ಕೈ ಮುಗಿದು ಪ್ರಾರ್ಥಿಸುವೆ, ದಯವಿಟ್ಟು ಓದಿ, ಸಹಾಯ ಮಾಡಿ, ಬೆಳೆಯುತ್ತಿರುವ ಗೌರಿಯನ್ನು ಬದುಕಿಸೋಣ ಬನ್ನಿ
ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಕಂದಮ್ಮನನ್ನು ಉಳಿಸೋಣ ಬನ್ನಿ
ಅಯ್ಯೋ, ಎಂಥ ದುರ್ವಿಧಿ, ಆಕೆಗಿನ್ನು 10 ದಾಟಿ 11 ಹತ್ತಿರ ಹತ್ತಿರ ಹರೆಯದ ಚೆಲುವ ಬಾಲೆಯಾಕೆ. ಅವಳ ಹೆಸರು ಗೌರಿ. ಅತ್ಯಂತ ದಾರಿದ್ರ್ಯದ ಬಡತನದ ಕುಟುಂಬದಲ್ಲಿ ಜನ್ಮವೆತ್ತ ಕಂದಮ್ಮ. ಆ ಬಾಲಕಿ ದೂರದೂರಿನವಳಲ್ಲ. ನಮ್ಮೂರಿನ ದಾಂಡೇಲಿಯ ನಿರ್ಮಲನಗರ ಸಮೀಪದ ಟಿ.ಆರ್.ಟಿ ಕ್ರಾಸ್ ನಿವಾಸಿ ಒಬ್ಬ ಬಡ ಕೂಲಿ ಕಾರ್ಮಿಕ ಅನಿಲ್ ದತ್ತರಾಮ ನಾಯ್ಕ ಹಾಗೂ ಮನೆ ಮನೆ ಕೆಲಸ ಮಾಡುವ ಬಡ ಹೆಣ್ಮಗಳು ಅಸ್ಮಿತಾ ದಂಪತಿಗಳ ಜೇಷ್ಟ ಪುತ್ರಿ ಈ ನಮ್ಮ ಗೌರಿ.
ಪ್ಲೀಸ್ ಇಲ್ಲಿಂದ ದಯವಿಟ್ಟು ಓದಿ, ಸಹಾಯ ಮಾಡಿ, ನಿಮ್ಮೆಲ್ಲರಲ್ಲಿಯೂ ಸಹಾಯಕ್ಕಾಗಿ ಶಿರಬಾಗಿ ಬೇಡಿ ಆಕೆಯ ಬಗ್ಗೆ ಸಹಾಯ ಕೋರಿ ಬರೆಯಲು ಹೊರಟಿದ್ದೇನೆ.
ಬಡತನವಿದ್ದರೂ ಮಗಳು ಗೌರಿ ಮನಸ್ಸಿನಲ್ಲೆಂದು ವ್ಯಥೆ ಪಡಬಾರದೆಂದು ಭಾವಿಸಿ, ಬಡ ಜೀವ ಅನಿಲ್ ನಾಯ್ಕ ದಂಪತಿಗಳು, ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದಿದ್ದರೂ, ಭವಿಷ್ಯದ ಕನಸನ್ನು ಬೆನ್ನೇರಿ ಮಗಳು ಗೌರಿಯನ್ನು ದಾಂಡೇಲಿಯ ಪ್ರತಿಷ್ಟಿತ ಜೆವಿಡಿಯ ಶಿಕ್ಷಣ ಸಂಸ್ಥೆಯ ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದಾರೆ. ಪ್ರಸಕ್ತ ವರ್ಷ ನಮ್ಮ ಗೌರಿ 5 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
ಬಡತನದ ನಡುವೆ ಮಗಳ ಬಗ್ಗೆ ಹೊಂಗನಸು ಕಂಡಿದ್ದ ಬಡ ತಂದೆ ತಾಯಿಗಳಿಗೆ ಕಳೆದ ಕೆಲ ದಿನಗಳಿಂದ ಅಚ್ಚರಿಯ ಅವಘಡ ಬರಸಿಡಿಲಿನಂತೆ ಬಡಿದಬ್ಬಿಸಿದ್ದು ಮಾತ್ರ ರೋಚಕ ಮತ್ತು ದುರ್ವೈವ್ಯ. ಕಳೆದ ಕೆಲ ದಿನಗಳ ಹಿಂದೆ ಅತ್ಯಂತ ಚುರುಕಿನ ಬಾಲಕಿ, ಗುಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ ಉಜ್ವಲ ಭವಿಷ್ಯಕ್ಕಾಗಿ ಹಾತೊರೆಯುತ್ತಿದ್ದ ಗೌರಿ ಶಾಲೆಯಲ್ಲಿ ಒಮ್ಮೆಲೆ ರಕ್ತ ವಾಂತಿ ಮಾಡಲಾರಂಭಿಸಿದಳು.
ಮಗಳಿಗೆ ಜ್ವರ ಬಂದಿರಬಹುದೆಂದು ಅಲ್ಲಿ ಇಲ್ಲಿ ತೋರಿಸಿ ಕೈಯಲ್ಲಿದ್ದ ಮೂರ್ನಾಲ್ಕು ಸಾವಿರ ಖರ್ಚು ಮಾಡಿದ ಗೌರಿಯ ತಂದೆ ಅನಿಲ್ ನಾಯ್ಕ ಅವರಿಗೆ ಮಗಳು ರಕ್ತದ ಕ್ಯಾನ್ಸರಿನಿಂದ ಬಳಲುತ್ತಿರುವುದು ಗೊತ್ತಾಗಿದ್ದು ಧಾರವಾಡ ಆಸ್ಪತ್ರೆಗೆ ದಾಖಲಿಸಿದ ಬಳಿಕವೆ.
ಆದರೂ ಧೈರ್ಯ ಮಾಡಿ ಮಗಳನ್ನು ಧಾರವಾಡ ಆಸ್ಪತ್ರೆಗೆ ಸೇರಿಸಿ, ಮಡದಿ ಅಸ್ಮಿತಾ ಅವರ ಮೈಯಲ್ಲಿದ್ದ ಬಂಗಾರವನ್ನೆಲ್ಲಾ ಒತ್ತೆಯಿಟ್ಟು, ಅವರಿವರ ಬಳಿ ಕಾಡಿ ಬೇಡಿ, ಸಾಲ-ಸೋಲ ಮಾಡಿ ಧಾರವಾಡದ ಆಸ್ಪತ್ರೆಗೆ ಹಣ ಜಮಾ ಮಾಡಿದರೂ ಫಲಿತಾಂಶ ಮಾತ್ರ ಶೂನ್ಯ ಸಂಪಾದನೆ. ಧಾರವಾಡದ ವೈದ್ಯರು ಗೌರಿಯನ್ನು ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ ಎಂದು ಸೂಚಿಸಿದರು.
ಅಘಾತದ ನಡುವೆ ಅಘಾತಕ್ಕೆ ಸಿಲುಕಿಕೊಂಡ ಅನಿಲ್ ನಾಯ್ಕ ಅವರು ಹೇಗಾದರೂ ಮಾಡಿ ಗೌರಿಯನ್ನು ಬದುಕಿಸಬೇಕೆಂದು ಬಯಸಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಅವರ ಬಳಿ ಪುಡಿಗಾಸು ಇಲ್ಲ. ಮಗಳು ಬದುಕಬೇಕಾದರೇ ತ್ವರಿತಗತಿಯ ಚಿಕಿತ್ಸೆ ಅಗತ್ಯ. ಆದರೇನೂ ಹಣ ಅವರ ಬಳಿಯಿಲ್ಲ. ಅವರಿವರ ಬಳಿ ಸಾಲ ಕೇಳೋಣ ಎಂದರೆ ಮಗಳನ್ನು ಆಸ್ಪತ್ರೆಯಿಂದ ಬಿಟ್ಟು ಬರಲಾಗದ ಸ್ಥಿತಿ. ಒಂದು ವೇಳೆ ಸಾಲ ಕೇಳಲೆಂದೆ ದಾಂಡೇಲಿಗೆ ಬಂದರೂ ಅವರ ಆರ್ಥಿಕ ದುಸ್ಥಿತಿಯನ್ನು ಕಂಡು ಸಾಲ ಕೊಡುವವರು ಯಾರು ಇಲ್ಲ. ಆದರೂ ನಾಳೆಯ ಕನಸನ್ನೇರಿ ಮಗಳನ್ನು ಬದುಕಿಸಲು ಹೆಣಗಾಡುತ್ತಿದ್ದಾರೆ.
ದಾನಿಗಳ ಸಹಾಯ ಬೇಕಾಗಿದೆ. ಇದ್ದವರು ಸಾವಿರ ಕೊಡಿ, ಇಲ್ಲದವರು ಕನಿಷ್ಟ ನೂರು ರೂ ಆದರೂ ಕೊಡಿ. ಅದು ಇಲ್ಲ ಹತ್ತಾರು ಸಾವಿರ ಜನವಾದರೂ ಹತ್ತು ಹತ್ತತ್ತು ರೂಪಾಯಿಯಾದರೂ ಈ ಮಗುವಿನ ಜೀವ ಉಳಿಸಲು ದಾನ ಮಾಡಿ ಪ್ರಾಣ ಬಿಕ್ಷೆ ಕೊಡಬೇಕೆಂಬುವುದೆ ನನ್ನ ಪ್ರಾರ್ಥನೆ.
ಒಂದು ವೇಳೆ ಮಗಳು ಗೌರಿಯ ಚಿಕಿತ್ಸೆಗೆ ಹಣ ಹೊಂದಿಸಿಕೊಳ್ಳಲಾಗದಿದ್ದರೇ ಆಕೆಯ ತಂದೆ, ತಾಯಿ ಮತ್ತು 9 ವರ್ಷದ ತಮ್ಮ ಕೊರಗಿ ಕೊರಗಿ ಜೀವಂತ ಶವವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಬಂಧುಗಳೆ, ನಾವು ಅದಕ್ಕೆ, ಇದಕ್ಕೆಂದೂ ಬಹಳಷ್ಟು ಖರ್ಚು ಮಾಡ್ತೇವೆ. ಅವೆಲ್ಲವುಗಳನ್ನು ಬದಿಗಿಟ್ಟು ನಮ್ಮ ಕಣ್ಣ ಮುಂದೆ ಕುಣಿದಾಡುತ್ತಿದ್ದ, ಆಟವಾಡುತ್ತಿದ್ದ ಏನು ಅರಿಯದ ಮುಗ್ದ ಕಂದಮ್ಮನಿಗೆ ಪ್ರಾಣಬಿಕ್ಷೆ ನೀಡಿ, ಅವಳ ಆರೋಗ್ಯವಂತ ಬದುಕಿಗೆ ಪ್ರಾರ್ಥಿಸೋಣ.
ಪುಟ್ಟ ಬಾಲಕಿ ಗೌರಿ ಈ ಲೋಕದಲ್ಲಿ ಜೀವಂತವಾಗಿರಬೇಕೆಂಬ ಗುರಿ ಮತ್ತು ಪ್ರಾರ್ಥನೆ ನಮ್ಮ ನಿಮ್ಮೆಲ್ಲರದ್ದಾಗಲಿ.
ಗೌರಿಯನ್ನು ಉಳಿಸುವುದಕ್ಕಾಗಿ ಈ ಕೆಳಗೆ ತಿಳಿಸಿದ ಉಳಿತಾಯ ಖಾತೆಗೆ ತಡವರಿಯದೆ ಧನ ಸಹಾಯ ಮಾಡಿ, ಅವಳನ್ನು ಬಾಳಿ ಬದುಕೊಸೋಣ ಬನ್ನಿ.
ಗೌರಿಯನ್ನು ಉಳಿಸಬೇಕಾದರೇ ನೀವು ಧನ ಸಹಾಯ ಮಾಡಬೇಕಾದ ಉಳಿತಾಯ ಖಾತೆಯ ವಿವರ:
ಅನಿಲ ನಾಯ್ಕ,
ಉಳಿತಾಯ ಖಾತೆ ಸಂಖ್ಯೆ: S.B A/C No: 03072200154546
ಸಿಂಡಿಕೇಟ್ ಬ್ಯಾಂಕ್, ದಾಂಡೇಲಿ.
IFSC Code: SYNB0000307
Micr Code: 581025502
Branch Code: 0307
ಗೌರಿಯ ತಂದೆ ಅನಿಲ ನಾಯ್ಕ ಅವರ ಮೊಬೈಲ್ ನಂ: 9483579144, 9632613691
ಒಂದು ವೇಳೆ ಅನಿಲ ನಾಯ್ಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಲ್ಲಿ -9482521189, 9945394602 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಆದರೆ ದಯವಿಟ್ಟು ತಡಮಾಡಬೇಡಿ, ಒಂದೊಂದು ನಿಮಿಷವು ಅವಳ ಜೀವ ಉಳಿಸಲು ಮುಖ್ಯವಾಗಿದೆ. ಕೈಮುಗಿದು ಬೇಡುವೆ ಸಾಯಲು ಹೊರಟ ಗೌರಿಯನ್ನು ಉಳಿಸೋಣ ಬನ್ನಿ,
ನಿಮ್ಮವ
ಸಂದೇಶ್.ಎಸ್.ಜೈನ್



No comments:
Post a Comment