ವಿ.ಆರ್.ಡಿ.ಎಂ ಟ್ರಸ್ಟ್ ಆಶ್ರಯದಲ್ಲಿ ಜ:18 ರಂದು ದಾಂಡೇಲಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ
ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವದ ಬಗ್ಗೆ ನಗರ ಸಭೆಯ ಅಧಿಕಾರಿಯೊಬ್ಬರು ಶಿರಸಿಯಲ್ಲಿರುವ ಮುದ್ದಿನ ಮಡದಿಗೆ ಪೋನು ಮಾಡಿ ಮಾತಾಡಿದ್ದು, ಹೀಗೆ
ಅಧಿಕಾರಿ : ಹಲೋ ನಾನು ಕಣೇ, ಚೆನ್ನಾಗಿದ್ದೀಯಾ,
ಅಧಿಕಾರಿ ಮಡದಿ : ಹಾಂ: ಹೇಳ್ರಿ, ಚೆನ್ನಾಗಿದ್ದೇನ್ರಿ, ನೀವು
ಅಧಿಕಾರಿ : ಪರ್ವಾಗಿಲ್ಲ ಕಣೇ
ಅಧಿಕಾರಿ ಮಡದಿ: ಏನು ಮುಂಜಾನೆ ಮುಂಜಾನೆ ಕಾಲ್ ಹಚ್ಚಿರಿ.
ಅಧಿಕಾರಿ : ಹಂಗೇನಿಲ್ಲ. ಇದೇ ತಿಂಗಳು 18 ರಂದು ಅಂದ್ರೆ ಶುಕ್ರವಾರ ಸಂಜೆ 6 ಗಂಟೆಗೆ ನಮ್ಮ ಮೂಡಬಿದ್ರೆಯ ಆಳ್ವಾಸ್ ನವರ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪೇಪರ್ ಮಿಲ್ಲಿನ ಡಿಲಕ್ಸ್ ಮೈದಾನದಲ್ಲಿ ಭರ್ಜರಿಯಾಗಿ ನಡೆಯಲಿದೆ. ಅದನ್ನು ಹೇಳೋಣ ಅಂತಾ ಕಾಲ್ ಮಾಡಿದೆ.
ಅಧಿಕಾರಿ ಮಡದಿ: ಓ, ಹೌದಾ, ಶಿರಸಿಯಲ್ಲಿಯೂ ಇದೆಯಂತೆ ಕಣ್ರೀ.
ಅಧಿಕಾರಿ: ಹೌದೌದು, ಶಿರಸಿಯಲ್ಲಿದೆ. ನೀನು ಮತ್ತು ಮಕ್ಕಳು ಅಲ್ಲಿ ಹೋಗಿ ಬನ್ನಿ.
ಅಧಿಕಾರಿ ಮಡದಿ: ಅಲ್ಲಿನೂ ಹೋಗ್ತಿವಿ. ಮತ್ತೇ ನಿಮ್ಮ ದಾಂಡೇಲಿಗೂ ಬರುತ್ತಿದ್ದೇವೆ.
ಅಧಿಕಾರಿ: ಶಿರಸಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನೋಡ್ತಿಯಲ್ಲ. ಮತ್ಯಾಕೆ ಸುಮ್ನೆ ಖರ್ಚು ಮಾಡ್ಕೊಂಡು ದಾಂಡೇಲಿಗೆ ಬರ್ತಿ.
ಅಧಿಕಾರಿ ಮಡದಿ : ಅದು ಹಂಗಿಲ್ರಿ, ನಮ್ಮ ಆಳ್ವಾಸ್ ನವರ ಕಾರ್ಯಕ್ರಮ ನೂರು ಸಲ ನೋಡಿದ್ರೂ ಬೋರಾಂಗಿಲ್ಲರಿ, ಮತ್ತೇ ಮತ್ತೇ ನೋಡ್ಬೇಕುಂತಾ ಅನಿಸ್ತದೆ. ಮಸ್ತ್ ಮಸ್ತ್ ಕಾರ್ಯಕ್ರಮ ಕೊಡುತ್ತಾರೆರಿ. ಅದಕ್ಕೆ ನಾವು ಇಲ್ಲಿನೂ ನೋಡ್ತಿವಿ. ಮತ್ತೇ ದಾಂಡೇಲಿಗುನೂ ಬರ್ತೀವಿ.
ಅಧಿಕಾರಿ: ಈ ಹೆಣ್ಮಕ್ಕಲೆ ಹಿಂಗೆ ನೋಡು, ಒಂದು ಕಾರ್ಯಕ್ರಮವನ್ನು ನೂರು ಸಲ ನೋಡಿದ್ರೂನೂ ಮತ್ತೇ ಮತ್ತೇ ನೋಡ್ಬೇಕುಂತಾ ಹಟ ಹಿಡಿಯತ್ತಾರೆ ಅಲ್ವೆ,
ಅಧಿಕಾರಿ ಮಡದಿ : ನಿಮ್ಗೇನು ನೋವು,, ನಾವು ಅಲ್ಲಿ ಬರುವುದು ನಿಮಗೆ ಇಷ್ಟವಿಲ್ವಾ.
ಅಧಿಕಾರಿ : ಇಲ್ಲೆ ಕಣೇ, ನೀನಂದ್ರೆ ನನಗೆ ಪಂಚಪ್ರಾಣ, ನೀನೆ ನನ್ನ ಪಾಲಿನ ದೇವತೆ ಅಂದ್ಮೇಲೆ ಇನ್ನೇನು ಹೇಳ್ಬೇಕು. ಸರಿ ಹಾಗಾದ್ರೆ ಬಾ, ಇಲ್ಲಿ ಚಳಿ ಸ್ವಲ್ಪ ಬಹಳ ಇದೆ. ಹಾಗಾಗಿ ಮಕ್ಕಳಿಗೆ ಶೆಟರ್ ಗಿಟರ್ ಹಾಕೊಂಡು ಕರ್ಕೊಂಡು ಬಾ.
ಅಧಿಕಾರಿ ಮಡದಿ: ನೀವು ಬಹಳ ಚಲೋ ಇದ್ದೀರಿ. ಪಾಪಾ ರೀ ನೀವು, ನೀವು ನನ್ನ ದೇವರು ಕಣ್ರೀ. ನೀವು ಹೇಳಿದಂಗೆ ಶಟರ್ ಹಾಕೊಂಡೆ ಬರ್ತೇವೆ. ಬರುವಾಗ ಏನಾದರೂ ಉಪ್ಪಿನ ಕಾಯಿ, ಚಟ್ನಿ ಪುಡಿ ತರ್ಲೇನೂ.
ಅಧಿಕಾರಿ : ಬೇಡ ಬೇಡ, ಮೊನ್ನೆ ಕೊಟ್ಟದ್ದೆ ಇನ್ನೂ ಮುಗಿದಿಲ್ಲ. ಆದರೆ ತೋಟದಿಂದ ಒಂದು ಬಾಳೆ ಗೊನೆ ತಾ.
ಅಧಿಕಾರಿ ಮಡದಿ: ಹಾಂ: ಓಕೆರಿ. ತರ್ತೇನೆ. ಅಲ್ಲಿ ಆಳ್ವಾಸ್ ಕಾರ್ಯಕ್ರಮ ತಯಾರಿ ಸ್ಟಾಟ್ ಆಗಿದ್ದೀಯಾ.
ಅಧಿಕಾರಿ : ಹೌದು ಕಣೇ, ಜೋರು ನಡೆಸಿಯಾರೆ. ಅಂದು ಬಹಳ ಕಾರ್ಯಕ್ರಮ ಇಟ್ಕೊಂಡಾರೆ. ಪ್ರಮುಖವಾಗಿ ಕೇರಳದ ಮೋಹಿನಿಯಾಟ್ಟಮ್-ಅಷ್ಟಲಕ್ಷ್ಮೀ ನೃತ್ಯ, ಬಡಗುತಿಟ್ಟು ಯಕ್ಷಗಾನ-ದಾಸ ದೀಪಾಂಜಲಿ, ಆಂದ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ ನವದುರ್ಗೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್ ಚಲಮ್, ಕಥಕ್ ನೃತ್ಯ-ನವರಂಗ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕುಯಕ್ಷ ಪ್ರಯೋಗ -ಅಗ್ರಪೂಜೆ ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾರೆ. ಮತ್ತೇ ಆಳ್ವಾಸ್ ಕಾಲೇಜಿನಲ್ಲಿ ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳ ಸ್ಟೂಡೆಂಟ್ಸ್ ಗಳಿರುವುದರಿಂದ ಅವರವರ ರಾಜ್ಯ, ದೇಶದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅವರೂರಿನ ಶೈಲಿಯಲ್ಲೆ ಆ ಊರಿನ ಸ್ಟೂಡೆಂಟ್ಸ್ ಗಳಿಂದ ಮಾಡಿಸುತ್ತಿದ್ದಾರೆ.
