ರಕ್ತದ ಕಾನ್ಯರಿನಿಂದ ಬಳಲುತ್ತಿರುವ ಗೌರಿಗೆ ರೋಟರಿ ಕ್ಲಬ್ ನಿಂದ ರೂ:52 ಸಾವಿರ ನೆರವು
ದಾಂಡೇಲಿ : ರಕ್ತದ ಕ್ಯಾನ್ಸರಿನಿಂದ ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ನಗರದ ಟಿ.ಆರ್.ಟಿ ನಿವಾಸಿ, ಬಡ ಕೂಲಿ ಕಾರ್ಮಿಕ ಅನಿಲ ದತ್ತರಾಮ ನಾಯ್ಕ ಇವರ ಮಗಳು ಹಾಗೂ ಜೆವಿಡಿ ಇ.ಎಂ.ಎಸ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ಗೌರಿ ಈಕೆಗೆ ಚಿಕಿತ್ಸೆಗಾಗಿ ನಗರದ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರ ನೇತೃತ್ವದಲ್ಲಿ ರೋಟರಿ ಪದಾಧಿಕಾರಿಗಳು ಸೇರಿ ವೈಯಕ್ತಿಕವಾಗಿ ನೀಡಿದ ಒಟ್ಟು ರೂ: 52,000/- ಮೊತ್ತದ ಚೆಕನ್ನು ಗೌರಿಯ ಅತ್ತೆ ಸುಹಾಸಿನಿಯವರಿಗೆ ಸೋಮವಾರ ರೊಟರಿ ಶಾಲೆಯಲ್ಲಿ ಹಸ್ತಾಂತರಿಸಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರು ಗೌರಿ ಆದಷ್ಟು ಶೀಘ್ರ ಗುಣಮುಖವನ್ನು ಕಾಣಲಿ. ಗೌರಿಯ ಬಡತನ ಹಾಗೂ ಅನಾರೋಗ್ಯದ ಕುರಿತಂತೆ ರೋಟರಿ ಕ್ಲಬಿನ ಪದಾಧಿಕಾರಿಗಳಲ್ಲಿ ವಿಚಾರ ಹಂಚಿಕೊಂಡಾಗ ರೋಟರಿ ಕ್ಲಬಿನ ಪದಾಧಿಕಾರಿಗಳು ವೈಯಕ್ತಿಕವಾಗಿ ನೀಡಿದ ಹಣ ಒಟ್ಟು ರೂ: 52 ಸಾವಿರವನ್ನು ಚೆಕ್ ಮೂಲಕ ನೀಡುತ್ತಿದ್ದೇವೆ. ಭವಿಷ್ಯದ ಹೊಂಗನಸನ್ನು ಕಂಡ ಬಾಲೆ ಗೌರಿಗೆ ಭಗವಂತನ ಅನುಗ್ರಹವಿರಲಿ. ಇಂತಹ ಸಂದಿಗ್ದ ಸಂದರ್ಭದಲ್ಲಿ ಮಾನವೀಯ ಕಾರ್ಯಗಳು ನಡೆಯುವಂತಾಗಬೇಕು. ಆಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ರೋಟರಿ ಪದಾಧಿಕಾರಿಗಳ ಸೇವಾಕೈಂಕರ್ಯಕ್ಕೆ ಸುಹಾಸಿನಿ ಅವರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಎಸ್.ಸೋಮಕುಮಾರ್, ಖಜಾಂಚಿ ಅಶುತೋಷ್ ರಾಯ್, ರೋಟರಿ ಕ್ಲಬಿನ ಪದಾಧಿಕಾರಿಗಳಾದ ಎಚ್.ವೈ.ಮೆರ್ವಾಡೆ, ಅರುಣ್ ನಾಯ್ಕ, ರಾಜೇಶ ವೆಣರ್ೇಕರ, ಡಾ: ಅಸೀಫ್ ದಫೇದಾರ, ಸಂತೋಷ್ ಶೆಟ್ಟಿ, ಸುಧಾಕರ ಶೆಟ್ಟಿ, ರಾಹುಲ್ ಬಾವಾಜಿ, ಡಾ: ಅನುಪ್ ಮಾಡ್ದೊಳ್ಕರ, ಮಿಥುನ್ ನಾಯಕ ಹಾಗೂ ರೋಟರಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ರೋಟರಿ ಕ್ಲಬಿನ ಪದಾಧಿಕಾರಿಗಳ ಸೇವಾಕೈಂಕರ್ಯಕ್ಕೆ ಋಣಿಯಾಗಿದ್ದೇವೆ.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment