ರಕ್ತದ ಕ್ಯಾನ್ಸರಿಗೆ ತುತ್ತಾಗಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನ್ನೊಂದರ ಹರೆಯದ ಮುದ್ದು ಗೌರಿಯ ಚಿಕಿತ್ಸೆಗೆ ಆರ್ಥಿಕ ನೆರವು ಕೋರಿ ಅವಳನ್ನು ಉಳಿಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಕೈ ಮುಗಿದು ಪ್ರಾರ್ಥಿಸಿಕೊಂಡಿದ್ದೆ. ನನ್ನ ಈ ಮನವಿಗೆ ಸ್ಪಂದಿಸಿ ಸಾಕಷ್ಟು ಜನ ನೆರವಿನ ಹಸ್ತ ಚಾಚಿದ್ದಾರೆ. ಅವರೆಲ್ಲರಿಗೂ ಶಿರಬಾಗಿ ನಮಿಸುವೆ.
ಗೌರಿಯ ಕುರಿತಂತೆ ಬರೆದ ಮನವಿಯನ್ನು ಶ್ರೀ.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಪರಮಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅವರ ಮೊಬೈಲ್ ನಂಬರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದೇನು. ಮನವಿಗೆ ಸಕಾಲದಲ್ಲಿ ಸ್ಪಂದಿಸಿದ ಪರಮಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ದಿನಾಂಕ: 15.01.2019 ರಂದು ಗೌರಿಯ ತಂದೆ ಅನಿಲ ದತ್ತರಾಮ ನಾಯ್ಕ ಅವರ ಉಳಿತಾಯ ಖಾತೆಗೆ ರೂ: 25,000/- ಜಮಾ ಮಾಡುವುದರ ಮೂಲಕ ಅಮೂಲ್ಯ ನೆರವನ್ನು ನೀಡಿ ಆಶೀರ್ವದಿಸಿದ್ದಾರೆ. ಗೌರಿ ಆರೋಗ್ಯವಂತಳಾಗಲೆಂದು ಭಗವಾನ್ ಶ್ರೀ. ಮಂಜುನಾಥ ಸ್ವಾಮಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಬಡವಿ ಗೌರಿಯ ಕುಟುಂಬದ ನೋವಿಗೆ ಸ್ಪಂದಿಸಿ, ಆಶೀರ್ವದಿಸಿದ ನಡದಾಡುವ ಮಂಜುನಾಥರೆಂದೆ ಜನಖ್ಯಾತಿ ಪಡೆದ ಪೂಜ್ಯ ಡಾ: ಹೆಗ್ಗಡೆಯವರ ಪಾದಕಮಲಕ್ಕೆ ಶಿರಬಾಗಿ ನಮಿಸುತ್ತಾ, ಅತ್ಯಂತ ಅಭಿಮಾನದಿಂದ ಋಣಿಯಾಗಿದ್ದೇನೆ.
ಗೌರಿ ನೀನು ಬದುಕಿ ಬಾ, ಸಾವನ್ನು ಜೈಯಿಸಿ ನಮ್ಮೂರ ಹೆಮ್ಮೆಯನ್ನು ಸಾರುವ ಮನೆಮಗಳಾಗಿ ಬಾ ಪ್ರಾರ್ಥಿಸುವ,
ಮುದ್ದು ಗೌರಿಯನ್ನು ಆರೋಗ್ಯವಂತ ಗೌರಿಯನ್ನಾಗಿಸುವ ಶಪಥ ಮಾಡೋಣ. ನಮ್ಮೂರಿನ ಕಂದಮ್ಮಳಿಗೆ ಜೀವದಾಸರೆ ನೀಡೋಣ ಬನ್ನಿ.
ಅನಿಲ ನಾಯ್ಕ,
ಉಳಿತಾಯ ಖಾತೆ ಸಂಖ್ಯೆ: 03072200154546
ಸಿಂಡಿಕೇಟ್ ಬ್ಯಾಂಕ್, ದಾಂಡೇಲಿ.
ಗೌರಿಯ ತಂದೆ ಅನಿಲ ನಾಯ್ಕ ಅವರ ಮೊಬೈಲ್ ನಂ: 9483579144, 9632613692
ಒಂದು ವೇಳೆ ಅನಿಲ ನಾಯ್ಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಲ್ಲಿ -9482521189, 9945394602 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ನಿಮ್ಮವ
ಉಳಿತಾಯ ಖಾತೆ ಸಂಖ್ಯೆ: 03072200154546
ಸಿಂಡಿಕೇಟ್ ಬ್ಯಾಂಕ್, ದಾಂಡೇಲಿ.
ಗೌರಿಯ ತಂದೆ ಅನಿಲ ನಾಯ್ಕ ಅವರ ಮೊಬೈಲ್ ನಂ: 9483579144, 9632613692
ಒಂದು ವೇಳೆ ಅನಿಲ ನಾಯ್ಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಲ್ಲಿ -9482521189, 9945394602 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment