ದಾಂಡೇಲಿಗೆ ಹೆಮ್ಮೆ ತಂದ ಬಾಲಕನ ಅಪ್ರತಿಮ ಸಾಧನೆಗೆ ಆಶೀರ್ವದಿಸಿ
ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ದಾಂಡೇಲಿಯ ಪಂಚಮ್ ಸುನೀಲ ಶೇಜವಾಡಕರ
ದಾಂಡೇಲಿ : ನಗರದ ಪ್ರತಿಭಾವಂತ ಕರಾಟೆ ಪಟು ಹಾಗೂ ಸ್ಥಳೀಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಪಂಚಮ್ ಸುನೀಲ ಶೇಜವಾಡಕರ ಈತನು ಇತ್ತೀಚೆಗೆ ಕಾರವಾರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಟಾ (ಆಕ್ಷನ್) ಹಾಗೂ ಕಮಿಟೆ (ಫೈಟಿಂಗ್) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ನಗರಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಈತನೂ ಈ ಹಿಂದೆಯು ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಬಾಗವಹಿಸಿ ಗಮನಾರ್ಹ ಸಾಧನೆ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ನಗರದ ಕೆನರಾ ಬ್ಯಾಂಕ್ ಅಧಿಕಾರಿ ಸುನೀಲ ಶೇಜವಾಡಕರ ಹಾಗೂ ವಂದಿನಿ ಶೇಜವಾಡಕರ ದಂಪತಿಗಳ ಪುತ್ರನಾಗಿರುವ ಈತ ನಗರದ ಹಿರಿಯ ಕರಾಟೆ ತರಬೇತುದಾರ ಲಕ್ಷ್ಮಣ ಹುಲಸ್ವಾರ ಅವರಿಂದ ತರಬೇತಿ ಪಡೆದು, ಇದೀಗ ನಗರದ ಕರಾಟೆ ಶೈನಿಂಗ್ ಸ್ಟಾರ್ಸ್ ಇಲ್ಲಿನ ಕರಾಟೆ ತರಬೇತುದಾರ ಸಾಗರ ಜಾಧವ್ ಅವರ ಶಿಷ್ಯನಾಗಿರುತ್ತಾನೆ. ಮೊಮ್ಮಗನ ಸಾಧನೆಗೆ ಹಿರಿಯ ನಾಟಕ ಕಲಾವಿದರೂ ಹಾಗೂ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು ಆಗಿರುವ ಗಣಪತಿ ಶೇಜವಾಡಕರ ಹಾಗೂ ಮಂದಾ ಶೇಜವಾಡಕರ ಅವರುಗಳು ಹರ್ಷಿತರಾಗಿದ್ದಾರೆ. ಮೊಮ್ಮಗನ ಸಾಧನೆಗೆ ಅಜ್ಜ ನೀಡುತ್ತಿರುವ ಬೆಂಬಲವನ್ನಂತು ಶ್ಲಾಘಿಸಲೆಬೇಕು. ಪಂಚಮನ ತಂದೆ ಸುನೀಲ ಶೇಜವಾಡಕರ ಅವರು ಪಾರ್ಶವಾಯುವಿಗೆ ತುತ್ತಾದರೂ ಮಗನ ಸಾಧನೆಗೆಂದು ಅಡ್ಡಿಯಾಗದೇ ಪ್ರೋತ್ಸಾಹಿಸುತ್ತಿರುವುದು ಮಾದರಿ ಮತ್ತು ಅಭಿನಂದನೀಯ.
ಪಂಚಮ್ ಶೇಜವಾಡಕರನ ಸಾಧನೆಗೆ ಕರಾಟೆ ಗುರುಗಳು, ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢ ಶಾಲೆಯ ಶಿಕ್ಷಕ ವೃಂದದವರು, ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಬೆಳೆಯುತ್ತಿರುವ ಪ್ರತಿಭೆ ಪಂಚಮ್ ದಾಂಡೇಲಿಗೆ ಆಸ್ತಿಯಾಗುವತ್ತಾ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾನೆ. ಅವನ ಪರಿಶ್ರಮಕ್ಕೆ ನಿಮ್ಮೆಲ್ಲರ ಅಕ್ಕರೆಯ ಆಶೀರ್ವಾದವಿರಲೆಂಬ ಪ್ರಾರ್ಥನೆ ನನ್ನದು.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment