ಗೌರಿಯನ್ನು ಉಳಿಸಲು ಕೂಡಿಟ್ಟ ಚಿಲ್ಲರೆ ಹಣ ರೂ;5500/- ಹಣವನ್ನು ಸಹಾಯದ ರೂಪದಲ್ಲಿ ನೀಡಿದ ಸಹಪಾಠಿ
ತಾನೊಂದು ಅಂದ ಚೆಂದ ಶಟಲ್ ರಾಕೆಟ್ ಖರೀದಿಸಬೇಕೆಂದು 5 ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ರಕ್ತದ ಕ್ಯಾನ್ಸರಿನಿಂದ ಬಳಲುತ್ತಿರುವುದನ್ನು ತಿಳಿದು, ರಾಕೆಟ್ ಬೇಡ, ಎಂತದ್ದು ಬೇಡ, ಮೊದಲು ನಮ್ಮ ಗೌರಿ ಆರೋಗ್ಯವಂತಳಾಗಿ ಶಾಲೆಗೆ ಬರಲೆಂದು ಬಯಸಿ, ಚಿಲ್ಲರೆ ಹಣವನ್ನು ಕೂಡಿಟ್ಟಿದ್ದ ಡಬ್ಬವನ್ನು ತೆರೆದು, ಲೆಕ್ಕ ಮಾಡಿದಾಗ ಅದರಲ್ಲಿ ರೂ:5,500/- ಜಮಾ ಆಗಿತ್ತು. ಅದೇ ಹಣವನ್ನು ಸಹಪಾಠಿಯ ಆರೋಗ್ಯ ಚಿಕಿತ್ಸೆಗೆ ನೀಡಿದ ವಿದ್ಯಾರ್ಥಿಯ ಮಾನವೀಯ ಕಾರ್ಯಕ್ಕೆ ಶಿರಬಾಗದೇ ಏನು ಹೇಳಲಿ.
ಆ ಬಾಲಕ ಬೇರೆ ಯಾರು ಅಲ್ಲ. ನಮ್ಮ ದಾಂಡೇಲಿಯ ಕಾಮತ್ ರಿಪ್ರೇಶಮೆಂಟ್ ಮಾಲಕ ನವೀನ ಕಾಮತ್ ಅವರ ಮುದ್ದಿನ ಮಗ ನವನೀತ ಕಾಮತ್. ಅಂದ ಹಾಗೆ ನವನೀತ ಕಾಮತ್ ಜೆವಿಡಿಯ ಇ.ಎಂ.ಎಸ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿ. ಅತನ ಸಹಪಾಠಿ ಗೌರಿಯೆ ರಕ್ತದ ಕ್ಯಾನ್ಸರಿನಿಂದ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.
ಸಹಪಾಠಿಯ ಅನಾರೋಗ್ಯದ ಗಂಭೀರತೆಯನ್ನು ಅರಿತ ನವನೀತ ಅಮ್ಮನ ಬಳಿ, ಅಮ್ಮ ಕೂಡಿಟ್ಟ ಹಣವನ್ನು ಗೌರಿಗೆ ನೀಡೋಣ ಎಂದು ಸಂಕಲ್ಪಿಸಿದ್ದಾನೆ. ನಾಳೆ ಅಂದರೆ ದಿನಾಂಕ: 12.01.2019 ರಂದು ನವನೀತ ಕೂಡಿಟ್ಟ ಹಣ ಗೌರಿಯ ತಂದೆಯ ಉಳಿತಾಯ ಖಾತೆಗೆ ಜಮವಾಗಲಿದೆ.
ರಿಯಾಲಿ ಗ್ರೇಟ್ ನವನೀತ್. ನಿನ್ನ ಈ ಪುಣ್ಯದ ಕಾರ್ಯಕ್ಕೆ ತುಂಬು ಹೃದಯದಿಂದ ಕೈಮುಗಿಯುವೆ. ಮಕ್ಕಳು ದೇಶದ ಆಸ್ತಿ ಎನ್ನುವುದು ಇದಕ್ಕಲ್ಲವೆ.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment