ನನ್ನ ಜೀವನದ ಮಹೋನ್ನತ ಆಸ್ತಿ, ಜೀವ ಆಗಿರುವ ಮುದ್ದಿನ ಮಗ ಸುಯೋಗ್.ಎಸ್.ಜೈನ್ ಇವನಿಗೆ ಜನವರಿ:12 ಜನ್ಮದಿನದ ಸಂಭ್ರಮ. ನಿನ್ನೆ ಜೀವನದ ಎರಡನೇ ವರ್ಷ ದಾಟಿ ಮೂರನೆ ವರ್ಷಕ್ಕೆ ನವಿರಾದ ಹೆಜ್ಜೆಯನ್ನಿಟ್ಟಿದ್ದಾನೆ.
ಮಗನನ್ನು ಮುದ್ದಿನಿಂದ ಬೆಳೆಸುತ್ತಿರುವ ಮಡದಿ ಪದ್ಮಶ್ರೀಗೆ ಋಣಿಯಾಗಿದ್ದೇನೆ. ಅಪ್ಪ, ಅಮ್ಮ, ಅತ್ತೆ, ಮಾವನ ಆಶೀರ್ವಾದವು ಸುಯೋಗನಿಗಿದೆ. ಜನ್ಮದಿನದ ಸಡಗರದಲ್ಲಿದ್ದ ಸುಯೋಗನಿಗೆ ಶುಭಾಶೀರ್ವಾದ ನೀಡಿದ ಸರ್ವರಿಗೂ, ಸಾಮಾಜಿಕ ಜಾಲತಾಣದಲ್ಲಿ ಆಶೀರ್ವದಿಸಿ, ಶುಭ ಕೋರಿದ ಸರ್ವರಿಗೂ, ಸರಳವಾಗಿ ಆಚರಿಸಿಕೊಂಡ ಜನ್ಮದಿನದ ಸಂಭ್ರಮಕ್ಕೆ ಆಗಮಿಸಿ ನನ್ನ ಸುಯೋಗನಿಗೆ ಆಶೀರ್ವದಿಸಿದ ಸರ್ವರಿಗೂ ಅಭಿಮಾನದ ಕೃತಜ್ಞತೆಗಳು. ನಿಮ್ಮೆಲ್ಲರ ಅಕ್ಕರೆಯ ಆಶೀರ್ವಾದ ಸುಯೋಗನಿಗೆ ಸದಾ ಇರಲೆಂಬ ಪ್ರಾರ್ಥನೆ ನನ್ನದು.
ನನ್ನ ಪ್ರತಿಯೊಂದು ಕಾರ್ಯಕ್ರಮಗಳಿಗೂ ಪ್ರೇರಣಾದಾಯಿಯಾಗಿರುವ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ್ತ ಯುವಕ ಮಂಡಳದ ಸರ್ವ ಪದಾಧಿಕಾರಿಗಳಿಗೂ, ಹೃದಯದ ಅಣ್ಣಂದಿರರಾದ ವಿಷ್ಣುಮೂರ್ತಿ ರಾವ್, ನವೀನ್ ಕಾಮತ್, ಪ್ರೇಮಾನಂದ ಗವಸ ಹಾಗೂ ಮನದೊಳಗಿನ ತಮ್ಣಂದಿರಾದ ಅಮರ್ ಗುರವ, ಪ್ರಮೀತ್ ಜೈನ್ ಅವರಿಗೆ ಮನದುಂಬಿದ ಧನ್ಯವಾದಗಳು.
ಮತ್ತೋಮ್ಮೆ, ಮಗದೊಮ್ಮೆ ಆಶೀರ್ವದಿಸಿದ, ಶುಭ ಕೋರಿದ ಸರ್ವರಿಗೂ ಪ್ರೀತಿಯ ವಂದನೆಗಳು.
ನಿಮ್ಮವ
ಸಂದೇಶ್.ಎಸ್.ಜೈನ್





No comments:
Post a Comment