Sunday, January 13, 2019

ನನ್ನನ್ಯಾಕೆ ಇಲ್ಲಿ ತಂದ್ರಿ, ಆದಷ್ಟು ಬೇಗ ಮನೆಗೆ ಕರ್ಕೊಂಡು ಹೋಗ್ರಿ
ನಾನು ಶಾಲೆಗೆ ಹೋಗ್ಬೇಕು, ಚೆನ್ನಾಗಿ ಓದ್ಬೇಕಪ್ಪ, ಸ್ಕೂಲಿಗೆ ಬಹಳ ರಜೆ ಆಯ್ತು.
ಇದು ರಕ್ತದ ಕ್ಯಾನ್ಸರಿನಿಂದ ಬಳಲುತ್ತಿರುವ ಮುದ್ದು ಗೌರಿಯ ಮನಸ್ಸು ಕರಗುವ ಪ್ರಶ್ನೆಗಳು.
ಗೌರಿಗೆ ಚಿಕಿತ್ಸೆಗೆ ನಾವು ನೀವು ಎಲ್ಲರೂ ಸೇರಿ ಆರ್ಥಿಕ ಸಹಾಯ ಮಾಡುವುದರ ಮೂಲಕ ಅವಳ ಪ್ರಶ್ನೆಗೆ ಉತ್ತರ ರೂಪದಲ್ಲಿ ಹೊಸ ಬದುಕನ್ನು ನೀಡೋಣ

ಆಕೆ ದಿಟ್ಟ ಬಾಲಕಿ, ನಾವು ನೀವೆಲ್ಲರೂ ಮನಸ್ಸು ಮಾಡಿದರೆ ಸಾವನ್ನು ಗೆಲ್ಲಬಹುದಾದ ಚೈತನ್ಯಶಕ್ತಿಯನ್ನು ಹೊಂದಿದ ಪ್ರಾಂಜಲ ಮನಸ್ಸಿನ ಬಡಪಾಯಿ ಮಗುವದು. ಇನ್ನೂ 70-80 ವರ್ಷ ಬಾಳಿ ಬದುಕಬೇಕಾದ ಆಕೆ 11 ವರ್ಷ ಹರೆಯದಲ್ಲೆ ಜೀವನಕ್ಕೆ ಗುಡ್ ಬೈ ಹಾಡುವ ರೋಗಕ್ಕೆ ಬಲಿಯಾದ ಕಂದಮ್ಮಳವಳು. ಆದರೂ ಎದೆಗುಂದದೆ ವೈದ್ಯರಿಗೆ ಸರಿಯಾಗಿ ಸ್ಪಂದಿಸುವುದರ ಮೂಲಕ ಬದುಕು ಎಲ್ಲ ಲಕ್ಷಣಗಳನ್ನು ನಿಚ್ಚಳವಾಗಿಸಿಕೊಂಡು, ವೈದ್ಯರಿಗೆ ಆತ್ಮವಿಶ್ವಾಸವನ್ನು ಮೂಡಿಸಿಕೊಟ್ಟ ಈ ಬಾಲಕಿ, ನಮ್ಮ ನಿಮ್ಮೆಲ್ಲರ ಸಹಾಯ, ಸಹಕಾರದಿಂದ ಸಾವಿನ ಬಾಗಿಲಿನಿಂದ ಬಹಳ ಪ್ರಯಾಸಪಟ್ಟು ಒಂದೊಂದೆ ಹೆಜ್ಜೆ ಹಿಂದುರುಗಿಸಿತ್ತಾ, 70-80 ವರ್ಷ ಬದುಕುವ ಸ್ಪಷ್ಟ ಮುನ್ಸೂಚನೆಯನ್ನು ನೀಡುವ ರೀತಿಯಲ್ಲಿ ಸ್ಪಂದಿಸುತ್ತಿದ್ದಾಳೆ.

ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ಗೌರಿ ಆಕೆಯ ಅಪ್ಪ ಅನಿಲ್ ನಾಯ್ಕ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾಳೆ. ರಕ್ತದ ಕಾನ್ಸರ್ ಅಂದ್ರೇನೂ ಅರಿಯದ ಆಕೆಗೆ ಆಕೆ ಆ ರೋಗಕ್ಕೆ ತುತ್ತಾಗಿರುವುದು ಇನ್ನೂ ಗೊತ್ತಾಗಲೆ ಇಲ್ಲ. ಹಾಗಾಗಿ ಇಂದು ಬೆಳಿಗ್ಗೆ ಅವಳ ತಂದೆ ಅನಿಲ್ ನಾಯ್ಕರವರಲ್ಲಿ ಅಪ್ಪ ನನ್ನನ್ಯಾಕೆ ಇಲ್ಲಿಗೆ ತಂದಿದ್ದೀರಿ, ಇಷ್ಟೆಲ್ಲಾ ರಕ್ತ ಯಾಕೆ ನನಗೆ ಕೊಡಕ್ಕತ್ತಿರಿ, ನನಗೇನು ಆಗಿದೆ, ನಾನು ಚೆನ್ನಾಗಿದ್ದೇನೆಲ್ಲಾ, ನನ್ನನ್ನು ತಕ್ಷಣವೆ ಮನಗೆ ಕರೆದುಕೊಂಡು ಹೋಗಿ, ಶಾಲೆಗೆ ರಜೆ ಮಾಡಿ ಬಹಳ ದಿನವಾಯ್ತು, ನೋಟ್ಸ್ ಬಹಳ ಬರೆಯಲು ಪೆಂಡಿಂಗ್ ಆಗುತ್ತದೆ. ನಾನು ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಪಡೆದು ನಿಮ್ಮನ್ನು ಚೆನ್ನಾಗಿ ಸಾಕ್ಬೇಕೆಂದಾಗ ಅಪ್ಪ ಅನಿಲ್ ನಾಯ್ಕ ಅವರು ತಡೆದುಕೊಳ್ಳುವುದಾದರೂ ಹೇಗೆ? ಮಗಳ ಈ ಪ್ರಶ್ನೆಗಳನ್ನು ಕೇಳಿಸಿಕೊಂಡ ಅನಿಲ್ ನಾಯ್ಕ ಅವರು ಆಸ್ಪತ್ರೆಯ ಬಾತ್ ರೂಂಗೆ ಓಡೋಡಿ ಹೋಗಿ ಬಾತ್ ರೂಂ ಒಳಗೆ ಹದಿನೈದು ನಿಮಿಷ ಅತ್ತು ಅತ್ತು, ಅವರಿಗೆ ಅವರೆ ಸಮಾಧಾನ ಪಡಿಸಿಕೊಂಡು ಮಗಳು ಗೌರಿಗೆ ಧೈರ್ಯದ ಉತ್ತರವನ್ನು ನೀಡಿದ್ದಾರೆ.

