Wednesday, January 9, 2019

ಡಿಬಿಎ ಅಧ್ಯಕ್ಷರಾಗಿ ಎಸ್.ಪ್ರಕಾಶ ಶೆಟ್ಟಿ ಪುನರಾಯ್ಕೆ
ಪ್ರಧಾನ ಕಾರ್ಯದರ್ಶಿಯಾಗಿ  ಗುರು ಮಠಪತಿ, ಖಜಾಂಚಿಯಾಗಿ ನವೀನ್ ಕಾಮತ್ ಆಯ್ಕೆ



ದಾಂಡೇಲಿ : ಸ್ಥಳೀಯ ದಾಂಡೇಲಿ ಬ್ಯಾಡ್ಮಿಂಟನ್ ಅಸೋಷಿಯೇಶನ್ ಇದರ ಅಧ್ಯಕ್ಷರಾಗಿ ಸಂಸ್ಥಾಪಕ ಅಧ್ಯಕ್ಷರಾದ ಉದ್ಯಮಿ ಎಸ್.ಪ್ರಕಾಶ ಶೆಟ್ಟಿಯವರು ಎರಡನೆ ಬಾರಿಗೆ ಪುನರಾಯ್ಕೆಯಾಗಿದ್ದಾರೆ.

ನಗರದ ಸಂತೋಷ್ ಹೋಟೆಲ್ ಸಬಾಭವನದಲ್ಲಿ ಬುಧವಾರ ನಡೆದ ದಾಂಡೇಲಿ ಬ್ಯಾಡ್ಮಿಂಟನ್ ಅಸೋಷಿಯೇಶನ್ ಇದರ ವಾರ್ಷಿಕ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.

ಅಧ್ಯಕ್ಷರಾಗಿ ಉದ್ಯಮಿ ಹಾಗೂ ಸಂಸ್ಥಾಪಕ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹೆಸ್ಕಾಂ ಅಧಿಕಾರಿ ಕುಮಾರ್ ಕರಗಯ್ಯ, ಚಾರ್ಟಡ್ ಅಕೌಂಟೆಂಟ್ ಸಚಿನ್ ಕಾಮತ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಯುವ ಸಮಾಜ ಸೇವಕ ಗುರು ಮಠಪತಿಯವರು ಅವಿರೋಧವಾಗಿ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ಮಿಥುನ್ ನಾಯಕ ಹಾಗೂ ಖಜಾಂಚಿಯಾಗಿ ಉದ್ಯಮಿ ನವೀನ್ ಕಾಮತ್ ಅವರು ಆಯ್ಕೆಯಾದರೇ, ಸಂಯೋಜಕರಾಗಿ ಡಾ: ಮೊಹಮ್ಮದ ಸಲ್ಮಾನ್ ಗೈಮಾ ಅವರು ಆಯ್ಕೆಯಾದರು.

ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸುರೇಶ ಕಾಮತ್, ಇಮಾಮ್ ಸರ್ವರ್, ಪ್ರಮೋದ ಶಾನಭಾಗ, ಸಚಿನ್ ವ್ಹಾಜ್, ವಿನೋದ ಬಾಂದೇಕರ, ಅಗಸ್ಟೀನ್ ಕಾಲೆ, ವಿಷ್ಣುಮೂರ್ತಿ ರಾವ್, ಡಾ: ವಾಸಿಕ ಅಹ್ಮದ ಮಳಗಿ, ಇನಾಜ್ ವ್ಹಾಜ್, ರಂಜಾನ ಕಡಪಿ, ದೀಪಕ ನಾಯಕ, ಮುಕ್ತರ್ ಬಳ್ಳಾರಿ, ವಿನಯ್ ದೊಡ್ಡಾ, ಪ್ರಶಾಂತ ಬಸೂರ್ತೆಕರ, ಗುರು ಶೆಣ್ವಿ, ಅನಂತ ಕಾಮತ್, ಜಾಕ್ ಫರ್ನಾಂಡೀಸ್, ಪ್ರಮೋದ ಪರೊಳೇಕರ, ಸುನೀಲ ಬಿಹಾನಿ ಮತ್ತು ಡಾ: ಆಸೀಪ್ ದಫೇದಾರ ಅವರುಗಳು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ನಗರದ ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ನೂತನ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮವ,

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...