದಂಗೆ ಶಟರ್ ಹಾಕೊಂಡೆ ಬರ್ತೇವೆ. ಬರುವಾಗ ಏನಾದರೂ ಉಪ್ಪಿನ ಕಾಯಿ, ಚಟ್ನಿ ಪುಡಿ ತರ್ಲೇನೂ.

ಅಧಿಕಾರಿ : ಬೇಡ ಬೇಡ, ಮೊನ್ನೆ ಕೊಟ್ಟದ್ದೆ ಇನ್ನೂ ಮುಗಿದಿಲ್ಲ. ಆದರೆ ತೋಟದಿಂದ ಒಂದು ಬಾಳೆ ಗೊನೆ ತಾ.

ಅಧಿಕಾರಿ ಮಡದಿ: ಹಾಂ: ಓಕೆರಿ. ತರ್ತೇನೆ. ಅಲ್ಲಿ ಆಳ್ವಾಸ್ ಕಾರ್ಯಕ್ರಮ ತಯಾರಿ ಸ್ಟಾಟ್ ಆಗಿದ್ದೀಯಾ.

ಅಧಿಕಾರಿ : ಹೌದು ಕಣೇ, ಜೋರು ನಡೆಸಿಯಾರೆ. ಅಂದು ಬಹಳ ಕಾರ್ಯಕ್ರಮ ಇಟ್ಕೊಂಡಾರೆ. ಪ್ರಮುಖವಾಗಿ ಕೇರಳದ ಮೋಹಿನಿಯಾಟ್ಟಮ್-ಅಷ್ಟಲಕ್ಷ್ಮೀ ನೃತ್ಯ, ಬಡಗುತಿಟ್ಟು ಯಕ್ಷಗಾನ-ದಾಸ ದೀಪಾಂಜಲಿ, ಆಂದ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ ನವದುರ್ಗೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್ ಚಲಮ್, ಕಥಕ್ ನೃತ್ಯ-ನವರಂಗ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕುಯಕ್ಷ ಪ್ರಯೋಗ -ಅಗ್ರಪೂಜೆ ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾರೆ. ಮತ್ತೇ ಆಳ್ವಾಸ್ ಕಾಲೇಜಿನಲ್ಲಿ ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳ ಸ್ಟೂಡೆಂಟ್ಸ್ ಗಳಿರುವುದರಿಂದ ಅವರವರ ರಾಜ್ಯ, ದೇಶದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅವರೂರಿನ ಶೈಲಿಯಲ್ಲೆ ಆ ಊರಿನ ಸ್ಟೂಡೆಂಟ್ಸ್ ಗಳಿಂದ ಮಾಡಿಸುತ್ತಿದ್ದಾರೆ. 

ಅಧಿಕಾರಿ ಮಡದಿ: ಅದಕ್ಕೆರೀ ಹೇಲೋದು, ಆಳ್ವಾಸ್ ನವರ ಕಾರ್ಯಕ್ರಮ ಎಷ್ಟು ಸಲ ನೋಡಿದ್ರೂ ಹೊಟ್ಟೆ ತುಂಬುತ್ತೆ, ಮನಸ್ಸಿಗೆ ಅತ್ಯಂತ ಹೆಚ್ಚು ಖುಷಿ ಕೊಡುತ್ತೆ ಅಂತಾ.

ಅಧಿಕಾರಿ : ಅದು ಖರೇ ಮಾತು ಕಣೇ. ಇನ್ನು ಅಂದು ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುವ ಮುನ್ನ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ: ಎಂ.ಮೋಹನ ಆಳ್ವಾ ಅವರು ಹತ್ತನೆ ತರಗತಿ ವಿದ್ಯಾರ್ಥಿಗಳು, ಪಾಲಕರು, ಮಾದ್ಯಮ ಮಿತ್ರರು ಹಾಗೂ ಆಯ್ಕ ನಾಗರೀಕರ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ನಾವು ನಮ್ಮ ಮಕ್ಕಳನ್ನು ಕರ್ಕೊಂಡು ಹೋಗೋಣ. ನಮ್ಮ ಮಗ ಪ್ರತೀಕ್ 10 ನೇ ತರಗತಿ ಸ್ಟೂಡೆಂಟ್ ಅಲ್ಲ. ಅವನ ಪ್ಯೂಚರ್ ಬಗ್ಗೆ ಆಳ್ವಾಸ್ ಅವರ ಸಂವಾದದಲ್ಲಿ ಭಾಗವಹಿಸೋಣ.

ಅಧಿಕಾರಿ ಮಡದಿ : ಓಕೆ ರೀ. ನಿಮ್ಗೆ ಮಗನ ಮೇಲೆ ಎಷ್ಟು ಕಾಳಜಿ ಅಲ್ಲ ಪಾಪಾ, ನಿಮ್ಮನ್ನು ಪಡೆದ ನಾನು ಧನ್ಯ ಕಣ್ರೀ.

ಅಧಿಕಾರಿ : ಮಕ್ಕಳೆ ನಮ್ಮ ಆಸ್ತಿಯಲ್ಲ. ಅವರ ಭವಿಷ್ಯ ರೂಪಿಸುವ ಕೆಲಸವನ್ನು ಹೆತ್ತವರಾಗಿ ಮಾಡದಿದ್ರೆ ಹೇಂಗೆ.

ಅಧಿಕಾರಿ ಮಡದಿ: ಅದು ಸತ್ಯಾರೀ.

ಅಧಿಕಾರಿ : ಓಕೆ ಪೋನ್ ಇಡ್ಲಿ. ಕಮೀಶನರ್ ಬೇಗ ಬರ್ಲಿಕ್ಕೆ ಹೇಳ್ಯಾರೆ, ನಾನು ಹೋಗ್ಬೇಕು. ಸಂಜೆ ಕಾಲ್ ಮಾಡ್ತೇನೆ. ಓಕೆ.

ಅಧಿಕಾರಿ ಮಡದಿ : ಓಕೆ ಡಾರ್ಲಿಂಗ್. ಬಾಯ್, ಟೇಕ್ ಕ್ಯಾರ್.

ಅಧಿಕಾರಿ : ಓಕೆ ಬಾಯ್, ಬಾಯ್. 

ನೋಡಿದ್ರಿಲ್ಲಾ ನಗರ ಸಭೆಯ ಅಧಿಕಾರಿ ಮತ್ತು ಅವರ ಮಡದಿಯ ನಡುವಿನ ಸಂಭಾಷಣೆ. ಆಳ್ವಾಸ್ ಗೆ ಆಳ್ವಾಸ್ ಕಾರ್ಯಕ್ರಮವೆ ಸಾಟಿ.

ಮಾದರಿ ಮತ್ತು ಸ್ಮರಣೀಯ ಕಾರ್ಯಕ್ರಮ ಇದಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾಕುಸುಮಗಳಿಗೆ ಪ್ರೋತ್ಸಾಹದ ಆಶೀರ್ವಾದವನ್ನು ನೀಡಬೇಕಾಗಿ ವಿನಂತಿ.

ನಿಮ್ಮವ

ಸಂದೇಶ್.ಎಸ್.ಜೈನ್

 


ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ
ಇವರ ಆಶ್ರಯದಲ್ಲಿ
ಉಚಿತ ಯಕ್ಷಗಾನ ಪ್ರದರ್ಶನ
ಕಲಾಧರ ಯಕ್ಷರಂಗ ಬಳಗ(ರಿ.) ಜಲವಳ್ಳಿ, ಹೊನ್ನಾವರ ತಾಲೂಕು.
ಇವರಿಂದ
 "ಕಾರ್ತಿವೀರ & ಕೃಷ್ಣಾರ್ಜುನ ಕಾಳಗ"
 ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ

ದಿನಾಂಕ: 20.01.2019, ಸಮಯ: ಸಂಜೆ 6.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ
ಸ್ಥಳ: ಹಳೆ ನಗರ ಸಭಾ ಮೈದಾನ, ದಾಂಡೇಲಿ.            
 
