Friday, January 11, 2019

ದಯವಿಟ್ಟು ಪೂರ್ತಿ ಓದಿ, ಶೇರ್ ಮಾಡಿ, ಪ್ಲೀಸ್ ಕೈ ಮುಗಿಯುವೆ

ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ (ರಿ.) ಹಳಿಯಾಳ
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ (ರಿ.) ವಿಸ್ತರಣಾ ಕೇಂದ್ರ ದಾಂಡೇಲಿ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಐ.ಎಂ.ಎ ಲೈಪ್ ಲೈನ್ ಬ್ಲಡ್ ಬ್ಯಾಂಕ್ ಶಿರಸಿ ಮತ್ತು ಸಾರ್ವಜನಿಕ ಆಸ್ಪತ್ರೆ ದಾಂಡೇಲಿ ಇವರ ಸಂಯುಕ್ತಾಶ್ರಯದಲ್ಲಿ 

ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಬೃಹತ್ ರಕ್ತದಾನ ಶಿಬಿರ
ಸ್ಥಳ: ಸಾರ್ವಜನಿಕ ಆಸ್ಪತ್ರೆ, ದಾಂಡೇಲಿ

ದಿನಾಂಕ: 12.01.2019, ಸಮಯ: ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ
ಸಹಕಾರ: ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ ಗಾಂಧಿನಗರ, ಶ್ರೀ.ದಾಂಡೇಲಪ್ಪಾ ವಾಹನ ಚಾಲಕರ & ಮಾಲಕರ ಸಂಘ ದಾಂಡೇಲಿ, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ, ಉ.ಕ ಜಿಲ್ಲೆ ಹಾಗೂ ವಿವಿಧ ಸಂಘಟನೆಗಳು ದಾಂಡೇಲಿ.

ಇನ್ನೊಬ್ಬರ ಜೀವ ಉಳಿಸುವ ಮಹೋನ್ನತ ದಾನಗಳಲ್ಲಿ ಒಂದಾದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ರಕ್ತದಾನ ಮಾಡಿ ಜೀವನ ಸಂತಸ ಪಡೆಯೋಣ ಬನ್ನಿ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಾಕೆ ಗೊತ್ತಾ?
ರಕ್ತದ ಕ್ಯಾನ್ಸರಿನಿಂದ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ದಾಂಡೇಲಿಯ 11 ರ ಹರೆಯದ ಬಾಲಕಿ ಗೌರಿ ಅನಿಲ ನಾಯ್ಕ ಈಕೆಗೆ ಪ್ರತಿದಿನ ರಕ್ತದ ಅವಶ್ಯಕತೆಯಿದ್ದು, ನಾವು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದೇಯಾದಲ್ಲಿ  ನಮ್ಮ ಗೌರಿಯ ಜೀವ ಉಳಿಸಲು ಬೇಕಾದ ರಕ್ತವನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಯ ಐ.ಎಂ.ಎ ಲೈಪ್ ಲೈನ್ ಬ್ಲಡ್ ಬ್ಯಾಂಕ್ ಶಿರಸಿ ಮತ್ತು ಸಾರ್ವಜನಿಕ ಆಸ್ಪತ್ರೆಯವರು ಪೊರೈಸಬೇಕೆಂದು ಅಂಗಲಾಚಿ ಮನವಿ ಮಾಡಬಹುದಾಗಿದೆ. ಮೊದಲು ರಕ್ತದಾನ ಮಾಡಲು ನಾವು ಮನಸ್ಸು ಮಾಡಬೇಕಾಗಿದೆ.

ನನಗಿಂದು ಸಂಜೆ 7 ಗಂಟೆಗೆ ಸುಮಾರಿಗೆ ಗೆಳೆಯರೊಬ್ಬರು ಮೊಬೈಲ್ ಕರೆ ಮಾಡಿ, ಗೌರಿಗೆ ರಕ್ತ ನೀಡುವುದಾದರೇ ಮಾತ್ರ ನಾಳೆ ನಡೆಯುವ ರಕ್ತದಾನ ಶಿಬಿರದಲ್ಲಿ ನಾವು ಭಾಗವಹಿಸಿ ರಕ್ತದಾನ ನೀಡುತ್ತೇವೆ ಇಲ್ಲಂದ್ರೆ ನೀಡುವುದಿಲ್ಲ ನೋಡಿ ಅಂದರು. ಸ್ವಾಮಿ ಇವತ್ತು ನಮ್ಮ ಗೌರಿಗೆ ಹೀಗಾಗಿದೆ, ನಮ್ಮ ಗೌರಿಗೆ ದಾಂಡೇಲಿ ಜನತೆ ಮಾತ್ರವಲ್ಲದೇ 450 ಕಿ.ಮೀ ದೂರದ ಜನರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ವ್ಯಕ್ತಿ ಯಾರೇ ಇರಲಿ, ನಮ್ಮಿಂದಾಗಬಹುದಾದ ಸಹಾಯ ಮಾಡುವುದು ನಮ್ಮ ಧರ್ಮವಲ್ಲವೆ. ಗೌರಿಗಾದ ನೋವು ಇನ್ನೊಂದು ಮಗುವಿಗೆ ಆಗದಿರಲೆಂಬ ಪ್ರಾರ್ಥನೆ ನಮ್ಮದಿರಲಿ.

ಆದರೂ ನಾಳೆ ನಡೆಯುವ ರಕ್ತದಾನ ಶಿಬಿರದಲ್ಲಿ ನಾವು ನೀವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಲ್ಲಿ ನಮ್ಮ ಗೌರಿಗೆ ರಕ್ತವನ್ನು ಅಗತ್ಯಕ್ಕೆ ಅನುಗುಣವಾಗಿ ಪೊರೈಸಬೇಕೆಂದು ಗೌರವಪೂರ್ವಕವಾಗಿ ಮನವಿ ಮಾಡಬಹುದು, ಗೌರವದಿಂದ ಕಾಡಿ ಬೇಡಬಹುದು. ಒಂದು ಜೀವ ಉಳಿಯುವುದಾದರೇ ಎಂಥವರಿಗೂ ದಮ್ಮಯ್ಯ ಹಾಕಲು ನಾವ್ಯಾಕೆ ಹಿಂಜರಿಯಬೇಕು.
ಒಂದು ಮಾತು ಸತ್ಯ. ನಾನಂತು ನಾಳೆ ರಕ್ತದಾನ ಶಿಬಿರದಲ್ಲಿ ನಮ್ಮ ಗೌರಿಗೆ ಅವಶ್ಯಕತೆಗೆ ಅನುಗುಣವಾಗಿ ರಕ್ತವನ್ನು ಪೊರೈಸಲೆಬೇಕೆಂದು ಪ್ರೀತಿಯಿಂದ, ಗೌರವದಿಂದ ಆಗ್ರಹಿಸುತ್ತೇನೆ. ನನಗಂತೂ ಅಚಲವಾದ ವಿಶ್ವಾಸವಿದೆ, ನಂಬಿಕೆಯಿದೆ, ನಮ್ಮ ಮನವಿಗೆ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಐ.ಎಂ.ಎ ಲೈಪ್ ಲೈನ್ ಬ್ಲಡ್ ಬ್ಯಾಂಕ್ ಶಿರಸಿ ಮತ್ತು ಸಾರ್ವಜನಿಕ ಆಸ್ಪತ್ರೆಯವರು ಸ್ಪಂದಿಸಿ ಗೌರಿಗೆ ಬೇಕಾದ ರಕ್ತದ ಜವಾಬ್ದಾರಿಯನ್ನು ತಾವೆ ಹೊತ್ತುಕೊಳ್ಳುತ್ತಾರೆಂದು. ಆ ನಂಬಿಕೆ ಉಳಿಯುವಂತಾಗಲಿ.

ನಾಳೆ ನಾವಿರುತ್ತೇವೆಯೆಂದೆ ಇಡ್ಲಿಗೆ ಇಂದೆ ಉದ್ದು ನೆನೆ ಹಾಕುತ್ತೇವೆ. ಅದು ನಂಬಿಕೆ. ಈ ನಂಬಿಕೆ ನಮ್ಮಲ್ಲಿ ಸುಭದ್ರವಾಗಬೇಕು. ಆಗ ಮಾತ್ರ ಸಮಾಜವೂ ಭದ್ರವಾಗುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ, ನಮ್ಮೂರ ಗೌರಿ ಸಲುವಾಗಿ ರಕ್ತಜಾತ್ರೆಯನ್ನು ಮಾಡೋಣ.
 
ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...