ವಿದ್ಯಾರ್ಥಿಗಳ ಪಾಲಿಗೆ ಅಪ್ಪಟ ಅಮ್ಮನಂತಿದ್ದ ವನಿತಾ.ಪಿ.ಕಿನ್ನರಕರ
ವನಿತಮ್ಮನ ಮಾತೃಹೃದಯದ ಮನಸ್ಸು ಮತ್ತು ಸ್ಪಂದನೆಯ ಗುಣ ಶಾಶ್ವತ
ವನಿತಮ್ಮನ ಮಾತೃಹೃದಯದ ಮನಸ್ಸು ಮತ್ತು ಸ್ಪಂದನೆಯ ಗುಣ ಶಾಶ್ವತ
ಅವರು ಗತಿಸಿ ನಿನ್ನೆಗೆ ಎರಡು ವರ್ಷ. ಅವರು ಎಲ್ಲರಂತಿರಲಿಲ್ಲ. ವಿಭಿನ್ನ ವ್ಯಕ್ತಿತ್ವದ ಆದರ್ಶ ಮನಸ್ಸಿನ ಸುಸಂಸ್ಕೃತ ಮಾತೆಯಾಗಿದ್ದರು. ಅಪಾರ ವರ್ಷಗಳ ಕಾಲ ಶಿಕ್ಷಕಿಯಾಗಿ ಅನುಪಮ ಸೇವೆ ಸಲ್ಲಿಸಿದವರು. ವೃತ್ತಿಯಲ್ಲಿರುವಾಗಲೆ ಅನಾರೋಗ್ಯ ಪೀಡಿತರಾಗಿ ಇಹಲೋಕವನ್ನು ತ್ಯಜಿಸಿದವರು.
ಅವರು ಬೇರೆ ಯಾರು ಅಲ್ಲ. ದಾಂಡೇಲಿಯ ಟೌನಶೀಪ್ ನಿವಾಸಿಯಾಗಿದ್ದ ದಿ: ವನಿತಾ ಪಂಡರಿನಾಥ ಕಿನ್ನರಕರ ಅವರು. ಅಂದ ಹಾಗೆ ಅವರು ಸ್ಥಳೀಯ ಕೋಗಿಲೆಬನ ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದವರು. ಕೋಗಿಲೆಬನದ ವಿದ್ಯಾರ್ಥಿಗಳಿಗೆಂದು ಅವರು ಶಿಕ್ಷಕಿಯಾಗಿರಲಿಲ್ಲ. ಹೆತ್ತಮ್ಮನ ಆರೈಕೆ ನೀಡಿದ ಮಾತೃ ಹೃದಯದ ಅಮ್ಮನಾಗಿದ್ದವರು.
ವಿದ್ಯಾರ್ಥಿಗಳು ಆಟವಾಡುವಾಗ ಬಿದ್ದಾಗ ಸರ ಸರನೆ ಓಡೋಡಿ, ಅವರನ್ನು ಮೇಲೆಬ್ಬಿಸಿ, ಗಾಯಕ್ಕೆ ಮುಲಾಂ ಹಚ್ಚಿಕೊಳ್ಳುವ ಮೂಲಕ ಮಕ್ಕಳ ಮನಸ್ಸು ಗೆದ್ದ ಆದರ್ಶ ಶಿಕ್ಷಕಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದ ಹೃದಯವಂತೆ ನಮ್ಮ ವನಿತಮ್ಮನವರಾಗಿದ್ದರು. ಜೀವನದಲ್ಲೆಂದೂ ಸ್ವಾರ್ಥವನ್ನು ಬಯಸದ ಪರಿಪೂರ್ಣ ಮನಸ್ಸಿನ ಹೃದಯವಂತೆ, ಗುಣವಂತೆ ಅಮ್ಮ ನಮ್ಮ ವನಿತಾಮ್ಮನಾಗಿದ್ದರು.
ಅವರ ಪತಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಪತಿಗೆ ತಕ್ಕ ಮುದ್ದಿನ ಮಡದಿಯಾಗಿ, ಪತಿ ಮುರಳೀಧರ ಗುರವ ಅವರು ಪೊಲೀಸ್ ಇಲಾಖೆಯಲ್ಲಿದ್ದುಕೊಂಡೆ ರಾಷ್ಟ್ರೀಯ ವಾಲಿಬಾಲ್ ಆಟಗಾರರಾಗುವಲ್ಲಿ ಪರಿಣಾಮಕಾರಿಯಾಗಿ ಸ್ಪೂರ್ತಿಯ ಸೆಳೆಯಾಗಿದ್ದವರು ನಮ್ಮ ವನಿತಮ್ಮನವರು. ಮಗಳು ಪೂರ್ಣಿಮಾ ಗುರವ ಅವರು ಇಂದು ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಭಾಗ್ಯಾದಾಸರೆ ನೀಡಿದ ತಾಯಿಯವರು. ಮಗ ಅಮರ್ ಗುರವ ಅವರ ಕ್ರೀಡಾ ಬಾಳ್ವೆಯನ್ನು ಬೆಳಗಿಸಿದ ಜ್ಯೋತಿಯಾಗಿದ್ದವರು ಈ ನಮ್ಮ ಅಮ್ಮ ವನಿತಮ್ಮನವರು.
ಮನೆಗಷ್ಟೆ ಆದರ್ಶ ಗುಣಸಂಪನ್ನೆಯಾಗದೇ ಇಡೀ ಸಮಾಜಕ್ಕೆ ಮಾದರಿ ಮತ್ತು ಅನುಪಮ ವ್ಯಕ್ತಿತ್ವದ ಮಹಿಳಾಮಣಿಯಾಗಿದ್ದವರು ನಮ್ಮ ವನಿತಮ್ಮನವರು.
ವನಿತಮ್ಮನವರು ನಮ್ಮನಗಲಿ ವರ್ಷ ಎರಡು ಉರುಳಿರಬಹುದು. ಆದ್ರೆ ಅವರ ಜೀವನ ಸನ್ನಡತೆ, ಆದರ್ಶ ನಡವಳಿಕೆ ನಮಗೆಲ್ಲರಿಗೂ ದಿವ್ಯ ಪ್ರೇರಣೆ. ಮಗದೊಮ್ಮೆ ಜನ್ಮವೆತ್ತಿ ಬನ್ನಿ ಅಮ್ಮ ಎಂಬ ಪ್ರಾರ್ಥನೆಯೊಂದಿಗೆ.
ನಿಮ್ಮ ಮಗನಂತಿರುವ
ಸಂದೇಶ್.ಎಸ್.ಜೈನ್

No comments:
Post a Comment