Wednesday, January 30, 2019






ದಾಂಡೇಲಿ : ಹಳಿಯಾಳದ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಅರ್ಪಿಸುವ ಕುಂದಾಪುರದ ರೂಪಕಲಾ(ಕುಳ್ಳಪ್ಪು) ಇವರ ಸಹಯೋಗದೊಂದಿಗೆ ಅಂತಾಷ್ಟ್ರೀಯ ಖ್ಯಾತಿಯ ಮೂರುಮುತ್ತು ಕಲಾವಿದರಿಂದ ದಿ: ಕೆ.ಬಾಲಕೃಷ್ಣ ಪೈ ಯವರು ರಚಿಸಿದ ಕರಾವಳಿ ಮುತ್ತು ಖ್ಯಾತಿಯ  ಸತೀಶ ಶೆಟ್ಟಿಯವರ ನಿರ್ದೇಶನದಲ್ಲಿ ಹಾಸ್ಯಮಯ ಮೂರುಮುತ್ತು ಎಂಬ ನಗೆ ನಾಟಕವು ಉಚಿತವಾಗಿ ಫೆಬ್ರವರಿ: 03 ರಂದು ಭಾನುವಾರ ಸಂಜೆ 5.30 ಗಂಟೆಗೆ ಸರಿಯಾಗಿ ಕಾಗದ ಕಾರ್ಖಾನೆಯ ರಂಗನಾಥ ಸಭಾಭವನದಲ್ಲಿ ಜರಗಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ಮೂರುಮುತ್ತು ಕಲಾವಿದರುಗಳಿಂದ ಕೂಡಿದ ಹಾಸ್ಯಮಯ ನಗೆ ನಾಟಕವಾದ ಈ ನಾಟಕ ರಂಗಭೂಮಿಯ ಇತಿಹಾಸದಲ್ಲೆ ವಿಶಿಷಟ್ ದಾಖಲೆ ಬರೆಯುವದರ ಜೊತೆಗೆ 1400 ನೇ ಪ್ರಯೋಗವನ್ನು ಕಂಡಿದೆ. ಕರ್ನಾಟಕದೆಲ್ಲಡೆ ಪ್ರದರ್ಶನ ಕಂಡಿರುವುದಲ್ಲದೇ, ದೆಹಲಿ, ಮಹಾರಾಷ್ಟ್ರ, ಗುಜರಾತ್, ಗೋವಾ, ಕೇರಳ, ಆಂದ್ರಪ್ರದೇಶ, ತಮಿಳುನಾಡಿನಲ್ಲಿಯೂ ಯಶಸ್ವಿ ಪ್ರದರ್ಶನ ಕಂಡು, ದುಬೈ, ದೋಹಾ, ಕತರಾ, ಕುವೈತಿನಲ್ಲಿಯೂ ಅಮೋಘ ಪ್ರದರ್ಶನವನ್ನು ಕಂಡು ಅಲ್ಲಿಯ ಜನರಿಂದ ಭೇಷ್ ಎನಿಸಿಕೊಂಡಿದೆ.

ಕಲ್ಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಮಜಾಟಾಕೀಜ್ ನಲ್ಲೂ ಈ ನಾಟಕ ಪ್ರದರ್ಶನಗೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮನಮೋಹಕ ಪ್ರದರ್ಶನವನ್ನು ನೀಡಿದೆ.

ಮೊದಲ ಬಾರಿಗೆ ದಾಂಡೇಲಿಯಲ್ಲಿ ಉಚಿತವಾಗಿ ಪ್ರದರ್ಶನಗೊಳ್ಳುತ್ತಿರುವ ಅಮೋಘ ಮತ್ತು ನಗೆಗಡಲಲ್ಲಿ ತೇಲಾಡಿಸುವ ಮಹತ್ವದ ನಗೆನಾಟಕವನ್ನು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿ.ಆರ್.ಡಿ.ಎಂ ಟ್ರಸ್ಟ್ ಪ್ರಕಟಣೆಯಲ್ಲಿ ವಿನಂತಿಸಿದೆ.

ಬನ್ರೋಪ್ಪೋ, ಇಂಥಹ ವೈವಿಧ್ಯಮಯ, ಆಕರ್ಷಕ ನಾಟಕ ನಮ್ಮೂರಲ್ಲಿ, ನಮ್ಮೂರಲ್ಲಿ ನಡೆಯಲಿರುವ ಈ ನಾಟಕವನ್ನು ನಾವು ನೀವು ಕುಟುಂಬ ಸಮೇತರಾಗಿ ಆಗಮಿಸಿ, ನಾಟಕವನ್ನು ನೋಡಿ, ಹೊಟ್ಟೆತುಂಬ ನಕ್ಕು, ಕಲಾವಿದರುಗಳ ಕಲಾಸೇವೆಗೆ ಗೌರವವನ್ನು ಅರ್ಪಿಸೋಣ.

ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...