Saturday, January 26, 2019

ಜನವರಿ 27 ರಂದು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
ಘಟಾನುಗಳಿಗಳ ನಡುವೆ ಪೈಟ್-
ತೃತೀಯ ಬಹುಮಾನಕ್ಕಾಗಿ ಬಿರುಸಿನ ಸ್ಪರ್ಧೆ
ಈ ಪಂದ್ಯಾವಳಿಯನ್ನು ನೋಡುವುದೆ ಭಾಗ್ಯ-ಈ ಸೌಭಾಗ್ಯವನ್ನು ತಪ್ಪಿಸುವುದೇಕೆ ಅಲ್ವೆ.

ದಾಂಡೇಲಿಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ದಾಂಡೇಲಿ ಪ್ರೆಸ್ ಕ್ಲಬ್ಗಳ ನಡುವೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ಸ್ಥಳೀಯ ರೊಟರಿ ಕ್ಲಬ್ ಆಶ್ರಯದಡಿ ನಾಳೆ ಅಂದರೆ ಜನವರಿ 27 ರಂದು ಮುಂಜಾನೆ 9 ಗಂಟೆಯಿಂದ  ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ರೋಟರಿ ಕ್ಲಬ್ನ ಅಧ್ಯಕ್ಷ ಎಸ್. ಪ್ರಕಾಶ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಎನ್. ಮುನವಳ್ಳಿ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.

ಇದರ ಜೊತೆಗೆ ನನ್ನ ಮಾತು.
ಆತ್ಮೀಯ ಕ್ರೀಡಾಭಿಮಾನಿಗಳೆ, ಬಹಳ ಸ್ವಾರಸ್ವಕರ ಮತ್ತು ಅತ್ಯದ್ಬುತ ಮನೋರಂಜನೆಯನ್ನು ಕೊಡಲಿರುವ ಈ ಪಂದ್ಯಾಟವನ್ನು ವೀಕ್ಷಿಸಲು ಯಾರು ಮರೆಯದಿರಿ.

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಯುವರಾಜ ಸಿಂಗ್ ಅವರ ಆಟದ ವೈಖರಿ ನಾಳೆ ನಡೆಯುವ ಪಂದ್ಯಾವಳಿಯಲ್ಲಿ ಪ್ರಬುದ್ದ ಆಟಗಾರರಿಂದ ದೊರೆಯಲಿದೆ. ಲಯನ್ಸ್ ಕ್ಲಬಿನ ಅಧ್ಯಕ್ಷರು ಹಾಗೂ ಡೈನಮಿಕ್ ಬ್ಯಾಟ್ಸ್ ಮ್ಯಾನ್ ವೈ.ಎನ್.ಮುನವಳ್ಳಿಯವರು ಲಯನ್ಸ್ ಪರವಾಗಿ ಬ್ಯಾಟ್ ಬೀಸಿದರೇ, ಇತ್ತ ಪ್ರೆಸ್ ಕ್ಲಬ್ ಪರವಾಗಿ ಡ್ಯಾಶಿಂಗ್ ಬ್ಯಾಟ್ಸ್ ಮ್ಯಾನ್ ಯು.ಎಸ್.ಪಾಟೀಲ, ಹೊಡಿಬಡಿ ಆಟಗಾರರಾದ ಬಿ.ಎನ್.ವಾಸರೆ, ಬಿ.ಪಿ.ಮಹೇಂದ್ರಕುಮಾರ್, ಗುರುಶಾಂತ ಜಡೆಹಿರೇಮಠ ಅವರುಗಳ ಮನೋಜ್ಞ ಬ್ಯಾಟಿಂಗ್ ಹಾಗೂ ಕೃಷ್ಣಾ ಪಾಟೀಲ ಅವರ ವೇಗದ ಬೌಲಿಂಗ್ ನೋಡುಗರ ಮನ ಸೆಳೆಯಲಿದೆ. 
 
ಇನ್ನೊಂದು ಕಡೆ ತನ್ನ ತಂಡದಲ್ಲಿ ಹೆಚ್ಚಿನ ಸ್ಥಾನವನ್ನು 50 ವರ್ಷ ಮೇಲ್ಪಟ್ಟ ಹಿರಿಯ ರೋಟರಿ ಕ್ಲಬ್ ಸದಸ್ಯರುಗಳಿಗೆ ನೀಡುವುದರ ಮೂಲಕ ರೊಟರಿ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರ ತಂಡ ಗೆಲುವಿನ ತಂತ್ರಗಾರಿಕೆಯನ್ನು ಹೆಣೆದಿದೆ. ಅತ್ಯುತ್ತಮ ಕ್ಷೇತ್ರರಕ್ಷಕರಾಗಿ ಗಮನ ಸೆಳೆದ ಅಶುತೋಷ್ ರಾಯ್ ಅವರು ರೋಟರಿ ತಂಡದ ಪ್ರಮುಖ ಆಸ್ತಿಯಾಗಲಿದ್ದಾರೆ. ಮನಮೋಹಕವಾಗಿ ಸಿಕ್ಸರ್ ಸಿಡಿಸುವ ರಾಜೇಶ ತಿವಾರಿಯವರ ಬಲವಾದ ಹೊಡೆತ ನಾಳೆ ಪಂದ್ಯಾವಳಿಗೆ ರಂಗು ತರಲಿದೆ. ರಕ್ಷಣಾತ್ಮಕ ಆಟದ ಮೂಲಕ ಮೈದಾನಕ್ಕೆ ಎಸ್.ಪ್ರಕಾಶ ಶೆಟ್ಟಿ, ರಾಹುಲ್ ಬಾವಾಜಿ, ಡಾ: ಅನೂಪ್ ಮಾಡ್ದೊಳ್ಕರ ಇಳಿದರೇ, ಇತ್ತ ಸಿಡಿಲಮರಿಗಳಾದ ವಿಷ್ಣುಮೂರ್ತಿ ರಾವ್ ಮತ್ತು ಇಮಾಮ್ ಸರ್ವರ್ ನೋಡೆಬಿಡೋಣ ಎಂಬ ಕಾತುರತೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ ಬೆಸ್ಟ್ ಆಲ್ ರೌಂಡರ್ ಆಗಿ ವಿಜಯಕುಮಾರ್ ಶೆಟ್ಟಿ ಅಂಗಳಕ್ಕಳಿಯುವುದು ಬಹುತೇಕ ಖಚಿತ. ಲೆಗ್ ಸ್ಪಿನ್ನರ್ ಡಾ: ಧಪೇದಾರ್ ಹಾಗೂ ಜಬರ್ದಸ್ತು ಪ್ಲೇಯರ್ ರವಿಕುಮಾರ್.ಜಿ.ನಾಯಕ ಅವರು ಆಡಲೆಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. 
 
ಹಿರಿಯರಿಗೆ ಗೌರವ ಕೊಡಬೇಕೆಂಬ ದೃಷ್ಟಿಯಿಂದ ರೋಟರಿ ಕ್ಲಬಿನ ಅನಿಲ್ ಪಾಟ್ನೇಕರ್ ಮತ್ತು ಮಿಥುನ್ ನಾಯಕ ಅವರುಗಳು ತೀರ್ಪುಗಾರರಾಗಿ ಸಹಕರಿಸಲಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದೆ. ಒಟ್ಟಿನಲ್ಲಿ ಉತ್ಸಾಹಿ ತರುಣರಿದ್ದರೂ ಹಿರಿಯರಿಗೆ ಮಣೆ ಹಾಕಿದ ಎಸ್.ಪ್ರಕಾಶ ಶೆಟ್ಟಿಯವರ ಔದಾರ್ಯದ ಮನಸ್ಸಿಗೆ ಬಿಗ್ ಸೆಲ್ಯೂಟ್ ಹೇಳಲೆಬೇಕು.

ರೋಚಕ, ಸ್ಮರಣೀಯ, ಮಹೋನ್ನತ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನಕ್ಕಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ತೃತೀಯ ಸ್ಥಾನವನ್ನು ಗೆದ್ದವರೇ ನಾಳೆಯ ಪಂದ್ಯಾವಳಿಯ ನೈಜ ಹಿರೋ ಆಗಲಿದ್ದಾರೆ ಎನ್ನುವುದು ಗಮನಾರ್ಹ.

ಅದೇನೆ ಇರಲಿ ಗೆಲ್ಲುವರು ಮತ್ತು ಸೋಲುವವರು ನಮ್ಮವರೆ, ಈ ಪಂದ್ಯಾವಳಿಯನ್ನು ನೋಡಬರುವವರೆ ನಿಜವಾದ ಜಯಶೀಲರು.

ಬನ್ನಿ, ಪ್ಲೀಸ್ ಬನ್ನಿ.

ನಿಮ್ಮವ

ಸಂದೇಶ್.ಎಸ್.ಜೈನ್




 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...