ಅಧಿಕಾರಿ ಮಡದಿ: ಅದಕ್ಕೆರೀ ಹೇಲೋದು, ಆಳ್ವಾಸ್ ನವರ ಕಾರ್ಯಕ್ರಮ ಎಷ್ಟು ಸಲ ನೋಡಿದ್ರೂ ಹೊಟ್ಟೆ ತುಂಬುತ್ತೆ, ಮನಸ್ಸಿಗೆ ಅತ್ಯಂತ ಹೆಚ್ಚು ಖುಷಿ ಕೊಡುತ್ತೆ ಅಂತಾ.
ಅಧಿಕಾರಿ : ಅದು ಖರೇ ಮಾತು ಕಣೇ. ಇನ್ನು ಅಂದು ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುವ ಮುನ್ನ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ: ಎಂ.ಮೋಹನ ಆಳ್ವಾ ಅವರು ಹತ್ತನೆ ತರಗತಿ ವಿದ್ಯಾರ್ಥಿಗಳು, ಪಾಲಕರು, ಮಾದ್ಯಮ ಮಿತ್ರರು ಹಾಗೂ ಆಯ್ಕ ನಾಗರೀಕರ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ನಾವು ನಮ್ಮ ಮಕ್ಕಳನ್ನು ಕರ್ಕೊಂಡು ಹೋಗೋಣ. ನಮ್ಮ ಮಗ ಪ್ರತೀಕ್ 10 ನೇ ತರಗತಿ ಸ್ಟೂಡೆಂಟ್ ಅಲ್ಲ. ಅವನ ಪ್ಯೂಚರ್ ಬಗ್ಗೆ ಆಳ್ವಾಸ್ ಅವರ ಸಂವಾದದಲ್ಲಿ ಭಾಗವಹಿಸೋಣ.
ಅಧಿಕಾರಿ ಮಡದಿ : ಓಕೆ ರೀ. ನಿಮ್ಗೆ ಮಗನ ಮೇಲೆ ಎಷ್ಟು ಕಾಳಜಿ ಅಲ್ಲ ಪಾಪಾ, ನಿಮ್ಮನ್ನು ಪಡೆದ ನಾನು ಧನ್ಯ ಕಣ್ರೀ.
ಅಧಿಕಾರಿ : ಮಕ್ಕಳೆ ನಮ್ಮ ಆಸ್ತಿಯಲ್ಲ. ಅವರ ಭವಿಷ್ಯ ರೂಪಿಸುವ ಕೆಲಸವನ್ನು ಹೆತ್ತವರಾಗಿ ಮಾಡದಿದ್ರೆ ಹೇಂಗೆ.
ಅಧಿಕಾರಿ ಮಡದಿ: ಅದು ಸತ್ಯಾರೀ.
ಅಧಿಕಾರಿ : ಓಕೆ ಪೋನ್ ಇಡ್ಲಿ. ಕಮೀಶನರ್ ಬೇಗ ಬರ್ಲಿಕ್ಕೆ ಹೇಳ್ಯಾರೆ, ನಾನು ಹೋಗ್ಬೇಕು. ಸಂಜೆ ಕಾಲ್ ಮಾಡ್ತೇನೆ. ಓಕೆ.
ಅಧಿಕಾರಿ ಮಡದಿ : ಓಕೆ ಡಾರ್ಲಿಂಗ್. ಬಾಯ್, ಟೇಕ್ ಕ್ಯಾರ್.
ಅಧಿಕಾರಿ : ಓಕೆ ಬಾಯ್, ಬಾಯ್.
ನೋಡಿದ್ರಿಲ್ಲಾ ನಗರ ಸಭೆಯ ಅಧಿಕಾರಿ ಮತ್ತು ಅವರ ಮಡದಿಯ ನಡುವಿನ ಸಂಭಾಷಣೆ. ಆಳ್ವಾಸ್ ಗೆ ಆಳ್ವಾಸ್ ಕಾರ್ಯಕ್ರಮವೆ ಸಾಟಿ.
ಮಾದರಿ ಮತ್ತು ಸ್ಮರಣೀಯ ಕಾರ್ಯಕ್ರಮ ಇದಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾಕುಸುಮಗಳಿಗೆ ಪ್ರೋತ್ಸಾಹದ ಆಶೀರ್ವಾದವನ್ನು ನೀಡಬೇಕಾಗಿ ವಿನಂತಿ.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment