ಸಾಯಲು ಹೊರಟ ಗೌರಿಗೆ ಜೀವದೂಸಿರು ನೀಡಲು ಮುಂದಾದ ಹೃದಯಶ್ರೀಮಂತರಿಗೆ ಶಿರಭಾಗಿ ನಮಿಸುವೆ.
ಸನ್ಮಾನ್ಯ ಸಚಿವರಾದ ಮಾನ್ಯ ಆರ್.ವಿ.ದೇಶಪಾಂಡೆಯವರು ನಮ್ಮ ಮುದ್ದು ಗೌರಿಯ ಆರೋಗ್ಯ ಚಿಕಿತ್ಸೆಗಾಗಿ ಮುಖ್ಯಮಂತ್ರಿ ನಿಧಿಯಲ್ಲಿ ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ.
ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಮಾನ್ಯ.ಎಸ್.ಪ್ರಕಾಶ ಶೆಟ್ಟಿಯವರು ರೋಟರಿ ಕ್ಲಬ್ ನೇತೃತ್ವದಲ್ಲಿ ರೂ:25000/- ಧನ ಸಹಾಯ ಮಾಡಲು ಕ್ರಮ ಕೈಗೊಂಡಿದ್ದಾರೆ. ಇದರ ಜೊತೆಯಲ್ಲೆ ಜಿಲ್ಲಾ ರೊಟರಿ ಕ್ಲಬಿನಿಂದ ಹೆಚ್ಚಿನ ಸಹಾಯ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ದಾಂಡೇಲಿಯ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಇಲ್ಲಿನ ಹಿರಿಯ ಅಧಿಕಾರಿಗಳು ಹಾಗೂ ಸಮಾಜಮುಖಿ ವ್ಯಕ್ತಿತ್ವದ ಮಾನ್ಯ ಶ್ರೀ. ಸಂಜೀವ್ ಮೊಗವೀರ ಅವರು ರೂ: 5000/- ಧನ ಸಹಾಯವನ್ನು ಗೌರಿಯ ತಮದೆ ಅನಿಲ್ ನಾಯ್ಕ ಅವರು ಉಳಿತಾಯ ಖಾತೆಗೆ ಜಮಾ ಮಾಡಿದ್ದಾರೆ.
ನನ್ನ ಜೀವದ ಗೆಳೆಯ ದಾಂಡೇಲಿಯ ಅಮರ್.ಎಂ.ಗುರವ ಅವರು ಧನ ಸಹಾಯ ಮಾಡಿದ್ದಾರೆ.
ಧರ್ಮಸ್ಥಳದ ನನ್ನ ಗೆಳೆಯ ಮಾನ್ಯ ಶ್ರೀ. ಧನಕೀರ್ತಿ ಆರಿಗ ಅವರು ರೂ: 1000/- ಧನ ಸಹಾಯ ಮಾಡಿದ್ದಾರೆ.
ಕಾರ್ಮಿಕ ಮುಖಂಡ ದಾಂಡೇಲಿಯ ರಾಜೇಸಾಬ ಕೇಸನೂರು ಅವರು ಅವರ ಸಂಘಟನೆಯ ಮೂಲಕ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.
ಜೆ.ಡಿ.ಎಸ್.ರಾಜ್ಯ ಕಾರ್ಯದರ್ಶಿ ರೋಶನ್ ಬಾವಾಜಿ ಮತ್ತು ಅವರ ಸಹೋದರ ವಕೀಲ ರಾಹುಲ್ ಬಾವಾಜಿಯವರು ಸಹಾಯ ಮಾಡುತ್ತಿದ್ದಾರೆ.
ದಾಂಡೇಲಿಯ ಯುವ ಉದ್ಯಮಿ ಶ್ರೀ ರಾಘವೇಂದ್ರ.ಪಿ.ಶೆಟ್ಟಿಯವರು ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಗೆ ಭೇಟಿ ನೀಡಿ ಗೌರಿಯ ಆರೋಗ್ಯ ವಿಚಾರಿಸಿ, ಮುಂದಿನ ಕ್ರಮದ ಬಗ್ಗೆ ನಿಕಟ ಸಂಪರ್ಕವಿಟ್ಟುಕೊಂಡು ನೆರಳಾಗಿ ನಿಂತಿದ್ದಾರೆ.
ದಾಂಡೇಲಿಯ ಮನೆ ಮಗಳು ಡಾ: ಸುಹಾಸಿನಿಯವರು ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ಗೌರಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿಕೊಳ್ಳುತ್ತಿದ್ದಾರೆ.
ದಾಂಡೇಲಿಯ ಕಾಮತ್ ಹೋಟೆಲ್ ಮಾಲಕ ಮಾನ್ಯ ನವೀನ ಕಾಮತ್ ಅವರು ತುಂಬು ಹೃದಯದಿಂದ ಸಹಕಾರವನ್ನು ನೀಡುತ್ತಿದ್ದು, ಧನ ಸಹಾಯದ ಸಂಗ್ರಹಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಯುವ ನಗರ ಸಭಾ ಸದಸ್ಯ ಮಾನ್ಯ ದಶರಥ ಬಮಡಿವಡ್ಡರ, ಯುವ ಮುಖಂಡ ಮಾನ್ಯ ಸುಧೀರ ಶೆಟ್ಟಿಯವರು ಟ್ವೀಟರ್, ಪೇಸ್ ಬುಕ್, ವಾಟ್ಸಪ್ ಮೂಲಕ ಗೌರಿಯನ್ನು ಉಳಿಸಲು ಅವರಿವರಿಗೆ ಮನವಿ ಮಾಡುವುದರ ಮೂಲಕ ಗೌರಿಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನಿಸುತ್ತಿದ್ದಾರೆ.
ಜೆವಿಡಿಯ ಇ.ಎಂ.ಎಸ್ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಹಾಗೂ ಪಾಲಕರು, ಶಾಲಾಭಿವೃದ್ಧಿ ಸಮಿತಿ ಗೌರಿಯನ್ನು ಬದುಕಿಸಲು ನೆರವಾಗುತ್ತಿದ್ದಾರೆ.
ದಾಂಡೇಲಿಯ ವಿವಿಧ ಸಂಘ ಸಂಸ್ಥೆಗಳವರು, ನಾಗರೀಕರು, ದಾನಿಗಳು ಹಾಗೂ ಹೊರ ತಾಲೂಕು ಮತ್ತು ಹೊರ ಜಿಲ್ಲೆಗಳ ಜನ ಗೌರಿಯನ್ನು ಉಳಿಸಬೇಕೆಂದು ಸಹಕಾರ ನೀಡುತ್ತಿದ್ದಾರೆ.
ವಿದ್ಯಾರ್ಥಿಗಳು,ನಾಗರೀಕರು ಅವರಿವರ ಬಳಿ ಸಂಗ್ರಹಿಸಿ ಗೌರಿಯನ್ನು ಉಳಿಸಲು ನೆರವಾಗುತ್ತಿದ್ದಾರೆ. ಬಹಳಷ್ಟು ಜನ ಪ್ರತ್ಯಕ್ಷ, ಪರೋಕ್ಷ ಸಹಾಯ ನೀಡುತ್ತಿದ್ದಾರೆ.
ಇನ್ನೂ ಸಹಾಯದ ನಿರೀಕ್ಷೆಯಲ್ಲಿದ್ದಾಳೆ. ಗೌರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯೆ ತೀವ್ರ ಪ್ರಯತ್ನ ನಡೆಸುತ್ತಿದ್ದು, ಗೌರಿಯನ್ನು ಬಾಳಿ ಬದುಕಿಸುವ ಭರವಸೆ ನೀಡಿದ್ದಾರೆ.
ಪ್ರತಿ ದಿನ ರಕ್ತ ಬೇಕಾಗಿದೆ. ಪ್ರತಿದಿನ ಹೊರಗಡೆಯಿಂದ ಔಷದೋಪಚಾರದ ಅಗತ್ಯವಿರುವುದರಿಂದ ಹಣದ ಅವಶ್ಯಕತೆ ಇನ್ನು ಬಹಳಷ್ಟಿದೆ. ನೀವೆಲ್ಲ ಗೌರಿಯ ಜೊತೆ ಇದ್ದರೇ ನಮ್ಮ ಗೌರಿ ದಾಂಡೇಲಿಯ ಮಣ್ಣಲ್ಲಿ ಮತ್ತೆ ಅರಳಿ ನಿಂತು ದೇಶದ ಆಸ್ತಿಯಾಗಲಿದ್ದಾಳೆ.
ಗೌರಿಯನ್ನು ಉಳಿಸಲು ಆರಂಭದ ಹೆಜ್ಜೆಯಲ್ಲಿದ್ದೇವೆ. ಇದು ಆರಂಭ ಮಾತ್ರ, ಇನ್ನೂ ಸಹಾಯದ ನಿರೀಕ್ಷೆಯಲ್ಲಿ ಪುಟ್ಟ ಗೌರಿ ಬದುಕುವ ಆಸೆ ಬೆಳೆಸಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಬಹಳಷ್ಟು ಜನ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ಸಹಾಯ ಮಾಡಿದವರೆಲ್ಲರಿಗೂ ಋಣಿಯಾಗಿದ್ದೇನೆ.
ಗೌರಿಯನ್ನು ಉಳಿಸಬೇಕಾದರೇ ನೀವು ಧನ ಸಹಾಯ ಮಾಡಬೇಕಾದ ಉಳಿತಾಯ ಖಾತೆಯ ವಿವರ:
ಅನಿಲ ನಾಯ್ಕ,
ಉಳಿತಾಯ ಖಾತೆ ಸಂಖ್ಯೆ: S.B A/C No: 03072200154546
ಸಿಂಡಿಕೇಟ್ ಬ್ಯಾಂಕ್, ದಾಂಡೇಲಿ.
IFSC Code: SYNB0000307
Micr Code: 581025502
Branch Code: 0307
ಗೌರಿಯ ತಂದೆ ಅನಿಲ ನಾಯ್ಕ ಅವರ ಮೊಬೈಲ್ ನಂ: 9483579144, 9632613691
ಒಂದು ವೇಳೆ ಅನಿಲ ನಾಯ್ಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಲ್ಲಿ -9482521189, 9945394602 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment