ದಯವಿಟ್ಟು ಓದಿ,
ಒಮ್ಮೆ ವಿಪರೀತ ನೋವು, ಆನಂತರ ಮತ್ತೆ ಸಹಜ ಸ್ಥಿತಿಯತ್ತ
ಇದು ನಮ್ಮ ಗೌರಿಯ ಆರೋಗ್ಯದಲ್ಲಾಗುವ ಏರೀಳಿತ
ಬದುಕಿಸ್ತೀವೆ ಎನ್ನುವ ಬಲವಾದ ವಿಶ್ವಾಸಕೊಟ್ಟ ಜೀವದಾತೆ ವೈದ್ಯೆ
ತಾಯಿಯಂತೆ ಆರೋಗ್ಯಸೇವೆ ನೀಡುತ್ತಿರುವ ವೈದ್ಯೆ ಡಾ: ಅಭಿಲಾಷ ಮೇಡಂ
ಇದು ನಮ್ಮ ಗೌರಿಯ ಆರೋಗ್ಯದಲ್ಲಾಗುವ ಏರೀಳಿತ
ಬದುಕಿಸ್ತೀವೆ ಎನ್ನುವ ಬಲವಾದ ವಿಶ್ವಾಸಕೊಟ್ಟ ಜೀವದಾತೆ ವೈದ್ಯೆ
ತಾಯಿಯಂತೆ ಆರೋಗ್ಯಸೇವೆ ನೀಡುತ್ತಿರುವ ವೈದ್ಯೆ ಡಾ: ಅಭಿಲಾಷ ಮೇಡಂ
ಹನ್ನೊಂದರ ಹರೆಯದ ಬಡಪಾಯಿ ಕೂಸು ಗೌರಿ. ಗೌರಿ ಈಗ ದಾಂಡೇಲಿಗರ ಮನೆ ಮಗಳಾಗಿದ್ದಾಳೆ. ಮನೆ ಮಗಳ ಪ್ರೀತಿ ಕೊಟ್ಟ ದಾಂಡೇಲಿಯ ಜನತೆಗೆ ಹಾಗೂ ಪ್ರತ್ಯಕ್ಷ, ಪರೋಕ್ಷ ಸಹಕಾರ ನೀಡುತ್ತಿರುವ ಹೃದಯವಂತ ಬಂಧುಗಳಿಗೆ ಕೋಟಿ ಕೋಟಿ ನಮನಗಳು.
ಬಡಪಾಯಿ ಮನೆಯಲ್ಲಿ ಜನ್ಮವೆತ್ತ ನಮ್ಮ ಗೌರಿಯ ಚಿಕಿತ್ಸೆಗೆ ತಾವೆಲ್ಲರೂ ಸ್ಪಂದಿಸದೇ ಇರುತ್ತಿದ್ದರೇ, ಇಷೊತ್ತಿಗಾಗುವಾಗ್ಲೆ ಸ್ಮಶಾನ ಎಂಬ ಅಂತಿಮ ಮನೆಗೆ ಶಾಶ್ವತವಾಗಿ ಹೋಗಿ ಬಿಡುತ್ತಿದ್ದಳು. ಸತ್ಯ ಯಾವಾಗ್ಲೂ ಕಹಿ ಇರುತ್ತೆ ಬಂಧುಗಳೆ. ಆಕೆಯ ಮನೆಯವರಿಗಿಂತೂ ಗೌರಿ ಮರಳಿ ಜೀವ ಪಡೆಯುತ್ತಾಳೆಂಬ ಯಾವ ವಿಶ್ವಾಸವು ಇರಲಿಲ್ಲ. ಆ ವಿಶ್ವಾಸವನ್ನು ಕೊಟ್ಟವರು ಆರ್ಥಿಕ ಸಹಾಯ ನೀಡಿದ ಹೃದಯವಂತರು ಮತ್ತು ತಾಯಿಯಂತೆ ಆರೋಗ್ಯಸೇವೆ ನೀಡುತ್ತಿರುವ ಡಾ: ಅಭಿಲಾಷ ಮೇಡಂ ಅವರು. ನಿಮ್ಮ ಈ ಜೀವಸೇವೆಗೆ ಹೇಗೆ ಕೃತಜ್ಞತೆ ಸಲ್ಲಿಸಿದರೂ ಸಾಲದು.
ಗೌರಿ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೂ ಆಗೊಮ್ಮೆ, ಈಗೊಮ್ಮೆ ಮತ್ತೆ ಕುಗ್ಗುತ್ತಿದ್ದಾಳೆ. ನಿನ್ನೆ ಆಕೆಯ ಕಾಲಿನ ಚರ್ಮ ಒಡೆದು ಮಲಗಳಾಗದ ಸ್ಥಿತಿಯಲ್ಲಿ ರಾತ್ರಿ ಕಳೆದಿದ್ದಾಳೆ. ಆದರೂ ನಮ್ಮ ಗೌರಿಯ ಜೊತೆ ದೇವರಿದ್ದಾನೆ. ವೈದ್ಯರಿಗೆ ಸವಾಲಿನ ಪ್ರಶ್ನೆಯಾಗಿದೆ. ನಮ್ಮ ಗೌರಿಯನ್ನು ಆರೋಗ್ಯವಂತ ಸುಭದ್ರ ಮಗುವನ್ನಾಗಿ ದಾಂಡೇಲಿಗೆ ಕಳುಹಿಸಿಕೊಡುವ ಶಪಥವನ್ನು ಡಾ: ಅಭಿಲಾಷ ಮೇಡಂ ಅವರು ಮಾಡಿದ್ದಾರೆ.
ಸ್ನೇಹಿತರೇ, ಗೌರಿಯ ಮೇಲೆ ವಿಶೇಷವಾದ ಅಭಿಮಾನವಿಟ್ಟು, ಬಹಳಷ್ಟು ಜನ ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಗೆ ಅವಳನ್ನು ನೋಡಲೆಂದು ತಂಡ ತಂಡವಾಗಿ ಹೋಗುತ್ತಿದ್ದಾರೆ. ಇದು ತಪ್ಪಲ್ಲ. ಮಮ್ಮಲ ಮರುಗುವ ಇಂತಹ ಘಟನೆಗೊಳಗಾಗ ಮುದ್ದು ಕಂದಮ್ಮನನ್ನು ನೋಡಿ ಬರಬೇಕೆಂಬ ತವಕ ಎಲ್ಲರಿಗೂ ಇರುವುದು ಸಹಜ. ಆದ್ರೆ ಸ್ನೇಹಿತರೇ, ಎಲ್ಲರೂ ಅವಳನ್ನು ನೋಡಲು ಹೋಗುತ್ತಿರುವುದರಿಂದ ಅವಳ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರತೊಡಗಿದೆ. ವೈರಸ್ ಸೋಂಕು ಅವಳನ್ನು ಕಾಡಿಸಲು ಪ್ರಾರಂಭವಾಗಿದೆ. ಹಾಗಾಗಿ ಅವರ ಕುಟುಂಬಸ್ಥರಷ್ಟೆ ಅಲ್ಲಿ ಹೋಗಿ ಬರಲಿ, ನಿಮ್ಮ ಸಹಕಾರವಿರಲಿ. ನಾವು ಪ್ರತಿದಿನ ಆಕೆಯ ಆರೋಗ್ಯದ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತೇವೆ. ನಾವು ನೀವೆಲ್ಲರೂ ನಮ್ಮ ಗೌರಿಯನ್ನು ಬೆಳಗಾವಿಗೆ ಹೋಗಿ ನೋಡಿ ಬಂದರೆ ಆಕೆಗೆ ಲಾಭವಾಗುವುದಿಲ್ಲ. ಅದರಲ್ಲೂ ನಮ್ಮ ಸಮಯವೂ ಹಾಳಾಗುತ್ತೆ. ಜೊತೆಗೆ ಸಾರಿಗೆ ವೆಚ್ಚವು ವ್ಯಯವಾಗುತ್ತೆ.
ಅದರ ಬದಲು ಹೀಗೆ ಮಾಡಬಹುದಲ್ವೆ:
ನಮಗೆಲ್ಲರಿಗೂ ಗೌರಿ ಆರೋಗ್ಯವಂತಳಾಗಬೇಕೆಂಬುವುದೆ ದೊಡ್ಡ ಹಂಬಲ. ಹಾಗಾಗಿ ಆಕೆಯನ್ನು ನೋಡಲು ಹೋಗುವ ಬದಲಾಗಿ ಆಕೆಯನ್ನು ನೋಡಲು ಹೋಗಲು ವ್ಯಯಿಸಬೇಕಾದ ಸಾರಿಗೆ ವೆಚ್ಚವನ್ನು ಅವಳ ತಂದೆ ಅನಿಲ ನಾಯ್ಕ ಅವರ ಉಳಿತಾಯ ಖಾತೆಗೆ ಜಮಾ ಮಾಡಿದ್ದಲ್ಲಿ ಉತ್ತಮ ಫಲ ಕಾಣಲು ಸಾಧ್ಯವಿದೆ.
ಗೌರಿಗೆ ಧನ ಸಹಾಯ ಮಾಡಲಿಚ್ಚಿಸುವವರಲ್ಲಿ ವಿನಂತಿ:
ಗೌರಿಯ ಆರೋಗ್ಯ ಚಿಕಿತ್ಸೆಗಾಗಿ ಸಹಾಯ ಮಾಡಲಿಚ್ಚಿಸುವವರು ಹತ್ತು ರೂ ಆದರೂ ಪರ್ವಾಗಿಲ್ಲ, ನೂರು ಆದರೂ ಪರ್ವಾಗಿಲ್ಲ, ಸಾವಿರ ರೂ ಆದರೂ ಪರ್ವಾಗಿಲ್ಲ. ಆದರೆ ದಯವಿಟ್ಟು ಗೌರಿಯ ತಂದೆ ಅನಿಲ ನಾಯ್ಕ ಅವರ ಉಳಿತಾಯ ಖಾತೆಗೆ ಜಮಾ ಮಾಡಿದರೇ ಉತ್ತಮ ಎಂಬ ಅಭಿಪ್ರಾಯ ನನ್ನದು. ಸ್ವತ: ನಾನೇ ಡಬ್ಬ ತೆಕೊಂಡು ಕಲೆಕ್ಷನಿಗೆ ಬಂದ್ರೂನೂ ಹಣ ಕೊಡ್ಬೇಡಿ. ದಯವಿಟ್ಟು ಅವಳ ತಂದೆಯ ಉಳಿತಾಯ ಖಾತೆಗೆ ಜಮಾ ಮಾಡಿ ಎಂಬ ವಿನಮ್ರ ವಿನಂತಿ ನನ್ನದು. ಎಲ್ಲರು ಒಳ್ಳೆಯವರಿರಬಹುದು, ಆದ್ರೆ ನಾನು ಕೆಟ್ಟವನಾಗಿದ್ರೆ ಡಬ್ಬದಲ್ಲಿ ಕಲೆಕ್ಷನ್ ಮಾಡಿದ ಹಣ ನಾನೆ ತಿಂದು ಬಿಟ್ರೆ. ಹಾಗಾಗಿ ಉಳಿತಾಯ ಖಾತೆಗೆ ಹಾಕಿ ಎಂಬ ವಿನಮ್ರ ವಿನಂತಿ ನನ್ನದು.
ಹೇ ದೇವರೇ ನಮ್ಮ ಗೌರಿಯನ್ನು ಆರೋಗ್ಯವಂತಳನ್ನಾಗಿಸು, ಗೌರಿಗೆ ಬಂದ ಸ್ಥಿತಿ ಯಾರಿಗೂ ಬಾರದಿರಲಿ. ನಿಮ್ಮೆಲ್ಲರ ಅಕ್ಕರೆಯ ಪ್ರೀತಿ, ಮಮತೆ ನಮ್ಮ ಗೌರಿಗಿರಲಿ ಎಂಬ ವಿನಮ್ರ ಪ್ರಾರ್ಥನೆಯೊಂದಿಗೆ,
ಮುದ್ದು ಗೌರಿಯನ್ನು ಆರೋಗ್ಯವಂತ ಗೌರಿಯನ್ನಾಗಿಸುವ ಶಪಥ ಮಾಡೋಣ. ನಮ್ಮೂರಿನ ಕಂದಮ್ಮಳಿಗೆ ಜೀವದಾಸರೆ ನೀಡೋಣ ಬನ್ನಿ.
ಅನಿಲ ನಾಯ್ಕ,
ಉಳಿತಾಯ ಖಾತೆ ಸಂಖ್ಯೆ: 03072200154546
ಸಿಂಡಿಕೇಟ್ ಬ್ಯಾಂಕ್, ದಾಂಡೇಲಿ.
ಗೌರಿಯ ತಂದೆ ಅನಿಲ ನಾಯ್ಕ ಅವರ ಮೊಬೈಲ್ ನಂ: 9483579144, 9632613692
ಒಂದು ವೇಳೆ ಅನಿಲ ನಾಯ್ಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಲ್ಲಿ -9482521189, 9945394602 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment