Friday, January 11, 2019

ಕೈ ಮುಗಿದು ಪ್ರಾರ್ಥಿಸುವೆ, ದಯವಿಟ್ಟು ಓದಿ, ಸಹಾಯ ಮಾಡಿ, ಬೆಳೆಯುತ್ತಿರುವ ಗೌರಿಯನ್ನು ಬದುಕಿಸೋಣ ಬನ್ನಿ
ಜೀವನದ ಏಣಿಕೆಯಲ್ಲಿ ಸಾವಿನ ಕುಣಿಕೆಯಲ್ಲಿರುವ ನಮ್ಮ ಗೌರಿ
ಲಕ್ಷ ಲಕ್ಷ ಸುರಿದರೇ ಗೌರಿ ಉಸಿರು ಭದ್ರ -ಇಲ್ಲವಾದಲ್ಲಿ ಛಿದ್ರ
ಎಲ್ಲರೂ ಮನಸ್ಸು ಮಾಡಿದರೇ ಏನು ಮಹಾ?



ನಮ್ಮ ಮುಂದೆ ಆಟವಾಡುತ್ತಿದ್ದ ಚೆಂದನೆಯ ಪುಟ್ಟ ಬಾಲೆ, ನಮ್ಮ ಕಣ್ಣ ಮುಂದೆ ಸಾಯಬಾರದು. ಬದುಕಿನ ಏಣಿಕೆಯಲ್ಲಿ ಸಾವಿನ ಕುಣಿಕೆಯಲ್ಲಿರುವ ಪುಟ್ಟ ಗೌರಿಯ ಹೃದಯ ವಿದ್ರಾವಕ ಘಟನೆಯಿದು. ಮೊದಲೆ ಆಕೆಯ ಅಪ್ಪ, ಅಮ್ಮ ಬಡತನದ ಕರಿನೆರಳಲ್ಲಿ ಜೀವಂತ ಶವವಾಗಿದ್ದಾರೆ. ಇನ್ನೂ ಅವರ ಮಾನಸಪುತ್ರಿ ಗೌರಿ ಅವರನ್ನು ಕೈ ಬಿಟ್ಟು ಹೋದರೇ ಅವರ ಸ್ಥಿತಿ ದುರಂತಮಯವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಬಂಧುಗಳೆ ನಿನ್ನೆಯಿಂದ ನಮ್ಮೂರಿನ ಹನ್ನೊಂದರ ಹರೆಯದ ಬಾಲಕಿ ಬ್ಲಡ್ ಕ್ಯಾನ್ಸರಿನಿಂದ ಬಳಲುತ್ತಿರುವ ಗೌರಿಯನ್ನು ಬದುಕಿಸೋಣ ಎಂದು ಪ್ರಾರ್ಥಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದೇನೆ. ಉತ್ತಮ ಸ್ಪಂದನೆ ದೊರೆತಿದೆ. ಇನ್ನೂ ಸಹಾಯ ಬೇಕಾಗಿದೆ. ಅನೇಕರು ಮುಂದೆ ಬಂದಿದ್ದಾರೆ. ಇನ್ನೂ ಬಹಳಷ್ಟು ಜನ ಮುದ್ದು ಕಂದಮ್ಮಳನ್ನು ಉಳಿಸಲು ಮುಂದೆ ಬರಬೇಕೆಂಬ ಉತ್ಕಟ ಬಯಕೆಯನ್ನು ಹೊತ್ತಿ ಬರೆಯುತ್ತಿದ್ದೇನೆ.

ಇಂದು ನನ್ನ ಜೀವದ ಗೆಳೆಯ ಯುವ ಉದ್ಯಮಿ ರಾಘವೇಂದ್ರ ಶೆಟ್ಟಿಯವರು ಬೆಳಗಾವಿಗೆ ಹೋಗಿ ಗೌರಿಯ ಆರೋಗ್ಯವನ್ನು ವಿಚಾರಿಸಿ ಬಂದಿದ್ದಾರೆ. ಅವರು ಸಾಕಷ್ಟು ಶ್ರಮವಹಿಸಿ ಗೌರಿಯನ್ನು ಉಳಿಸಲು ಹೆಣಗಾಡುತ್ತಿದ್ದಾರೆ. 70-80 ವರ್ಷ ಬಾಳಿ ಬದುಕಬೇಕಾದ ಗೌರಿ 11 ವರ್ಷಕ್ಕೆ ಇಹಲೋಕ ಸೇರಬಾರದು ಎಂಬ ಕಾಳಜಿ ನಮ್ಮದು.

ಈಗ ನಮ್ಮ ಗೌರಿ ಸಾವಿನ ಬಾಗಿಲ ಬಳಿ ನಿಂತಿದ್ದಾಳೆ. ನಾವು ನೀವೆಲ್ಲರೂ ಮನಸ್ಸು ಮಾಡಿದರೇ ಮತ್ತೆ ಅವಳನ್ನು ಸುಂದರ ಬದುಕಿನ ಅರಮನೆಯತ್ತ ತರಬಹುದಾಗಿದೆ. ಪ್ರಾಂಜಲ ಮನಸ್ಸಿನಿಂದ ತಮ್ಮೆಲ್ಲರ ಧನ ಸಹಾಯದ ಸಹಕಾರವಿರಲೆಂಬ ವಿನಮ್ರ ಪ್ರಾರ್ಥನೆ ನನ್ನದು.

ನಮ್ಮ ಮುದ್ದಾದ ಗೌರಿ, ಇಂದು ಆಸ್ಪತ್ರೆಯಲ್ಲಿ ಹೇಗಿದ್ದಾಳೆ ಎನ್ನುವ ಪೋಟೊವನ್ನು ನನ್ನ ಹೃದಯದ ಗೆಳೆಯ ರಾಘವೇಂದ್ರ ಶೆಟ್ಟಿಯವರು ನನಗೆ ವಾಟ್ಸಪ್ ಮಾಡಿದ್ದಾರೆ. ಅದರ ಜೊತೆಗೆ ಅವಳ ಮೆಡಿಕಲ್ ವರದಿಯನ್ನು ಕಳುಹಿಸಿದ್ದಾರೆ. ಅವೆಲ್ಲವುಗಳನ್ನು ಈ ಮೂಲಕ ಅಪ್ಲೋಡ್ ಮಾಡುತ್ತಿದ್ದೇನೆ.

ಮುದ್ದು ಗೌರಿಯನ್ನು ಆರೋಗ್ಯವಂತ ಗೌರಿಯನ್ನಾಗಿಸುವ ಶಪಥ ಮಾಡೋಣ. ನಮ್ಮೂರಿನ ಕಂದಮ್ಮಳಿಗೆ ಜೀವದಾಸರೆ ನೀಡೋಣ ಬನ್ನಿ.















ಗೌರಿಯನ್ನು ಉಳಿಸಬೇಕಾದರೇ ನೀವು ಧನ ಸಹಾಯ ಮಾಡಬೇಕಾದ ಉಳಿತಾಯ ಖಾತೆಯ ವಿವರ: 

ಅನಿಲ ನಾಯ್ಕ,

ಉಳಿತಾಯ ಖಾತೆ ಸಂಖ್ಯೆ: S.B A/C No: 03072200154546

ಸಿಂಡಿಕೇಟ್ ಬ್ಯಾಂಕ್, ದಾಂಡೇಲಿ.

IFSC Code: SYNB0000307
Micr Code: 581025502
Branch Code: 0307


ಗೌರಿಯ ತಂದೆ ಅನಿಲ ನಾಯ್ಕ ಅವರ ಮೊಬೈಲ್ ನಂ: 9483579144, 9632613691


ಒಂದು ವೇಳೆ ಅನಿಲ ನಾಯ್ಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಲ್ಲಿ -9482521189, 9945394602 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...