ಸ್ಮರಣೀಯ ಯಕ್ಷಗಾನದ ಈ ಪ್ರದರ್ಶನದಲ್ಲಿ ಕಲಾಸೇವೆಯನ್ನು ನೀಡಲಿರುವ ಕಲಾವಿದರುಗಳು:
ಭಾಗವತರಾಗಿ: ಶ್ರೀ. ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ.ಪ್ರಸನ್ನ ಭಟ್ ಬಾಳ್ಕಲ್, ಶ್ರೀ. ಪಲ್ಲವ ಗಾಣಿಗ ಹೆರಂಜಾಲು
 
ಮದ್ದಳೆ: ಶ್ರೀ.ಎನ್.ಜಿ.ಹೆಗಡೆ ಯಲ್ಲಾಪುರ, ಶ್ರೀ. ವೆಂಕಟ್ರಮಣ ಹೆಗಡೆ ನಿಟ್ಟೂರು,
ಚೆಂಡೆ; ಶ್ರೀ.ಗಣೇಶ ಗಾಂವಕರ ಹೆಳುವಳ್ಳಿ, ಶ್ರೀ.ರಾಮ ಭಂಡಾರಿ
 
ಸ್ತ್ರೀ ವೇಶದಾರಿಗಳಾಗಿ ಹೊಸಂಗಡಿ ಶ್ರೀ.ರಾಜೀವ ಶೇಟ್ಟಿ, ನಿಲ್ಕೊಡ ಶ್ರೀ.ಶಂಕರ ಹೆಗಡೆ, ಶ್ರೀ.ನಾಗರಾಜ ಭಟ್,
 
ಹಾಸ್ಯ ಕಲಾವಿದರುಗಳಾಗಿ ಹಳ್ಳಾಡಿ ಶ್ರೀ.ಜಯರಾಮ ಶೆಟ್ಟಿ, ಶ್ರೀ.ಶ್ರೀಧರ ಭಟ್ ಕಾಸರಕೋಡ ಅವರುಗಳು ಭಾಗವಹಿಸಲಿದ್ದಾರೆ.
 
ಪ್ರಮುಖ ಕಲಾವಿದರುಗಳಾಗಿ ಬಳ್ಕೂರು ಶ್ರೀ. ಕೃಷ್ಣಯಾಜಿ, ಉಪ್ಪುಂದ ಶ್ರೀ ನಾಗೇಂದ್ರ ರಾವ್, ಜಲವಳ್ಳಿ ಶ್ರೀ ವಿದ್ಯಾದರ ರಾವ್, ಶ್ರೀ.ಕಾರ್ತಿಕ ಚಿಟ್ಟಾಣಿ, ಶ್ರೀ.ವಿನಯ್ ಭಟ್ ಬೇರೋಳ್ಳಿ, ಶ್ರೀ.ಆನಂದ ಭಟ್, ಶ್ರೀ.ಮಹಾಬಲೇಶ್ವರ ಗೌಡ, ಶ್ರೀ.ನಿರಂಜನ ಜಾಗನಳ್ಳಿ, ಶ್ರೀ.ಗಣಪತಿ ಬೈಲುಗದ್ದೆ, ಶ್ರೀ.ಬಾಸ್ಕರ ಕುಮುಟಾ ಮತ್ತು ಶ್ರೀ.ಪರಿಶುದ್ದ ಆಚಾರ್ಯ ಅವರುಗಳು ಗೆಜ್ಜೆ ಕಟ್ಟಲಿದ್ದಾರೆ.
 
 
ಇವರ ಜೊತೆ ಜೊತೆಯಲ್ಲಿ ದಾಂಡೇಲಿಯ ಹೆಮ್ಮೆಯ ಕಲಾವಿದ ಹಾಗೂ ಸಂತೋಷ್ ಹೊಟೆಲ್ ಮಾಲಕರಾದ ಶ್ರೀ.ವಿಷ್ಣುಮೂರ್ತಿ ರಾವ್ ಅವರ ಕಂಚಿನ ಕಂಠದ ಭಾಗವತಿಗೆ ಹಾಗೂ ಜೊಯಿಡಾ ಮಣ್ಣಿನ ಮಗ ಶ್ರೀ.ಸುದರ್ಶನ ಹೆಗಡೆಯವರು ವೇಶದಾರಿಯಾಗಿ ಗಮನ ಸೆಳೆಯಲಿದ್ದಾರೆ.
 
ನೀವು ಬನ್ನಿ, ನಿಮ್ಮವರನ್ನು ಕರೆ ತನ್ನಿ.
ಕರಾವಳಿಯ ಗಂಡು ಕಲೆಯನ್ನು ಬೆಳೆಸೋಣ, ಉಳಿಸೋಣ.
ಉಚಿತ ಪ್ರದರ್ಶನ
              
ಹಾರ್ದಿಕ ಸ್ವಾಗತ ಸುಸ್ವಾಗತ ಬಯಸುವ
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ
ಸಂಪರ್ಕಕ್ಕಾಗಿ : ಮೊ: 9845848498,  9620595555
ಯಕ್ಷಗಾನಂ ಗೆಲ್ಗೆ

 

ವಿಶ್ವವೆ ಕೊಂಡಾಡುವ ಆಳ್ವಾಸ್ ಸಾಂಸ್ಕೃತಿಕ ವೈಭವ ನಮ್ಮ ದಾಂಡೇಲಿಯಲ್ಲಿ 
ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಜ:18 ರಂದು ದಾಂಡೇಲಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ
ದಾಂಡೇಲಿಯಲ್ಲಿ ಮಗದೊಮ್ಮೆ ಮೇಳೈಸಲಿದೆ ಆಳ್ವಾಸ್ ನುಡಿಸಿರಿ
 
ದಾಂಡೇಲಿ : ಕಳೆದ ಮೂರು ವರ್ಷಗಳ ಹಿಂದೆ ದಾಂಡೇಲಿಯಲ್ಲಿ ಮೇಳೈಸಿದ್ದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಸಾಂಸ್ಕೃತಿಕ ವೈಭವ ಅಂದರೆ ಆಳ್ವಾಸ್ ನುಡಿಸಿರಿ ಕಾರ್ಯಕ್ರಮವು ಹಳಿಯಾಳದ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಇದೇ ಜನವರಿ ತಿಂಗಳ 18 ರಂದು ಸಂಜೆ 6 ಗಂಟೆಗೆ ಸರಿಯಾಗಿ ನಗರದ ಕಾಗದ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗಲಿದೆ ಎಂದು ಆಳ್ವಾಸ್ ನುಡಿಸಿರಿ ಘಟಕದ ಸಮನ್ವಯಾಧಿಕಾರಿ ನಾಗರಾಜ ಶೆಟ್ಟಿಯವರು ಹೇಳಿದರು.
 

ಅವರು ಬುಧವಾರ ನಗರದ ಸಂತೋಷ್ ಹೊಟೆಲ್ ಸಭಾಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಆಳ್ವಾಸ್ ಶಿಕ್ಷಣ ಸಂಸ್ಥೆ ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳ ಒಟ್ಟು 26 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದ ಒಂದು ವಿದ್ಯಾ ಸಂಸ್ಥೆ. ಸಂಸ್ಥೆಯ ಅಧ್ಯಕ್ಷರಾದ ಡಾ: ಎಂ. ಮೋಹನ ಆಳ್ವಾ ಅವರ ಚಿಂತನೆಯ ಫಲವಾಗಿ ಹುಟ್ಟಿಕೊಂಡ ವಿಶಿಷ್ಟ ಸಾಂಸ್ಕೃತಿಕ ವೇದಿಕೆಯೆ ಆಳ್ವಾಸ್ ನುಡಿಸಿರಿ ಘಟಕ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯ, ಹೊರ ರಾಜ್ಯ ಹಾಗೂ ದೇಶ-ವಿದೇಶಗಳ ವಿದ್ಯಾರ್ಥಿಗಳಿರುವುದರಿಂದ ಅವರವರ ಊರಿನ, ಅವರವರ ದೇಶದ, ರಾಜ್ಯದ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಜನಪದ ಪ್ರಕಾರಗಳನ್ನು ಸಂರಕ್ಷಿಸಿ ಬೆಳೆಸಬೇಕೆಂಬ ಮಹೋನ್ನತ ಉದ್ದೇಶದಿಂದ ಆಳ್ವಾಸ್ ನುಡಿಸಿರಿ ಘಟಕದ ಉದಯವಾಗಿದೆ ಎಂದು ನಾಗರಾಜ ಶೆಟ್ಟಿ ವಿವರಿಸಿದರು.
 
ಒಟ್ಟು 350 ವಿದ್ಯಾರ್ಥಿಗಳನ್ನೊಳಗೊಂಡ ತಂಡ ದಾಂಡೇಲಿಗಾಗಮಿಸುತ್ತಿದ್ದು, 80*40 ವಿಸ್ತೀರ್ಣದ ಬೃಹತ್ ರಂಗ ಸಜ್ಜಿಕೆಯಲ್ಲಿ ಮನಮೋಹಕ ಸಾಂಸ್ಕೃತಿಕ ವೈಭವವನ್ನು ಉಣ ಬಡಿಸಲಿದ್ದೇವೆ. ಪ್ರಮುಖವಾಗಿ ಕೇರಳದ ಮೋಹಿನಿಯಾಟ್ಟಮ್-ಅಷ್ಟಲಕ್ಷ್ಮೀ ನೃತ್ಯ, ಬಡಗುತಿಟ್ಟು ಯಕ್ಷಗಾನ-ದಾಸ ದೀಪಾಂಜಲಿ, ಆಂದ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ ನವದುರ್ಗೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್ ಚಲಮ್, ಕಥಕ್ ನೃತ್ಯ-ನವರಂಗ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕುಯಕ್ಷ ಪ್ರಯೋಗ -ಅಗ್ರಪೂಜೆ ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.


















 
 ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುವ ಮುನ್ನ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ: ಎಂ.ಮೋಹನ ಆಳ್ವಾ ಅವರು ಹತ್ತನೆ ತರಗತಿ ವಿದ್ಯಾರ್ಥಿಗಳು, ಪಾಲಕರು, ಮಾದ್ಯಮ ಮಿತ್ರರು ಹಾಗೂ ಆಯ್ಕ ನಾಗರೀಕರ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಲಿದ್ದಾರೆ.
 
ಸಾರ್ವಜನಿಕರಿಗೆ, ಕಲಾಭಿಮಾನಿಗಳಿಗೆ ಉಚಿತ ಪ್ರವೇಶವಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ನಮ್ಮ ತಂಡಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ, ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಾಗರಾಜ ಶೆಟ್ಟಿ ವಿನಂತಿಸಿದ್ದಾರೆ.
 
ಈ ಸಂದರ್ಭದಲ್ಲಿ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟಿನ ಅಧಿಕಾರಿಗಳಾದ ವಿಕ್ರಂ ಲೋಕಾಂಡೆ, ಗಣೇಶ ಭಟ್ ಉಪಸ್ಥಿತರಿದ್ದರು.
 
ಮಾದರಿ ಮತ್ತು ಸ್ಮರಣೀಯ ಕಾರ್ಯಕ್ರಮ ಇದಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾಕುಸುಮಗಳಿಗೆ ಪ್ರೋತ್ಸಾಹದ ಆಶೀರ್ವಾದವನ್ನು ನೀಡಬೇಕಾಗಿ ವಿನಂತಿ.

ನಿಮ್ಮವ

ಸಂದೇಶ್.ಎಸ್.ಜೈನ್

 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...