ಗೌರಿಗಿರುವ ಬುದ್ದಿವಂತಿಕೆ, ಸಮಯವಂತಿಕೆ ಮತ್ತು ಹೃದಯಶ್ರೀಮಂತಿಕೆಯನ್ನು ನಾವು ನೀವೆಲ್ಲರೂ ಮೆಚ್ಚಿ ಅವಳನ್ನು ಆರೋಗ್ಯವಂತಳನ್ನಾಗಿಸಿ, ದಾಂಡೇಲಿಗೆ ಕರೆ ತರಬೇಕಾಗಿದೆ. ದಯವಿಟ್ಟು ನಿಮ್ಮೆಲ್ಲರ ನಿರಂತರ ಸಹಾಯ, ಸಹಕಾರ, ಆಶೀರ್ವಾದ ನಮ್ಮ ಗೌರಿಗಿರಲಿ.

ಒಂದು ಮಾತು :
ಆಕೆಗೆ ಪ್ರತಿನಿತ್ಯ ರಕ್ತದ ಅವಶ್ಯಕತೆಯಿದೆ. ಜನವರಿ 12 ರಂದು ವಿ.ಆರ್.ಡಿ.ಎಂ ಟ್ರಸ್ಟ್, ದೆಶಪಾಂಡೆ ಆರ್ ಸೆಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಹಮ್ಮಿಕೊಳ್ಳಲಾಗಿತ್ತು. ಇದು ನಿಯೋಜಿತ ಕಾರ್ಯಕ್ರಮ. ಆದರೂ ಶಿರಸಿ ಪಂಡಿತ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನವರಿಗೆ ಗೌರಿಗೆ ರಕ್ತ ನೀಡುವಂತೆ ವಿನಂತಿಸಲಿರುವುದರಿಂದ ಹೆಚ್ಚಿನ ಜನರು ಈ ಶಿಬಿರದಲ್ಲಿ ಭಾಗವಹಿಸುವಂತೆ ಸ್ವತ: ನಾನೆ ವಿನಂತಿಸಿದ್ದೆ. ಒಟ್ಟು 50 ಜನರು ರಕ್ತದಾನ ನೀಡಿ ಸಹಕಾರ ನೀಡಿದ್ದಾರೆ. ಅವರಿಗೆ ವಂದನೆಗಳು.  ಶಿರಸಿಯ ಪಂಡಿತ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿಗಳಿಗೆ ನಮ್ಮ ಗೌರಿಯ ಬಗ್ಗೆ ವಿವರವಾಗಿ ಮನವಿ ಮಾಡಿಕೊಳ್ಳಲಾಗಿದೆ. ಅವರಿಂದ ಸಕಾಲಿಕ ಸ್ಪಂದನೆ ದೊರೆತಿದೆ. ಅಗತ್ಯ ಸಂದರ್ಭದಲ್ಲಿ ನಾವಿದ್ದೇವೆ ಎಂಬ ವಿಶ್ವಾಸದ ಮಾತು ಕೊಟ್ಟಿದ್ದಾರೆ.
ಮುದ್ದು ಗೌರಿಯನ್ನು ಆರೋಗ್ಯವಂತ ಗೌರಿಯನ್ನಾಗಿಸುವ ಶಪಥ ಮಾಡೋಣ. ನಮ್ಮೂರಿನ ಕಂದಮ್ಮಳಿಗೆ ಜೀವದಾಸರೆ ನೀಡೋಣ ಬನ್ನಿ.

ಅನಿಲ ನಾಯ್ಕ,
ಉಳಿತಾಯ ಖಾತೆ ಸಂಖ್ಯೆ: S.B A/C No: 03072200154546
ಸಿಂಡಿಕೇಟ್ ಬ್ಯಾಂಕ್, ದಾಂಡೇಲಿ.
IFSC Code: SYNB0000307
Micr Code: 581025502
Branch Code: 0307


ಗೌರಿಯ ತಂದೆ ಅನಿಲ ನಾಯ್ಕ ಅವರ ಮೊಬೈಲ್ ನಂ: 9483579144, 9632613692
ಒಂದು ವೇಳೆ ಅನಿಲ ನಾಯ್ಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಲ್ಲಿ -9482521189, 9945394602 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
 
ನಿಮ್ಮವ

ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...