ದಾಂಡೇಲಿಗರ ಮನಸ್ಸುಗೆದ್ದ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ?
ವರ್ಗಾವಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಜನತೆ

ದಾಂಡೇಲಿ : ನೂತನವಾಗಿ ಅಸ್ವಿತ್ವಕ್ಕೆ ಬಂದ ದಾಂಡೇಲಿ ತಾಲೂಕು ಘೋಷಣೆಯಾಗುವ ಮುಂಚೆಯೆ ವಿಶೇಷ ತಹಶೀಲ್ದಾರ್ ಆಗಿ ಅಧಿಕಾರಿ ವಹಿಸಿಕೊಂಡು, ಒಂದೆ ತಿಂಗಳೊಳಗೆ ಉದಯಿಸಿದ ದಾಂಡೇಲಿ ತಾಲೂಕಿಗೆ ಪ್ರಪ್ರಥಮ ವಿಶೇಷ ತಹಶೀಲ್ದಾರ್ ಆಗಿ ಎರಡೇ ವರ್ಷದಲ್ಲಿ ತನ್ನ ಕ್ರಿಯಾಶೀಲ ಕಾರ್ಯವೈಖರಿ ಮತ್ತು ದಕ್ಷತೆಯಿಂದ ದಾಂಡೇಲಿಗರ ಮನಗೆದ್ದ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರಿಗೆ ಇದೀಗ ವರ್ಗಾವಣೆಯಾಗುತ್ತಿರುವುದು ದಾಂಡೇಲಿ ಜನತೆಯ ಆಕ್ರೋಶಕ್ಕೆ ಕಾರಣವಾಗುತ್ತಿದೆ.
2017 ರ ಫೆಬ್ರವರಿ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಶೈಲೇಶ ಪರಮಾನಂದ ಅವರು ಅಧಿಕಾರ ವಹಿಸಿ, ಒಂದೆ ತಿಂಗಳೊಳಗೆ ಅಂದರೆ ಮಾರ್ಚ್ 2017 ರಂದು ಅಧಿಕೃತವಾಗಿ ದಾಂಡೇಲಿ ತಾಲೂಕು ಘೋಷಣೆಯಾಗಿತ್ತು. ದಾಂಡೇಲಿ ತಾಲೂಕು ಘೋಷಣೆಯಾದ ಬಳಿಕ ಒಂದು ತಾಲೂಕಿಗೆ ಬೇಕಾದ ಭೌಗೋಳಿಕ ವ್ಯಾಪ್ತಿ, ನೀಲಾ ನಕಾಶೆಯನ್ನು ಅತ್ಯಂತ ತ್ವರಿತಗತಿಯಲ್ಲಿ ಸಿದ್ದಪಡಿಸಿ, ಸರಕಾರಕ್ಕೆ ಕಳುಹಿಸುವುದರ ಮೂಲಕ ದಾಂಡೇಲಿ ತಾಲೂಕು ರಚನೆಗಾಗಿ ತನ್ನದೇ ಆದ ರೀತಿಯಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸಿ ಗಮನ ಸೆಳೆದಿದ್ದರು.
ಅಂದಿನ ಹಾಗೂ ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ವೇಗದ ನಡಿಗೆಯ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಸಚಿವರಾದಿಯಾಗಿ ಜನಪ್ರತಿನಿಧಿಗಳ ಹಾಗೂ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದವರು ಇದೇ ಶೈಲೇಶ ಪರಮಾನಂದ ಅವರು.
ದಾಂಡೇಲಿ ನಗರ ಸಭೆಯ ಆವರಣದಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ವಿಶೇಷ ತಹಶೀಲ್ದಾರ್ ಕಾರ್ಯಾಲಯ ಸ್ಥಳಾಂತರಗೊಂಡು, ವಿಶೇಷ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಾವಳಿಯಂತಿದ್ದ ಏಜೆಂಟ್ ಹಾವಳಿಗೆ ಬ್ರೇಕ್ ಹಾಕುವುದರ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಶೈಲೇಶ ಪರಮಾನಂದ ಅವರು ಪಾತ್ರರಾಗಿದ್ದರು.
ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲಲ್ಲಿ ನಡೆಯುತ್ತಿದ್ದ ಅತಿಕ್ರಮಣವನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಹೊತ್ತು ಅತಿಕ್ರಮಣದಾರರಲ್ಲಿ ನಡುಕ ಹುಟ್ಟಿಸಿದ್ದ ಶೈಲೇಶ ಅವರ ಕಾರ್ಯಾಚರಣೆ ಮೇಲಾಧಿಕಾರಿಗಳ ಗಮನ ಸೆಳೆದಿತ್ತು. ಹಾಲಮಡ್ಡಿ ಶ್ರೀ.ದಾಂಡೇಲಪ್ಪ ದೇವಸ್ಥಾನದ ಬಳಿ ಒತ್ತುವರಿ ಮಾಡಲಾಗಿದ್ದ ಬಾಳೆ ತೋಟವನ್ನು ತೆರವುಗೊಳಿಸಿದ ಸಾಹಸಮಯ ಕಾರ್ಯವನ್ನು ಶೈಲೇಶ ಪರಮಾನಂದ ಅವರು ಮಾಡಿ ಮುಗಿಸಿ ಭೇಷ್ ಎನಿಸಿಕೊಂಡಿದ್ದರು. ದಾಂಡೇಲಿ ನಗರದಲ್ಲಿ ನೂತನ ನಾಡ ಕಚೇರಿ ನಿರ್ಮಾಣ ಕಾರ್ಯದ ವಿಚಾರದಲ್ಲೂ ಸಚಿವ ದೇಶಪಾಂಡೆಯವರ ಆದೇಶದಂತೆ ತ್ವರಿತಗತಿಯಲ್ಲಿ ಅದಕ್ಕೆ ಬೇಕಾದ ದಾಖಲಾತಿಗಳನ್ನು ಮತ್ತು ಪ್ರಸ್ತಾವಣೆಯನ್ನು ಕಳುಹಿಸಿರುವುದಲ್ಲದೇ, ಟ್ರಕ್ ಟರ್ಮಿನಲ್ ಕೇಂದ್ರಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಹಾಗೂ ಪ್ರಸ್ತಾವಣೆಯನ್ನು ಸಹ ಸಚಿವ ದೇಶಪಾಂಡೆಯವರ ವೇಗಕ್ಕೆ ಅನುಗುಣವಾಗಿ ಮಾಡುವುದರ ಮೂಲಕ ಸಚಿವರ ಅತ್ಯಂತ ನಂಬಿಕೆಯ ಅಧಿಕಾರಿಯಾಗಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ನೂತನ ದಾಂಡೇಲಿ ತಾಲೂಕಿಗೆ ಮಂಜೂರಾದ ಮಿನಿ ವಿಧಾನಸೌಧ ಹಾಗೂ ವಿವಿಧ ಕಚೇರಿಗಳ ಬಗ್ಗೆಯೂ ಸಚಿವರು ಹಾಗೂ ಮೇಲಾಧಿಕಾರಿಗಳ ಆದೇಶಕ್ಕೆ ತಕ್ಕಂತೆ ತ್ವರಿತಗತಿಯಲ್ಲಿ ಸ್ಪಂದಿಸಿ, ದಾಂಡೇಲಿ ತಾಲೂಕು ಶೀಘ್ರದಲ್ಲೆ ಸಕಲ ವ್ಯವಸ್ಥೆಯೊಂದಿಗೆ ಕಾರ್ಯಾರಂಭಿಸಬೇಕೆಂಬ ಉತ್ಕಟ ಬಯಕೆಯನ್ನು ಹೊತ್ತಿ ಶೈಲೇಶ ಪರಮಾನಂದ ಅವರು ಕಾರ್ಯ ನಿರ್ವಹಿಸಿದ್ದರು. ಅಭಿವೃದ್ಧಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ಸರ್ವೆ ಕಾರ್ಯಗಳಾದ ರೈಲ್ವೆ ಸರ್ವೆ, ಅತಿಕ್ರಮಣ ಸರ್ವೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ ಶ್ರೇಯಸ್ಸು ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರಿಗೆ ಸಲ್ಲುತ್ತದೆ.
ಜನಮುಖಿ ಅಧಿಕಾರಿ :
ತನ್ನ ಕರ್ತವ್ಯದಲ್ಲೆಂದು ಸೊಕ್ಕು, ಅಹಂನ್ನು ಪ್ರದರ್ಶಿಸದೇ, ಜನಮುಖಿಯಾಗಿ, ಸಮಾಜಮುಖಿಯಾಗಿ ಹಾಗೂ ಜನಸಾಮಾನ್ಯರ ನಲ್ಮೆಯ ಅಧಿಕಾರಿಯಾಗಿ ಗಮನ ಸೆಳೆದಿದ್ದ ಶೈಲೇಶ ಪರಮಾನಂದ ಅವರು ಇದೀಗ ವರ್ಗಾವಣೆಗೊಳ್ಳುತ್ತಿರುವುದು ದಾಂಡೇಲಿ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರದ ಆದೇಶದ ಪ್ರಕಾರ ಗ್ರೇಡ್ 1 ದರ್ಜೆಯ ತಹಶೀಲ್ದಾರ್ ಆಗಿ ಸಯ್ಯದ ಜಾಹೇದ್ ಅಲಿಯವರನ್ನು ದಾಂಡೇಲಿಗೆ ವರ್ಗಾಯಿಸಲಾಗಿದೆ. ಪ್ರಸಕ್ತ ಇಲ್ಲಿ ಗ್ರೇಡ್ 2 ತಹಶೀಲ್ದಾರ್ ಹುದ್ದೆಗೆ ಅವಕಾಶವಿಲ್ಲವಾಗಿರುವುದರಿಂದ ಶೈಲೇಶ ಪರಮಾನಂದ ಅವರು ಇಲ್ಲಿಂದ ಬಿಡುಗಡೆಯಾಗಬೇಕಾಗುವುದು ಅನಿವಾರ್ಯವಾಗಿದೆ.
ಸಚಿವ ದೇಶಪಾಂಡೆಯವರು ಮನಸ್ಸು ಮಾಡಿದರೇ ವರ್ಗಾವಣೆ ತಡೆ ಸಾಧ್ಯ:
ಸಚಿವ ದೇಶಪಾಂಡೆಯವರು ಮನಸ್ಸು ಮಾಡಿದರೇ ಶೈಲೇಶ ಪರಮಾನಂದ ಅವರ ವರ್ಗಾವಣೆಯನ್ನು ತಡೆ ಹಿಡಿಯಲು ಸಾಧ್ಯವಿದೆ ಎಂಬ ಅಂಬೋಣ ನಾಗರೀಕರಲ್ಲಿದೆ. ಸಚಿವ ದೇಶಪಾಂಡೆಯವರು ಹಾಲಿಯಿರುವ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರನ್ನೆ ದಾಂಡೇಲಿಯ ತಹಶೀಲ್ದಾರರನ್ನಾಗಿ ಭಡ್ತಿಗೊಳಿಸಿ, ಇಲ್ಲೆ ಸೇವೆ ಮಾಡಲು ಅವಕಾಶ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ದಾಂಡೇಲಿಗರ ಮನಸ್ಸುಗೆದ್ದ ದಕ್ಷ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ಯಾಕೆ? ಎಂಬ ಪ್ರಶ್ನೆ ನಗರದಲ್ಲಿ ಚರ್ಚೆಯಲ್ಲಿದೆ.
ನಿಮ್ಮವ,
ಸಂದೇಶ್.ಎಸ್.ಜೈನ್

No comments:
Post a Comment