Monday, January 28, 2019

ಜನ್ಮದಿನದ ಸಂಭ್ರಮದಲ್ಲಿ ಯಶಸ್ವಿ ಸ್ವಾವಲಂಬಿ ಯುವಕ ದಾನಂ
ಅನ್ನಮ್ಮ ಸೌಂಡ್ಸ್ ಸಿಸ್ಟಂ ಮೂಲಕ ಜನಖ್ಯಾತಿಗಳಿಸಿದ ಹೆಮ್ಮೆಯ ಯುವಕ ದಾನಂ

 ಅವನು ಕೃಷ್ಣ ಸುಂದರ. ಸದಾ ಮುಗುಳ್ನಗೆ, ಪಾದರಸದಂತೆ ಕ್ರಿಯಾಶೀಲ ಯುವಕನಾತ. ಸಿಟ್ಟು ಮಾಡುವ ಮನಸ್ಸಿನವನಲ್ಲ. ಶಾಂತಿಯನ್ನೆ ಮೈಗೂಡಿಸಿಕೊಂಡು ಅರಳಿದ ಸರಳ ಸಹೃದಯಿ ಯುವಮಿತ್ರ. ಶ್ರೀಮಂತಿಕೆಯ ಕುಟುಂಬದಲ್ಲೂ ಜನ್ಮವೆತ್ತದಿದ್ದರೂ ಹೃದಯಶ್ರೀಮಂತಿಕೆಯ ಮೂಲಕ ಎಲ್ಲರ ಮನಸ್ಸು ಗೆದ್ದ ತಾಳ್ಮೆಯ ಯುವಕನಾತ. ಅವನು ಬೇರೆ ಯಾರು ಅಲ್ಲ. ದಾಂಡೇಲಿಯ ಮನೆ ಮನೆಗೆ ಪರಿಚಯವಿರುವ ಅನ್ನಮ್ಮ ಸೌಂಡ್ಸ್ ಸಿಸ್ಟಂ  ಎಂಬ ವ್ಯವಹಾರದ ಮಾಲಕ ನಮ್ಮುಡುಗ ದಾನಂ ಪಲ್ಲಪಾಟಿ.

ಇಂದವನಿಗೆ ಜನ್ಮದಿನದ ಸಂಭ್ರಮ. ಪುಲ್ ಎಂಜಾಯಮೆಂಟಿನಲ್ಲಿರುವ ನಮ್ಮ ಹುಡುಗನಿಗೆ ಪದಗಳ ರೂಪದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರದಿದ್ದರೇ ಹೇಗೆ ತಾನೆ?. ಸಂಕಷ್ಟದಲ್ಲಿದ್ದವರಿಗೆ ಹಿಂದೆ ಮುಂದೆ ನೋಡದೆ ದಾನ ಮಾಡುವ ಗುಣ ಸಂಪನ್ನ ನಮ್ಮೂರ ಚೆಲುವ ಯುವಕ ದಾನಂ ಪಲ್ಲಪಾಟಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಅಂದ ಹಾಗೆ ದಾನಂ ನಮ್ಮ ಮಾರುತಿ ನಿಗರದ ನಿವಾಸಿ. ಕಳೆದ 40 ವರ್ಷಗಳಿಂದ ನಗರದಲ್ಲಿ ವಿವಿದೆಡೆ ನಡೆಯುವ ಖಾಸಗಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಮಧುರವಾದ ಸೌಂಡ್ಸ್ ಸಿಸ್ಟಂ ಹಚ್ಚುತ್ತಿದ್ದ ದಾನಂ ಸೌಂಡ್ ಸಿಸ್ಟಂ ಮಾಲಕರಾಗಿದ್ದ ಯೇಸು ಪ್ರಕಾಶ ಹಾಗೂ ಮೇರಿ ದಂಪತಿಗಳ ಜೇಷ್ಟಪುತ್ರ ಈ ನಮ್ಮ ದಾನಂ. ದಾನಂನಿಗೆ ಸ್ಟಿಪನ್, ಪ್ರಕಾಶ, ಅಣ್ಣು ಎಂಬ ಮೂವರು ತಮ್ಮಂದಿರರು ಕೊನೆಯದಾಗಿ ಗ್ರೇಸಿ ಎಂಬ ಮುದ್ದಿನ ತಂಗಿ ಇದ್ದಾರೆ. ಒಟ್ಟಿನಲ್ಲಿ ಹೇಳುವುದಾದರೇ ಸುಸಂಸ್ಕೃತ ಕುಟುಂಬದಲ್ಲಿ ಜನ್ಮವೆತ್ತ ಹೆಮ್ಮೆಯ ಕುವರ ಈ ನಮ್ಮ ದಾನಂ ಎಂದು ಹೇಳಬಹುದು.

ನಮ್ಮ ದಾನಂ ತನ್ನ ಪ್ರಾಥಮಿಕ ಶಿಕ್ಷಣವನ್ನು ದಾಂಡೇಲಿಯ ರೋಟರಿ ಶಾಲೆಯಲ್ಲಿ ಪಡೆದು, ಮುಂದೆ ಜೆವಿಡಿಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದನು. ಅದಾದ ಬಳಿಕ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿ, ಮತ್ತೇ ಅದೇ ಸಂಸ್ಥೆಯ ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೊರೈಸಿದನು.

ಎಳೆಯ ಬಾಲಕನಿರುವಾಗ್ಲೆ ಚುರುಕಿನ ಬಾಲಕನಾಗಿದ್ದ ನಮ್ಮ ದಾನಂ ತನ್ನ 5 ನೇ ತರಗತಿಯಲ್ಲಿರುವಾಗ್ಲೆ ಅಪ್ಪನ ಸೌಂಡ್ಸ್ ಸಿಸ್ಟಂ ಎಲ್ಲಿ ಬಾಡಿಗೆಗೆ ಹೋದರೂ ನಿರ್ವಹಣೆಯ ಹೊಣೆಯನ್ನು ಹೊತ್ತುಕೊಂಡು ಅಪ್ಪನ ಅಪ್ಪುಗೆಯ ಪ್ರೀತಿಗೆ ಪಾತ್ರನಾಗಿದ್ದ. ಹೈಸ್ಕೂಲ್ ವಿದ್ಯಾರ್ಥಿಯಾಗುತ್ತಿದ್ದಂತೆಯೆ ಪ್ರೊಪೆಷನಲ್ ಬ್ಯುಜಿನೆಸ್ ಮ್ಯಾನ್ ಆಗಿ ರೂಪುಗೊಂಡ ದಾನಂ ನ ವ್ಯವಹಾರ ಪ್ರಜ್ಞೆ ಮತ್ತು ಬುದ್ದಿವಂತಿಕೆಯನ್ನು ಮೆಚ್ಚಲೆಬೇಕು.

ಅಪ್ಪ ಮಗ ಯಾವತ್ತು ಅಪ್ಪ ಮಗನ ರೀತಿಯಲ್ಲಿರದೇ ಒಳ್ಳೆಯ ಗೆಳೆಯರಂತೆ ಸೌಂಡ್ ಸಿಸ್ಟಂ ವ್ಯವಹಾರವನ್ನು ಮುನ್ನಡೆಸಿಕೊಂಡ ರೀತಿಗೆ ಬಿಗ್ ಸೆಲ್ಯೂಟ್ ಹೇಳಲೆಬೇಕು. ಅಪ್ಪ ಯೇಸು ಪ್ರಕಾಶ ಅವರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಲೆ ಹವ್ಯಾಸಕ್ಕಾಗಿ ಆರಂಭಿಸಿದ ಈ ಸೌಂಡ್ ಸಿಸ್ಟಂ ಉದ್ಯಮ ಖ್ಯಾತಿಗೊಳ್ಳುವಲ್ಲಿ ಬಾಲಕ ದಾನಂನ ಶ್ರಮ ಸಾಧನೆ ಪ್ರಮುಖ ಕಾರಣ ಎಂದರೇ ಅತಿಶಯೋಕ್ತಿ ಎನಿಸದು. ಹತ್ತನೆ ತರಗತಿ ಓದುತ್ತಿರುವಾಗ್ಲೆ ಸೌಂಡ್ ಸಿಸ್ಟಂ ನ್ನು ದುರಸ್ತಿ ಮಾಡುವುದನ್ನು ಕರಗತ ಮಾಡಿಕೊಂಡ ದಾನಂ ಮುಂದೊಂದು ದಿನ ಈ ಕಾಯಕದಲ್ಲಿ ಹೆಸರನ್ನು ಗಳಿಸುತ್ತಾನೆಂಬ ಅವನಪ್ಪನ ಕನಸು ಸಾಕಾರಗೊಳ್ಳುವಲ್ಲಿ ದಾನಂ ಯಶಸ್ವಿಯಾಗಿದ್ದಾನೆ.

ವ್ಯವಹಾರಕ್ಕೆ ಸಹಕರಿಸುತ್ತಾ, ಉತ್ತಮ ಅಂಕಗಳೊಂದಿಗೆ ಪದವಿ ಮುಗಿಸಿದ ದಾನಂಗೆ ಅರ್ಹವಾಗಿ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ಉದ್ಯೋಗವು ಪ್ರಾಪ್ತಿಯಾಯಿತು. ಕಳೆದ 7 ವರ್ಷಗಳಿಂದ ನೌಕರಿಯನ್ನು ಮಾಡುವುದರ ಮೂಲಕ ಕಾಗದ ಕಾರ್ಖಾನೆಯ ಮೇಲಾಧಿಕಾರಿಗಳ ಪ್ರೀತಿಗೆ ಪಾತ್ರನಾದ ಧನ್ಯತೆ ನಮ್ಮ ದಾನಂನಿಗಿದೆ. ಪರಿಣಾಮವಾಗಿ ನೌಕರಿಯಲ್ಲಿಯೂ ಕಾಯಂಗೊಂಡು ಸುಂದರ ಬದುಕಿನೆಡೆಗೆ ಉಜ್ವಲ ಪಯಾಣ ಬೆಳೆಸಿದ ಸಂಭ್ರಮ ನನ್ನ ದಾನಂ ಹೊಂದಿರುವುದು ನನಗೆ ಅತೀವ ಸಂತಸ ತಂದಿದೆ.

ವೃತ್ತಿ ಬದುಕಿನ ಜೊತೆಗೆ ತಂದೆಯವರ ಅನ್ನಂ ಸೌಂಡ್ಸ್ ಸಿಸ್ಟಂನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡ ದಾನಂ ಮೊದಲು ಮಾಡಿದ್ದು ಹಳೆಯ ಸಿಸ್ಟಂನ್ನು ಡಿಲಿಟ್ ಮಾಡಿ ಹೊಚ್ಚ ಹೊಸ ಸೌಂಡ್ ಸಿಸ್ಟಂನ್ನು ಸಾಲ ಮಾಡಿ ಖರೀದಿಸಿದ. ದಾಂಡೇಲಿಯ ಜನತೆಯ ಬೇಡಿಕೆಗೆ ಅನುಗುಣವಾಗಿ ಮತ್ತು ಇಂದಿನ ಮಾರುಕಟ್ಟೆಗೆ ಉಪಯುಕ್ತ ಎನಿಸುವ ಅತ್ಯುತ್ತಮ ಸೌಂಡ್ ಸಿಸ್ಟಮ್ಸ್ ಗಳನ್ನು ಖರೀದಿಸಿ, ಅಚ್ಚುಕಟ್ಟಾಗಿ ಜೋಡಿಸಿ ಒಬ್ಬ ಸಮರ್ಥ ಮತ್ತು ಅನುಭವಿ ಸೌಂಡ್ ಸಿಸ್ಟಂನ ಮಾಲೀಕನಾಗಿರುವುದು ದಾನಂನ ಶ್ರಮ ಸಾಧನೆ ಮತ್ತು ನಿರಂತರವಾದ ಪ್ರಯತ್ನಕ್ಕೆ ಫಲಿಸಿದ ಫಲ ಎಂದೆ ಹೇಳಬಹುದು.

ಜನಪ್ರೀತಿಗಳಿಸಿದ ಅನ್ನಮ್ಮ ಸಿಸ್ಟಂ:


ಅತ್ಯುತ್ತಮ ಸಂವಹನ ಕಲೆ, ಶಿಸ್ತು, ಪ್ರಾಮಾಣಿಕ ಸೇವೆ, ಕಾರ್ಯದಕ್ಷತೆ ಮತ್ತು ಗುಣಮಟ್ಟದ ಸೇವೆಯ ಮೂಲಕ ಅನ್ನಮ್ಮ ಸೌಂಡ್ ಸಿಸ್ಟಂ ದಾಂಡೇಲಿಗರ ಮನಗೆದ್ದಿದೆ. ದಾಂಡೇಲಿಯ ಬಹುತೇಕ ಕಾರ್ಯಕ್ರಮಗಳಿಗೆ ಸುಯೋಗ್ಯ ಸಿಸ್ಟಂನ್ನು ಒದಗಿಸಿ ಎಲ್ಲರಿಂದ ಭೇಷ್ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಚೌತಿ ಸಂದರ್ಭದಲ್ಲಿ ಅನ್ನಮ್ಮ ಸೌಂಡ್ ಸಿಸ್ಟಂನ ಸೌಂಡ್ ಕೇಳಲು ಬರುವ ಜನರ ಸಂಖ್ಯೆಗೆ ಲೆಕ್ಕವಿಲ್ಲ. ನೀವು ಇದರಲ್ಲೆ ಅನ್ನಮ್ಮ ಸೌಂಡ್ ಸಿಸ್ಟಂನ ಕ್ವಾಲಿಟಿ ಮತ್ತು ಸೇವೆಯನ್ನು ಲೆಕ್ಕ ಹಾಕಿಕೊಳ್ಳಬಹುದು.

ದಾನಂ ಯಜಮಾನ ಪಿಲ್ಮಿನ ಹಿರೋ ಇದ್ದಂತೆ:
ದಾನಂನನ್ನು ನೋಡಿದಾಗ ಕನ್ನಡ ಚಿತ್ರರಂಗದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಯಜಮಾನ ಚಲನ ಚಿತ್ರ ನೆನಪಾಗುತ್ತೆ. ಅಲ್ಲಿ ನಾಯಕ ನಟ ವಿಷ್ಣುವರ್ದನ್ ಅವರು ತಮ್ಮಂದಿರರನ್ನು ಅಕ್ಕರೆ, ಅಭಿಮಾನದಿಂದ ನೋಡುವ ಮತ್ತು ಬೆಳೆಸುವ ಪರಿಯಂತೆ ನಮ್ಮ ದಾನಂ ಆತನ ತಮ್ಮಂದಿರರ ಜೊತೆ ಇರುವುದು ನನಗೆ ಸದಾ ನೆನಪಿಗೆ ಬರುತ್ತದೆ. ತಮ್ಮಂದಿರರ ಮತ್ತು ತಂಗಿಯ ಬೇಕುಬೇಡಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ದಾನಂನ ಸಹೋದರತ್ಬದ ಪ್ರೇಮಾಗುಣ ಮತ್ತು ಸಾಂಸಾರಿಕ ದಕ್ಷತೆ ಶ್ಲಾಘನೀಯ. ತಮ್ಮಂದಿರರು ಕೂಡಾ ಅಷ್ಟೆ ಅಣ್ಣ ದಾನಂ ಹಾಕಿದ ಗೆರೆಯನ್ನು ದಾಟದೇ ಅನ್ನಮ್ಮ ಸೌಂಡ್ ಸಿಸ್ಟಂನ ಪುರೋ ಅಭಿವೃದ್ಧಿಗಾಗಿ ಹೆಗಲಿಗೆ ಹೆಗಲು ಕೊಟ್ಟು ಬೆವರು ಸುರಿಸುತ್ತಿದ್ದಾರೆ.

ಜೀವನದಲ್ಲಿ ಉದ್ಯಮ ಹಾಗೂ ವೃತ್ತಿ ಬದುಕಿನ ಮೂಲಕ ಯಶಸ್ಸನ್ನು ಕಂಡ ದಾನಂ ಸಾಕಷ್ಟು ಬಡವರ ಮನೆಯ ಮಕ್ಕಳ ಮದುವೆಗೆ ಸಹಾಯ ಮಾಡಿರುವುದನ್ನು ಮರೆಯುವಂತಿಲ್ಲ. ಕಷ್ಟದಲ್ಲಿದ್ದವರಿಗೆ ಸ್ಪಂದಿಸುವುದರ ಮೂಲಕ ಮಾನವೀಯತೆಯ ಸಕಾರಮೂರ್ತಿಯಂತಿರುವ ದಾನಂನ ಜೀವನ ಯಶಸ್ಸಿಗೆ ಅವನ ಅಪ್ಪ ಮತ್ತು ಅಮ್ಮನ ಆಶೀರ್ವಾದ, ಸಹೋದರರ ಮತ್ತು ಸಹೋದರಿಯ ಪ್ರೀತಿ ವಾತ್ಸಲ್ಯ, ಪ್ರೀತಿಸಿ, ಮುದ್ದಿಸಿ ಕೈಹಿಡಿದ ಪತ್ನಿ ದೀಪಾ ಅವರ ಹೃದಯಪೂರ್ವಕ ಸಹಕಾರ, ಬಂಧುಗಳ, ಗೆಳೆಯರ ಪ್ರೀತಿ, ಪ್ರೋತ್ಸಾಹವು ಪ್ರಮುಖ ಕಾರಣವಾಗಿದೆ. ಮುಂದಿನ ವರ್ಷದ ಜನ್ಮದಿನದ ಸಂಭ್ರಮದಲ್ಲಿ ಕೈಯೊಲ್ಲೊಂದು ಹಸುಗೂಸು ಇರಲೆಂಬ ಶುಭ ನುಡಿಯೊಂದಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಲವ್ಲಿ ತಮ್ಮ ದಾನಂ.

ನಿಮ್ಮವ

ಸಂದೇಶ್.ಎಸ್.ಜೈನ್


 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...